ಸ್ಮಾರ್ಟ್‌ಫೋನ್ ಕಳೆದು ಹೋದಾಗ 'ವಾಟ್ಸಪ್' ಚಾಟ್‌ ಸುರಕ್ಷಿತವಾಗಿ ಉಳಿಸುವುದು ಹೇಗೆ ಗೊತ್ತಾ.!?

|

ಅತೀ ಜನಪ್ರಿಯ ಮೆಸೆಜ್ ಆಪ್ 'ವಾಟ್ಸಪ್' ತನ್ನ ಅತ್ಯುತ್ತಮ ಫೀಚರ್ಸ್‌ಗಳಿಂದಾಗಿ ಬಳಕೆದಾರ ಸ್ಮಾರ್ಟ್‌ಫೋನ್‌ನಲ್ಲಿ ಸ್ಥಾನ ಪಡೆದಿದೆ. ಹೀಗಾಗಿ ಬಳಕೆದಾರರರು ತಮ್ಮ ಬಹುತೇಕ ಪ್ರಮುಖ ಕೆಲಸಗಳನ್ನು ವಾಟ್ಸಪ್‌ ಮೂಲಕವೇ ನಡೆಸುತ್ತಿದ್ದಾರೆ. ಆದರೆ ಒಂದು ವೇಳೆ ಆಕಸ್ಮಿಕವಾಗಿ ಸ್ಮಾರ್ಟ್‌ಫೋನ್ ಕಳೆದು ಹೋದರೆ ಪ್ರಮುಖ ಚಾಟ್‌ ಮಾಹಿತಿಗಳನ್ನು ಮಿಸ್‌ ಆದಂತೇನಾ? ಮರಳಿ ಪಡೆಯಲು ಸಾಧ್ಯವೇ? ಎಂಬ ಪ್ರಶ್ನೇ ಬಳಕೆದಾರರಲ್ಲಿ ಮೂಡಿರದೇ ಇರದು.

ಫೋನ್ ಕಳೆದು ಹೋದಾಗ 'ವಾಟ್ಸಪ್' ಚಾಟ್‌ ಸುರಕ್ಷಿತವಾಗಿ ಉಳಿಸುವುದು ಹೇಗೆ ಗೊತ್ತಾ.!?

ಹೌದು, ಸ್ಮಾರ್ಟ್‌ಫೋನ್ ಕಳೆದು ಹೋದರು ವಾಟ್ಸಪ್ ಚಾಟ್‌ ಅನ್ನು ಮರಳಿ ಪಡೆಯಲು ಖಂಡಿತಾ ಸಾಧ್ಯವಿದ್ದು, ಜೊತೆಗೆ ವಾಟ್ಸಪ್ ಚಾಟ್‌ ಅನ್ನು ಸುರಕ್ಷಿತವಾಗಿಯು ಇರಿಸಬಹುದಾಗಿದೆ. ಅದಕ್ಕಾಗಿ ನೀವು ಕೆಲವು ಹಂತಗಳನ್ನು ಅನುಸರಿಸುವ ಮೂಲಕ ಈ ಕೆಲಸವನ್ನು ಸಾಧಿಸಬಹುದಾಗಿದೆ. ಹಾಗಾದರೇ ಸ್ಮಾರ್ಟ್‌ಫೋನ್ ಕಳೆದು ಹೋದರೆ ಚಾಟ್ಸ್‌ಗಳನ್ನು ಹೇಗೆ ಸುರಕ್ಷಿತವಾಗಿಡಬಹುದು ಮತ್ತು ಮರಳಿ ಪಡೆಯುವುದು ಹೇಗೆ ಎಂಬುದನ್ನು ನೋಡೋಣ ಬನ್ನಿರಿ.

 ಸಿಮ್‌ ಲಾಕ್‌ ಮಾಡಿಸಿ.

ಸಿಮ್‌ ಲಾಕ್‌ ಮಾಡಿಸಿ.

ಸ್ಮಾರ್ಟ್‌ಫೋನ್ ಕಳೆದುಕೊಂಡ ನಂತರ ಮೊದಲು ನಿಮ್ಮ ಸಿಮ್ ಅನ್ನು ಲಾಕ್ ಮಾಡಿಸಿರಿ ಇದರಿಂದ ನಿಮ್ಮ ನೆಟ್‌ವರ್ಕ್ ನಿಷ್ಕ್ರಿಯವಾಗಲಿದ್ದು, ಯಾರು ಕೂಡಾ ನಿಮ್ಮ ವಾಟ್ಸಪ್ ಅನ್ನು ತೆರೆಯಲು ಬರುವುದಿಲ್ಲ. ಒಂದು ವೇಳೆ ಅವರು ತೆರೆಯಲು ಪ್ರಯತ್ನಿಸಿದರೂ ಅದು ಕರೆ ಅಥವಾ ಎಸ್‌ಎಮ್‌ಎಸ್‌ ಮೂಲಕ ದೃಢಿಕರಣ ಕೇಳುತ್ತದೆ.

ಹೊಸ ವಾಟ್ಸಪ್ ಖಾತೆ

ಹೊಸ ವಾಟ್ಸಪ್ ಖಾತೆ

ಒಂದು ನಂಬರ ನಿಂದ, ಒಂದೇ ವಾಟ್ಸಪ್ ತೆರೆಯಲು ಅನುಮತಿ ಇದ್ದು, ಹೀಗಾಗಿ ನೀವು ಅದೇ ಮೊದಲಿನ ಸಿಮ್ ನಂಬರ ಬಳಸಿ ಮತ್ತೊಂದು ವಾಟ್ಸಪ್ ಖಾತೆ ತೆರೆಯಿರಿ. ಇದರಿಂದ ನಿಮ್ಮ ವಾಟ್ಸಪ್ ಖಾತೆ ದುರ್ಬಳಿಕೆ ಆಗುವುದನ್ನು ತಡೆಯಬಹುದಾಗಿದೆ. ಮರಳಿ ತೆರೆದ ಅಕೌಂಟ್ ನಿಂದ ನಿಮ್ಮ ಚಾಟ್ಸ್ ಬ್ಯಾಕ್ಅಪ್ ಪಡೆಯುವ ಅವಕಾಶವಿದೆ.

ವಾಟ್ಸಪ್ ಗೆ ಮೇಲ್ ಮಾಡಿ

ವಾಟ್ಸಪ್ ಗೆ ಮೇಲ್ ಮಾಡಿ

ಒಂದು ವೇಳೆ ಹೊಸ ಸಿಮ್ ಖರೀದಿಸುವುದು ಬೇಡವಾಗಿದ್ದರೆ ನೀವು ವಾಟ್ಸಪ್‌ ಮೇಲ್ ಐಡಿಗೆ ನಿಮ್ಮ ಸ್ಮಾರ್ಟ್‌ಫೋನ್ ಕಳೆದು ಹೋಗಿರುವ ಬಗ್ಗೆ ಮಾಹಿತಿ ನೀಡಿ. ನನ್ನ ವಾಟ್ಸಪ್ ಖಾತೆಯನ್ನು ನಿಷ್ಕ್ರಿಯ ಮಾಡಿ ಎಂದು ಮೇಲ್ ಮಾಡುವ ಮೂಲಕ ನಿಮ್ಮ ಖಾತೆಯನ್ನು ಡಿಆಕ್ಟಿವ್ ಮಾಡಬಹುದು. (ವಾಟ್ಸಪ್ ID: [email protected])

ಬ್ಯಾಕ್‌ಅಪ್‌ ಸ್ಟೋರೆಜ್

ಬ್ಯಾಕ್‌ಅಪ್‌ ಸ್ಟೋರೆಜ್

ಗೂಗಲ್ ಡ್ರೈವ್, ಐಕ್ಲೌಡ್‌, ಅಥವಾ ಒನ್‌ಡ್ರೈವ್ ಆನ್‌ಲೈನ್ ಸಂಗ್ರಹಗಳಿಂದ ನಿಮ್ಮ ಚಾಟ್‌ ಅನ್ನು ರೀಸ್ಟೋರ್ ಮಾಡಿಕೊಳ್ಳಲು ಅವಕಾಶವಿದೆ. ವಾಟ್ಸಪ್ ಚಾಟ್ ಗೂಗಲ್ ಡ್ರೈವ್ ಸೇರಿದಂತೆ ಪ್ರಮುಖ ಆನ್‌ಲೈನ್ ಸ್ಟೋರೆಜ್‌ಗಳಲ್ಲಿ ಬ್ಯಾಕ್‌ಅಪ್‌ ಮಾಡಿಕೊಳ್ಳಲು ಆಯ್ಕೆಗಳಿದ್ದು, ನಿಮ್ಮ ಚಾಟ್ ಬ್ಯಾಕ್‌ಅಪ್‌ ಮಾಡಿಕೊಳ್ಳುತ್ತಿದ್ದರೆ ಉತ್ತಮ.

ಗಮನಿಸಿ!

ಗಮನಿಸಿ!

ಸಿಮ್ ಬ್ಲಾಕ್ ಮಾಡಿಸಿದಾಗ ಸಿಮ್ ನೆಟವರ್ಕ್ ಇರುವುದಿಲ್ಲ, ವೈಫೈ ಬಳಸಿ ವಾಟ್ಸಪ್ ಬಳಕೆಮಾಡಬಹುದಾಗಿದ್ದು, 30 ದಿನಗಳಲ್ಲಿ ಮರಳಿ ಅಕೌಂಟ್ ತೆರೆಯದಿದ್ದರೆ ಆಟೋಮ್ಯಾಟಿಕ್ ಆಗಿ ನಿಮ್ಮ ಖಾತೆ ನಿಷ್ಕ್ರಿಯವಾಗುವುದು. ಆನಂತರ ಮರಳಿ ಚಾಟ್ಸ್ ಪಡೆಯಲು ಅಸಾಧ್ಯವಾಗಿದೆ.

Best Mobiles in India

English summary
this How-to we tell you how to keep your chats, messages safe in case you lose your smartphone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X