Subscribe to Gizbot

ದಿನಕ್ಕೆ 1GB ಸಾಲುತ್ತಿಲ್ಲವೇ? ಏರ್‌ಟೆಲ್‌ ಹಾಗೂ ಜಿಯೋದಿಂದ ಪ್ರತಿನಿತ್ಯ 3.5 GB ಡೇಟಾ: ಪಡೆಯವುದು ಹೇಗೆ?

Written By:

ದೇಶಿಯ ಟೆಲಿಕಾಂ ವಲಯದಲ್ಲಿ ಭರ್ಜರಿ ಸ್ಪರ್ಧೆಯನ್ನು ಕಾಣಬಹುದಾಗಿದ್ದು, ಜಿದ್ದಿಗೆ ಬಿದ್ದಿರುವ ಏರ್‌ಟೆಲ್‌ ಹಾಗೂ ಜಿಯೋ ತಮ್ಮ ತಮ್ಮ ಬಳಕೆದಾರರಿಗೆ ಡೇಟಾವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತಿವೆ, ಆದರೆ ಬಳಕೆದಾರರ ಪ್ರತಿ ನಿತ್ಯದ ಡೇಟಾ ಹಸಿವು ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಏರ್‌ಟೆಲ್ ಹಾಗೂ ಜಿಯೋ ಬಳಕೆದಾರರು ಪ್ರತಿ ನಿತ್ಯ 3.5 GB ಡೇಟಾವನ್ನು ನೀಡಲು ಮುಂದಾಗಿವೆ.

ಏರ್‌ಟೆಲ್‌ ಹಾಗೂ ಜಿಯೋದಿಂದ ಪ್ರತಿನಿತ್ಯ 3.5 GB 4G ಡೇಟಾ: ಪಡೆಯವುದು ಹೇಗೆ..?

ಓದಿರಿ: ಜಿಯೋದಲ್ಲಿ ಎಂದಿಗೂ ಈ ಮಾದರಿ ಆಫರ್ ಸಾಧ್ಯವಿಲ್ಲ: ಏರ್‌ಟೆಲ್‌ನಲ್ಲಿದೇ ಅತೀ ಕಡಿಮೆ ದರದ ಆಫರ್...!

ತಮ್ಮ ಬಳಕೆದಾರರಿಗೆ ಹೆಚ್ಚಿನ ಡೇಟಾ ಬಳಕೆಗೆ ಅವಶ್ಯವಿರುವುದನ್ನು ತಿಳಿದುಕೊಂಡಿರುವ ಏರ್‌ಟೆಲ್‌ ಹಾಗೂ ಜಿಯೋ, ಇದಕ್ಕಾಗಿಯೇ ಪ್ರತಿ ನಿತ್ಯ ಹೆಚ್ಚಿನ ಡೇಟಾವನ್ನು ಬಳಕೆ ನೀಡುವ ಸಲುವಾಗಿ ತಮ್ಮ ಪ್ಲಾನ್‌ಗಳಲ್ಲಿ ಬದಲಾವಣೆ ಮಾಡಿಕೊಂಡಿವೆ. ಈ ಹಿನ್ನಲೆಯಲ್ಲಿ ಜಿಯೋ ಮತ್ತು ಏರ್‌ಟೆಲ್‌ನಲ್ಲಿರುವ ಹೊಸ ಡೇಟಾ ಪ್ಲಾನ್‌ಗಳ ಕುರಿತ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್‌ನಿಂದ ಎರಡು-ಜಿಯೋದಲ್ಲಿ ಒಂದು:

ಏರ್‌ಟೆಲ್‌ನಿಂದ ಎರಡು-ಜಿಯೋದಲ್ಲಿ ಒಂದು:

ಬಳಕೆದಾರರಿಗೆ ಹೆಚ್ಚಿನ ಡೇಟಾವನ್ನು ನೀಡುತ್ತಿರುವ ಜಿಯೋ ಮತ್ತು ಏರ್‌ಟೆಲ್ ಒಂದಕ್ಕೊಂದು ಈ ವಿಚಾರದಲ್ಲಿಯೂ ಸ್ಪರ್ಧೆಯನ್ನು ನಡೆಸುತ್ತಿವೆ. ಏರ್‌ಟೆಲ್ ಅತೀ ಹೆಚ್ಚಿನ ಡೇಟಾ ನೀಡುವ ಎರಡು ಪ್ಲಾನ್‌ ಘೋಷಣೆ ಮಾಡಿದರೆ ಜಿಯೋ ಒಂದು ಪ್ಲಾನ್ ಘೋಷಣೆ ಮಾಡಿದೆ. ಅವುಗಳ ಕುರಿತ ಮಾಹಿತಿ ಇಲ್ಲಿದೆ.

ಏರ್‌ಟೆಲ್ ರೂ. 549 ಪ್ಲಾನ್:

ಏರ್‌ಟೆಲ್ ರೂ. 549 ಪ್ಲಾನ್:

ಎರ್‌ಟೆಲ್‌ ಪ್ರಿಪೇಯ್ಡ್ ಬಳಕೆದಾರರಿಗೆ ಈ ಆಪರ್ ಲಭ್ಯವಿದ್ದು, ಇದರಲ್ಲಿ ಬಳಕೆದಾರರು ರೂ. 549ಕ್ಕೆ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ. ಪ್ರತಿ ನಿತ್ಯ 3GB GB 3G/4G ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. 28 ದಿನಗಳ ವ್ಯಾಲಿಟಿಡಿಯನ್ನು ಪಡೆದುಕೊಳ್ಳಲಿದ್ದಾರೆ. ಉಚಿತ ಕರೆ ಮಾಡುವ ಅವಕಾಶವನ್ನು ಈ ಪ್ಲಾನ್‌ನಲ್ಲಿ ನೀಡಲಾಗಿದೆ.

ಏರ್‌ಟೆಲ್ ರೂ. 799 ಪ್ಲಾನ್:

ಏರ್‌ಟೆಲ್ ರೂ. 799 ಪ್ಲಾನ್:

ಇದು ಸಹ ಏರ್‌ಟೆಲ್‌ ಪ್ರೀಪೇಯ್ಡ್‌ ಬಳಕೆದಾರರಿಗೆ ಮಾತ್ರವೇ ದೊರೆಯಲಿದ್ದು, ಇದರಲ್ಲಿ ಪ್ರತಿ ನಿತ್ಯ 3.5 GB GB 3G/4G ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಬಳಕೆದಾರರು ರೂ. 799 ಕ್ಕೆ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಿದ್ದು, 28 ದಿನಗಳ ವ್ಯಾಲಿಟಿಡಿಯನ್ನು ಪಡೆದುಕೊಳ್ಳಲಿದ್ದಾರೆ. ಉಚಿತ ಕರೆ ಮಾಡುವ ಅವಕಾಶವನ್ನು ನೀಡಲಾಗಿದೆ.

ಜಿಯೋ ರೂ. 799 ಪ್ಲಾನ್:

ಜಿಯೋ ರೂ. 799 ಪ್ಲಾನ್:

ಏರ್‌ಟೆಲ್‌ ಗಿಂತಲೂ ಭಿನ್ನವಾದ ಆಫರ್ ಅನ್ನು ಜಿಯೋ ನೀಡುತ್ತಿದ್ದು, ಇದರಲ್ಲಿ ಗ್ರಾಹಕರು ಪ್ರತಿ ನಿತ್ಯ 3 GB ಹೈಸ್ಪೀಡ್‌ ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದ್ದು, ಅದು ಮುಗಿದ ನಂತರ ಕಡಿಮೆ ವೇಗದ ಆನ್‌ಲಿಮಿಟೇಡ್ ಡೇಟಾವನ್ನು ಬಳಕೆಗ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಉಚಿತ ಕರೆ ಮಾಡುವ ಅವಕಾಶವನ್ನು ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How To Avail 3GB, 3.5GB Airtel, Jio Data Per Day For 28 Days. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot