ಟಿಕ್‌ ಟಾಕ್ ಮೇಲೆ ಹೇರಿದ್ದ ನಿಷೇಧ ತೆರವು!..ಆದರೆ?

|

ಟಿಕ್‌ ಟಾಕ್ ಮೊಬೈಲ್‌ ವೀಡಿಯೋ ಆಪ್‌ ಬಳಕೆದಾರರಿಗೆ ಇಸು ಸಿಹಿ ಸುದ್ದಿಯಾಗಿದ್ದು, ಚೀನಾ ಮೂಲದ ವೀಡಿಯೋ ಆಪ್‌ ಟಿಕ್‌ ಟಾಕ್ ಮೇಲೆ ಹೇರಿದ್ದ ನಿಷೇಧವನ್ನು ಮದ್ರಾಸ್‌ ಹೈಕೋರ್ಟ್‌ ತೆರವುಗೊಳಿಸಿದೆ. ನಿಷೇಧ ಹೇರುವುದರಿಂದ ಎಲ್ಲ ಸಮಸ್ಯೆಯನ್ನೂ ಬಗೆಹರಿಸಲು ಸಾಧ್ಯವಿಲ್ಲ. ಕಾನೂನಿನಲ್ಲಿರುವ ಎಲ್ಲ ಹಕ್ಕುಗಳನ್ನು ರಕ್ಷಿಸಲಾಗುವುದು ಎಂದು ಟಿಕ್‌ ಟಾಕ್ ಪರ ವಕೀಲರು ವಾದಿಸಿದ್ದರಿಂದ ಕೆಲವು ಷರತ್ತುಗಳನ್ನು ವಿಧಿಸಿ ನಿಷೇಧ ತೆರವುಗೊಳಿಸಲಾಗಿದೆ.

ಟಿಕ್‌ ಟಾಕ್ ಆಪ್ ಅನ್ನು ಮದ್ರಾಸ್ ಹೈಕೋರ್ಟ್ ನಿಷೇಧಿಸಿದ ನಂತರ, ಟಿಕ್‌ ಟಾಕ್ ಒಡೆತನದ ಬೈಟ್‌ಡ್ಯಾನ್ಸ್ ಕಂಪೆನಿ ಈ ಬಗ್ಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮದ್ರಾಸ್ ಹೈಕೋರ್ಟ್ ನಿಷೇಧ ಆದೇಶಕ್ಕೆ ತಡೆನೀಡಿರಲಿಲ್ಲ. ಬದಲಾಗಿ ಇದೇ 24ರ ಒಳಗಾಗಿ ಈ ಬಗ್ಗೆ ಅರ್ಜಿ ಇತ್ಯರ್ಥಪಡಿಸುವಂತೆ ಸೂಚಿಸಿ ಮದ್ರಾಸ್ ಹೈಕೋರ್ಟ್‌ಗೆ ನಿರ್ದೇಶನ ನೀಡಿ ಮತ್ತೆ ಹೈಕೋರ್ಟ್ ಅಂಗಳಕ್ಕೆ ಚೆಂಡನ್ನು ಎಸೆಯಿತು.

ಟಿಕ್‌ ಟಾಕ್ ಮೇಲೆ ಹೇರಿದ್ದ ನಿಷೇಧ ತೆರವು!..ಆದರೆ?

ಇದೇ 24ರ ಒಳಗಾಗಿ ಈ ಬಗ್ಗೆ ಅರ್ಜಿ ಇತ್ಯರ್ಥಪಡಿಸದಿದ್ದರೆ ಆಪ್ ಮೇಲಿನ ನಿಷೇಧ ತೆರವುಗೊಳ್ಳುತ್ತದೆ ಎಂಬುದನ್ನು ಸಹ ಸೂಚಿಸಿದ್ದ ಸುಪ್ರೀಂ ನಿರ್ದೇಶನವನ್ನು ಪಡೆದ ಮದ್ರಾಸ್‌ ಹೈಕೋರ್ಟ್‌ ನೆನ್ನೆ ಪ್ರಕರಣದ ವಿಚಾರಣೆಯನ್ನು ನಡೆಸಿದೆ. ಟಿಕ್‌ಟಾಕ್ ಆಪ್‌ನಲ್ಲಿ ಕೆಲವು ನಿಯಂತ್ರಣ ಹೇರುವುದಾಗಿ ಚೀನಾ ಮೂಲಕ ಮಾತೃ ಕಂಪನಿ ಬೈಟ್‌ಡ್ಯಾನ್ಸ್ ಸ್ಪಷ್ಟಪಡಿಸಿದ ನಂತರ ಕೆಲವು ಷರತ್ತುಗಳನ್ನು ವಿಧಿಸಿ ನಿಷೇಧ ತೆರವುಗೊಳಿಸಲಾಗಿದೆ.

ಅಲ್ಲದೇ ನಿಷೇಧ ಹೇರುವುದರಿಂದ ಎಲ್ಲ ಸಮಸ್ಯೆಯನ್ನೂ ಬಗೆಹರಿಸಲು ಸಾಧ್ಯವಿಲ್ಲ. ಕಾನೂನಿನಲ್ಲಿರುವ ಎಲ್ಲ ಹಕ್ಕುಗಳನ್ನು ರಕ್ಷಿಸಲಾಗುವುದು ಎಂದು ಟಿಕ್‌ ಟಾಕ್ ಪರ ವಕೀಲರು ವಾದ ಮಂಡಿಸಿದ್ದು, ಇದಕ್ಕೆ ಕೋರ್ಟ್ ಕೂಡ ಸಮ್ಮತಿಸಿದೆ ಎನ್ನಲಾಗಿದೆ. ಆದರೆ, ಟಿಕ್‌ಟಾಕ್ ಸೇರಿದಂತೆ ದೇಶದ ಯಾವುದೇ ಸಂಸ್ಥೆಯು ಅಶ್ಲೀಲತೆಯನ್ನು ನಿಯಂತ್ರಿಸುವ ಸಂಬಂಧ ಕೆಲವು ನಿಯಂತ್ರಣ ಹೇರಬೇಕೆಂದು ಸೂಚಿಸಲಾಗಿದೆ ಎಂದು ಹೇಳಲಾಗಿದೆ.

ಟಿಕ್‌ ಟಾಕ್ ಮೇಲೆ ಹೇರಿದ್ದ ನಿಷೇಧ ತೆರವು!..ಆದರೆ?

ಭಾರತದಲ್ಲಿ ತನ್ನ​ ಟಿಕ್​ಟಾಕ್​ ಆಪ್​ ಅನ್ನು ನಿಷೇಧಗೊಳಿಸಲು ಮುಂದಾಗಿರುವುದರಿಂದ ಆಪ್​ ಬಳಕೆದಾರರ ಸಂಖ್ಯೆ ಕಡಿಮೆಯಾಗಿದೆ ಮತ್ತು ಕಂಪೆನಿಗೆ ಪ್ರತಿದಿನ 3.5 ಕೋಟಿ ರೂ.ನಷ್ಟು ನಷ್ಟವಾಗಿದೆ ಎಂದು ಟಿಕ್​ಟಾಕ್ ಮಾಲಿಕತ್ವದ ಬೈಟ್​​​​ಡ್ಯಾನ್ಸ್​ ಸಂಸ್ಥೆ ಇತ್ತೀಚಿಗಷ್ಟೇ ಮಾಹಿತಿ ನೀಡಿತ್ತು. ಜೊತೆಗೆ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸುತ್ತಿರುವ 250 ಹುದ್ದೆಗಳಿಗೆ ನಿಷೇಧದಿಂದ ಸಾಕಷ್ಟು​ ತೊಂದರೆಯಾಗಿದೆ ಎಂದು ಹೇಳಿ ಕೋರ್ಟ್ ಗಮನಸೆಳೆದಿತ್ತು.

ಓದಿರಿ: ಟೈಮ್‌ಪಾಸ್ ಮಾಡಲು ಫೋನ್ ಹಿಡಿಯುವವರಿಗೆ ಸಾಮರ್ಥ್ಯವೇ ಇಲ್ಲವಂತೆ!!

Best Mobiles in India

English summary
No obscene videos: Madras HC lifts ban on TikTok with condition. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X