Subscribe to Gizbot

ಸ್ಯಾಮ್‌ಸಂಗ್‌ನೊಂದಿಗೆ ಕೈ ಜೋಡಿಸಿದ ವೊಡಾಫೋನ್: ವಿಶೇಷ ಆಫರ್-ಭರ್ಜರಿ ಕ್ಯಾಷ್ ಬ್ಯಾಕ್..!

Written By:

ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಮೇಲೆ ವೊಡಾಪೋನ್ ಭರ್ಜರಿ ಕ್ಯಾಷ್ ಬ್ಯಾಕ್ ಆಫರ್ ಅನ್ನು ನೀಡಲು ಮುಂದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ J ಸರಣಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ರೂ.1500 ಕ್ಯಾಷ್ ಬ್ಯಾಕ್‌ ಆಫರ್ ಅನ್ನು ನೀಡಲು ಮುಂದಾಗಿದೆ. ಈ ಮೂಲಕ ತನ್ನ ಬಳಕೆದಾರರ ಸಂಖ್ಯೆಯನ್ನು ಏರಿಕೆ ಮಾಡಿಕೊಳ್ಳಲು ಮುಂದಾಗಿದೆ.

ಸ್ಯಾಮ್‌ಸಂಗ್‌ನೊಂದಿಗೆ ಕೈ ಜೋಡಿಸಿದ ವೊಡಾಫೋನ್: ವಿಶೇಷ ಆಫರ್..!

ಓದಿರಿ: ಫ್ಲಿಪ್‌ಕಾರ್ಟ್‌ 2018ರ ಮೊದಲ ಸೇಲ್‌ನಲ್ಲಿ ರೂ.2018ಕ್ಕೆ 4G ಸ್ಮಾರ್ಟ್‌ಫೋನ್..!

ಈಗಾಗಲೇ ಮಾರುಕಟ್ಟೆಯಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ವಿವಿಧ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳೊಂದಿಗೆ ಪಾಲುದಾರಿಕೆಯನ್ನು ಹೊಂದುವ ಮೂಲಕ ಕ್ಯಾಷ್ ಬ್ಯಾಕ್, ಡೇಟಾ ಕೊಡುಗೆ ಸೇರಿದಂತೆ ವಿವಿಧ ಆಫರ್ ಗಳನ್ನು ನೀಡಲು ಮುಂದಾಗಿವೆ. ಇದೇ ಮಾದರಿಯಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್ ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯಾಷ್ ಬ್ಯಾಕ್ ಎಷ್ಟು..?

ಕ್ಯಾಷ್ ಬ್ಯಾಕ್ ಎಷ್ಟು..?

ಸ್ಯಾಮ್ ಸಂಗ್ ಗ್ಯಾಲೆಕ್ಸಿ J ಸರಣಿಯ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲೆಕ್ಸಿ J2 ಪ್ರೋ, ಗ್ಯಾಲೆಕ್ಸಿ J7 ನೆಕ್ಸ್ಟ್ ಮತ್ತು ಗ್ಯಾಲೆಕ್ಸಿ J7 ಮಾಕ್ಸ್ ಸ್ಮಾರ್ಟ್‌ಫೋನ್‌ಗಳ ಮೇಲೆ ವೋಡಾಫೋನ್ ರೂ.1500 ಕ್ಯಾಷ್ ಬ್ಯಾಕ್ ನೀಡಲಿದೆ ಎನ್ನಲಾಗಿದೆ.

ಕ್ಯಾಷ್ ಬ್ಯಾಕ್ ಪಡೆಯುವುದು ಹೇಗೆ..?

ಕ್ಯಾಷ್ ಬ್ಯಾಕ್ ಪಡೆಯುವುದು ಹೇಗೆ..?

ಸ್ಯಾಮ್ ಸಂಗ್ ಗ್ಯಾಲೆಕ್ಸಿ J ಸರಣಿಯ ಸ್ಮಾರ್ಟ್‌ಫೋನ್‌ನ್ನು ಖರೀದಿ ಮಾಡಿದವರು ವೊಡಾಪೋನ್ ಬಳಸುವುದಲ್ಲದೇ ರೂ.198 ಪ್ಲಾನ್ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ. ಅದುವೇ 24 ತಿಂಗಳು ಮಾಡಿಸಿಕೊಂಡರೆ ಮಾತ್ರ ಕ್ಯಾಷ್ ಬ್ಯಾಕ್ ಆಫರ್ ದೊರೆಯಲಿದೆ.

How to Sharing a Mobile Data Connection with Your PC (KANNADA)
ಹೇಗೆ ಲಾಭ:

ಹೇಗೆ ಲಾಭ:

ಪ್ರತಿ ತಿಂಗಳು ರೂ. 198ಕ್ಕೆ ರಿಚಾರ್ಜ್ ಮಾಡಿಸಿಕೊಂಡರೆ 12 ತಿಂಗಳ ನಂತರ ರೂ.600 ಕ್ಯಾಷ್ ಬ್ಯಾಕ್ ಬರಲಿದೆ. ಇದಾದ ನಂತರ 24 ತಿಂಗಳಾದ ಮೇಲೆ ರೂ.900 ಕ್ಯಾಷ್ ಬ್ಯಾಕ್ ಬರಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Vodafone Offers Rs. 1,500 Cashback On Samsung Galaxy J Series. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot