ವಾಟ್ಸ್‌ಆಪ್: ಇನ್ನಷ್ಟು ಜನರನ್ನು ಸೆಳೆಯಲು ಮಾಡುತ್ತಿರುವ ಹೊಸ ಪ್ರಯತ್ನ ಇದು..!
ಫೇಸ್‌ಬುಕ್ ಒಡೆತನಕ್ಕೆ ಸೇರಿಕೊಂಡ ವಾಟ್ಸ್‌ಆಪ್ ದಿನಕ್ಕೊಂದು ಹೊಸ ಆಯ್ಕೆಯನ್ನು ಮೈಗೂಡಿಸಿಕೊಳ್ಳುತ್ತಿದೆ. ಈಗಾಗಲೇ ವಿಶ್ವದ ಅತೀ ಜನಪ್ರಿಯ ಆಪ್‌ಗಳಲ್ಲಿ ಮೊದಲನೇ ಸ್ಥಾನದಲ್ಲಿರುವ ವಾಟ್ಸ್‌ಆಪ್ ಹೊಸ ಮಾದರಿಯ ಆಯ್ಕೆಗಳನ್ನು ಸದ್ಯ ಬಿಟಾ ಬಳಕೆದಾರರಿಗೆ ನೀಡಲು ಮುಂದಾಗಿದೆ. ಶೀಘ್ರವೇ ಸಾಮಾನ್ಯ ಬಳಕೆದಾರರಿಗೆಗೂ ಇದು ದೊರೆಯಲಿದೆ.

ಓದಿರಿ: ದಿನಕ್ಕೆ 1GB ಸಾಲುತ್ತಿಲ್ಲವೇ? ಏರ್‌ಟೆಲ್ ಹಾಗೂ ಜಿಯೋದಿಂದ ಪ್ರತಿನಿತ್ಯ 3.5 GB ಡೇಟಾ: ಪಡೆಯವುದು ಹೇಗೆ?
ಪ್ರೈವೆಟ್ ರಿಪ್ಲೇ ಮತ್ತು ಪಿಚ್ಚರ್ ಇನ್ ಪಿಚ್ಚರ್ ಸೇರಿದಂತೆ ಹಲವು ಆಯ್ಕೆಗಳು ಈ ಹೊಸ ಆಪ್‌ಡೇಟ್ ನಲ್ಲಿ ವಾಟ್ಸ್‌ಆಪ್ ನೀಡುತ್ತಿದೆ. ಈ ಹೊಸ ಆವೃತ್ತಿಯೂ 2.12.424 ಯಲ್ಲಿ ಅನೇಕ ಹೊಸ ಆಯ್ಕೆಗಳನ್ನು ಕಾಣಿಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಹೊಸ ಆವೃತ್ತಿಯಲ್ಲಿ ಕಾಣಿಸಿಕೊಂಡಿರುವ ಅಂಶಗಳ ಮಾಹಿತಿ ಇಲ್ಲಿದೆ.

ಪ್ರೈವೆಟ್ ರಿಪ್ಲೇ ಇನ್ ಗ್ರೂಪ್:
ಈ ಬಾರಿ ಹೊಸ ಆಯ್ಕೆಗಳಲ್ಲಿ ಗಮನ ಸೆಳೆಯುತ್ತಿರುವುದು ಗ್ರೂಪ್‌ನಲ್ಲಿ ಪ್ರೈವೆಟ್ ರಿಪ್ಲೇ ಮಾಡುವ ಅವಕಾಶವನ್ನು ಮಾಡಿಕೊಡಲಾಗುತ್ತಿರುವುದು. ಈ ಆಯ್ಕೆಗಳಲ್ಲಿ ಗ್ರೂಪ್ ಮೇಸೆಜ್‌ಗಳಲ್ಲಿ ಯಾವುದಾರರು ಸದಸ್ಯರಿಗೇ ಯಾರಿಗೂ ತಿಳಿಯದ ರೀತಿಯಲ್ಲಿ ಮೇಸೆಜ್ ಮಾಡಬಹುದಾಗಿದೆ. ನೀವು ಕಳುಹಿಸುವ ಮೇಸೆಜ್ ಗ್ರೂಪ್ ಚಾಟ್‌ನಲ್ಲಿರುವ ಮತ್ತೀತರರಿಗೆ ತಿಳಿಯುವುದಿಲ್ಲ ಎನ್ನಲಾಗಿದೆ.

ಪಿಚ್ಚರ್ ಇನ್ ಪಿಚ್ಚರ್:
ಇದಲ್ಲದೇ ಪಿಚ್ಚರ್ ಇನ್ ಪಿಚ್ಚರ್ ಆಯ್ಕೆಯನ್ನು ಈ ಹೊಸ ಆಪ್‌ಡೇಟ್‌ನಲ್ಲಿ ಕಾಣಬಹುದಾಗಿದೆ. ಈ ಆಯ್ಕೆಯಲ್ಲಿ ವಿಡಿಯೋ ಕಾಲಿನಲ್ಲಿ ಜೊತೆ ಜೊತೆಗೆ ಚಾಟಿಂಗ್ ಮಾಡಬಹುದಾಗಿದೆ. ಅಲ್ಲದೇ ಪಿಚ್ಚರ್ ಸೈಜ್ ಅನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಜೊತೆಗೆ ಇದು ಗ್ರಾಹಕರಿಗೆ ಅನುಭವನ್ನು ನೀಡಲಿದೆ.

ಆನ್‌ಬ್ಲಾಕ್ ಯೂಸಿರ್:
ಇದಲ್ಲದೇ ವಾಟ್ಸ್‌ಆಪ್ ಒಂದೇ ಟಿಪ್‌ನಲ್ಲಿ ಬ್ಲಾಕ್ ಮಾಡಿದ ವ್ಯಕ್ತಿಯನ್ನು ಒಂದೇ ಟಿಪ್‌ನಲ್ಲಿ ಆನ್‌ಬ್ಲಾಕ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ. ಇದೊಂದು ಹೊಸ ಆಯ್ಕೆಯಾಗಲಿದೆ.

ಗ್ರೂಪ್ ಲಿಂಕ್:
ಗ್ರೂಪ್ ಆಡ್ಮಿನ್‌ಗಳು ತಮ್ಮ ಗ್ರೂಪ್‌ಗೇ ಸೇರಿಕೊಳ್ಳಂತೆ ಬೇರೆ ಬೇರೆ ಸದಸ್ಯರಿಗೆ ಡೆರೆಕ್ಟ್ ಆಗಿ ಗ್ರೂಪ್ ಲಿಂಕ್ ಅನ್ನು ಕಳುಹಿಸಬಹುದಾಗಿದೆ. ಇದು ಗ್ರೂಪ್ ಸದಸ್ಯರನ್ನು ಹೆಚ್ಚಿಸಿಕೊಳ್ಳಲು ಉತ್ತಮ ಆಯ್ಕೆಯಾಗಲಿದೆ.

ಆಡ್ಮಿನ್ ಸೆಟ್ಟಿಂಗ್:
ಇದಲ್ಲದೇ ಗ್ರೂಪ್ ಆಡ್ಮಿನ್‌ಗಳು ತಮಗೆ ಬೇಕಾದ ಮಾದರಿಯಲ್ಲಿ ಗ್ರೂಪ್ ಮಾಹಿತಿಗಳನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡುತ್ತಿದೆ. ಇದರಿಂದಾಗಿ ಗ್ರೂಪ್ ಮೇಲೆ ಆಡ್ಮಿನ್‌ಗಳ ಹಿಡಿತ ಹೆಚ್ಚಾಗಲಿದೆ.


Click it and Unblock the Notifications