ಟೈಮ್‌ಪಾಸ್ ಮಾಡಲು ಫೋನ್ ಹಿಡಿಯುವವರಿಗೆ ಸಾಮರ್ಥ್ಯವೇ ಇಲ್ಲವಂತೆ!!

|

ಮೊಬೈಲ್ ಬಳಕೆ ಬಗ್ಗೆ ಈಗಾಗಲೇ ನೂರಾರು ಅಧ್ಯಯನಗಳು ನಡೆದಿವೆ. ಆ ಎಲ್ಲಾ ಅಧ್ಯಯನಗಳು ಸಹ ಮೊಬೈಲ್ ಬಳಕೆ ಒಳ್ಳೆಯದಲ್ಲ ಎಂದೇ ಹೇಳಿವೆ. ಅವುಗಳ ಸಾಲಿಗೆ ಇತ್ತೀಚಿನ ಒಂದು ಅಧ್ಯಯನ ಸೇರಿಕೊಂಡಿದೆ. ಆದರೆ, ಈ ಅಧ್ಯಯನದಲ್ಲಿ ಟೈಮ್ ಪಾಸ್ ಮಾಡುವುದಕ್ಕೆ ಅಥವಾ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಸ್ಮಾರ್ಟ್ ಫೋನ್ ಮೊರೆ ಹೋಗುವವರನ್ನು ಎಚ್ಚರಿಸಲಾಗಿದೆ.

ಹೌದು, ನೀವು ಟೈಮ್ ಪಾಸ್ ಮಾಡುವುದಕ್ಕೆ ಅಥವಾ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೂ ನೀವು ಸ್ಮಾರ್ಟ್‌ಫೋನ್ ಮೊರೆ ಹೋಗುತ್ತಿದ್ದೀರಿ ಎಂದಾದರೆ, ಅದು ಖಂಡಿತವಾಗಿಯೂ ನಿಮ್ಮ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದು ಅರ್ಥ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. ನಿಯತಕಾಲಿಕೆಯೊಂದು ಈ ಬಗ್ಗೆ ಪೂರ್ಣ ವರದಿ ಮಾಡಿರುವುದು ಎಚ್ಚರಿಕೆಯ ಘಂಟೆಯಾಗಿದೆ.

ಟೈಮ್‌ಪಾಸ್ ಮಾಡಲು ಫೋನ್ ಹಿಡಿಯುವವರಿಗೆ ಸಾಮರ್ಥ್ಯವೇ ಇಲ್ಲವಂತೆ!!

ಆಸ್ಟ್ರೇಲಿಯಾದ ಡೀಕಿನ್ ವಿಶ್ವವಿದ್ಯಾಲಯದ ಸಂಶೋಧಕರು ಸ್ಮಾರ್ಟ್‌ಫೋನಿನ ನಿರಂತರ ಬಳಕೆ ಮತ್ತು ಮಾನಸಿಕ ಯೋಗಕ್ಷೇಮದ ಬಗ್ಗೆ ಅಧ್ಯಯನ ನಡೆಸಿದ್ದು, ಮಾನವ ವರ್ತನೆಗಳಲ್ಲಿ ಕಂಪ್ಯೂಟರ್‌ಗಳು(Computers in Human Behavior)ಎಂಬ ನಿಯತಕಾಲಿಕೆಯ ಸಂಶೋಧನಾ ವರದಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಸ್ಮಾರ್ಟ್‌ಫೋನ್ ಬಳಕೆ ಅಪಾಯಕಾರಿ ಎಂದು ತಿಳಿಸಿದೆ.

ಮಾನಸಿಕ ಆರೋಗ್ಯದ ಮಟ್ಟ ಅತ್ಯುತ್ತಮವಾಗಿಲ್ಲದವರು, ನಕಾರಾತ್ಮಕ ಭಾವನೆಯುಳ್ಳವರು, ಸಂಯಮ ಕಡಿಮೆಯುಳ್ಳವರು ಜೀವನದ ಉದ್ದೇಶವೇ ಕಳೆದುಕೊಂಡಿರುವಂತಾಗಿರುವವರು, ಸಾಮಾಜಿಕ ಒತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯ ಕುಗ್ಗಿದವರು ಟೈಮ್ ಪಾಸ್, ವಿಶ್ರಾಂತಿಗಾಗಿ ಸ್ಮಾರ್ಟ್ ಫೋನ್ ನೋಡುತ್ತಿರುತ್ತಾರೆ ಎಂಬುದನ್ನು ಸಂಶೋಧಕರು ಮನಗಂಡಿದ್ದಾರಂತೆ.

ಟೈಮ್‌ಪಾಸ್ ಮಾಡಲು ಫೋನ್ ಹಿಡಿಯುವವರಿಗೆ ಸಾಮರ್ಥ್ಯವೇ ಇಲ್ಲವಂತೆ!!

ಸಾಮರ್ಥ್ಯ ಕುಗ್ಗಿದವರು ವಿಶ್ರಾಂತಿಗಾಗಿ ಫೋನ್ ನೋಡುವುದು ಹೆಚ್ಚಿರುವುದು ಆಘಾತಕಾರಿ. ಸಂಪರ್ಕ ಹೊಂದುವುದಕ್ಕೆ ಸ್ಮಾರ್ಟ್‌ಫೋನ್‌ಗಳನ್ನು ಬಳಕೆ ಮಾಡುವುದು ಒಳ್ಳೆಯದು. ಆದರೆ ಜಾಲತಾಣಗಳಲ್ಲಿ ಜನರು ಏನು ಮಾಡುತ್ತಿದ್ದಾರೆ ಎಂಬುದನ್ನು ನಿಷ್ಕ್ರಿಯವಾಗಿ ಗಮನಿಸುತ್ತಾ ಕೂರುವುದು ಮಾನಸಿಕ ಆರೋಗ್ಯಕ್ಕೆ ಒಳ್ಳೇಯದಲ್ಲ ಎಂದು ಅಧ್ಯಯನ ವರದಿದಲ್ಲಿ ಹೇಳಲಾಗಿದೆ.

ಒದಿರಿ: ಆಧಾರ್ ನಿಂದ ವೈಯಕ್ತಿಕ ಮಾಹಿತಿ ಸೋರಿಕೆ?..ಯಕ್ಷ ಪ್ರಶ್ನೆಗೆ ನಿಲೇಕಣಿ ಉತ್ತರ!

Best Mobiles in India

English summary
Reaching for smartphone may be bad for your health. Using your smartphone to relax and pass time may be associated with negativefeelings, lack of control and a reduced sense of purpose in life. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X