ಆಪ್‌ನಲ್ಲಿ ಕರೆಂಟ್ ಬಿಲ್ ಕಟ್ಟಿ ಪ್ರತಿ ತಿಂಗಳು ರೂ. 300 ಕ್ಯಾಷ್ ಬ್ಯಾಕ್ ಪಡೆಯಿರಿ.!!
ಈ ಆಫರ್ ದೆಹಲಿಗೆ ಮಾತ್ರವೇ ಸಿಮೀತವಾಗಿದ್ದು, ಶೀಘ್ರವೇ ಬೆಂಗಳೂರಿಗೂ ಲಭ್ಯವಾಗಲಿದೆ. ಮೊಬಿಕ್ವಿಕ್ ಪ್ರಮೋಷನ್ ಗಾಗಿ ಈ ಕಾರ್ಯವನ್ನು ಮಾಡುತ್ತಿದ್ದು, ಜೊತೆಗೆ ಡಿಜಿಟಲ್ ಪೇಮೆಂಟ್ ಅನ್ನು ಪ್ರೋತ್ಸಾಹಿಸುವ ಸಲುವಾಗಿ ಕ್ಯಾಷ್ ಬ್ಯಾಕ್ ಆಫರ್ ನೀಡುತ್ತಿ
ಈಗಾಗಲೇ ಸ್ಮಾರ್ಟ್‌ಫೋನ್ ನಲ್ಲಿರುವ ಆಪ್‌ಗಳು ನಿಮ್ಮ ಜೇಬಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಕ್ಯಾಷ್ ಬ್ಯಾಕ್, ದರ ಕಡಿತ ಸೇರಿದಂತೆ ಹಲವರು ಆಫರ್ ಗಳು ಆಪ್ ನಲ್ಲಿ ಲಭ್ಯವಿರಲಿದೆ. ಇದೇ ಮಾದರಿಯಲ್ಲಿ ಮೊಬಿಕ್ವಿಕ್ ಆಪ್ ನಲ್ಲಿ ಕರೆಂಟ್ ಬಿಲ್ ಕಟ್ಟಿದರರೆ ರೂ. 300 ಕ್ಯಾಷ್ ಬ್ಯಾಕ್ ಪಡೆದುಕೊಳ್ಳಬಹುದಾಗಿದೆ.

ಓದಿರಿ: ವಾಟ್ಸ್‌ಆಪ್-ಯೂಟ್ಯೂಬ್ ಬ್ಯಾನ್: ಎಲ್ಲಿ? ಏಕೆ?
ಸದ್ಯ ಈ ಆಫರ್ ದೆಹಲಿಗೆ ಮಾತ್ರವೇ ಸಿಮೀತವಾಗಿದ್ದು, ಶೀಘ್ರವೇ ಬೆಂಗಳೂರಿಗೂ ಲಭ್ಯವಾಗಲಿದೆ. ಮೊಬಿಕ್ವಿಕ್ ಪ್ರಮೋಷನ್ ಗಾಗಿ ಈ ಕಾರ್ಯವನ್ನು ಮಾಡುತ್ತಿದ್ದು, ಜೊತೆಗೆ ಡಿಜಿಟಲ್ ಪೇಮೆಂಟ್ ಅನ್ನು ಪ್ರೋತ್ಸಾಹಿಸುವ ಸಲುವಾಗಿ ಕ್ಯಾಷ್ ಬ್ಯಾಕ್ ಆಫರ್ ನೀಡುತ್ತಿದೆ.

ಪ್ರತಿ ತಿಂಗಳು 10 % ಆಫ್:
ಮೊಬಿಕ್ವಿಕ್ ಆಪ್ ಮೂಲಕ ಪ್ರತಿ ತಿಂಗಳು ನೀವು ಕರೆಂಟ್ ಬಿಲ್ ಕಟ್ಟಿದರೆ 10% ಕಡಿತವನ್ನು ಪಡೆಯಬಹುದಾಗಿದ್ದು, ಇದು ಒಟ್ಟಾಗಿ ಸೇರಿ ರೂ. 300 ಆಗಲಿದೆ ಎನ್ನಲಾಗಿದೆ. ಎಲ್ಲಾವನ್ನು ಸೇರಿಸಿದರೆ ಒಂದು ವರ್ಷದಲ್ಲಿ ರೂ. 3600ರಷ್ಟು ಕಡಿತವನ್ನು ಪಡೆಯಬಹುದು.

ಆಪ್ ಪ್ರಮೋಷನ್:
ಮೊಬಿಕ್ವಿಕ್ ಒಂದು ಮೊಬೈಲ್ ವ್ಯಾಲೆಟ್ ಆಗಿದ್ದು, ತನ್ನ ಆಪ್ ಪ್ರಮೋಷನ್ ಗಾಗಿ ಗ್ರಾಹಕರಿಗೆ ಈ ಹೆಚ್ಚಿನ ಪ್ರಮಾಣದ ಲಾಭವನ್ನು ನೀಡುತ್ತಿದೆ ಎನ್ನಲಾಗಿದ್ದು, ಶೀಘ್ರವೇ ಎಲ್ಲಾ ನಗರಗಳಿಗೂ ಈ ಸೇವೆಯನ್ನು ವಿಸ್ತರಿಸಿಲಿದೆ.

ಬೇರೆ ಬೇರೆ ಆಫರ್ ಸಹ ಇದೆ:
ಮೊಬಿಕ್ವಿಕ್ ಮೊಬೈಲ್ ವ್ಯಾಲೆಟ್ ನಲ್ಲಿ ಇದರೊಂದೆ ಅಲ್ಲದೇ ಇನ್ನು ಅನೇಕ ಆಫರ್ ಗಳಿದ್ದು, ಒಮ್ಮೆ ಪ್ಲೇ ಸ್ಟೋರಿನಲ್ಲಿ ಆಪ್ ಇನ್ಟಾಲ್ ಮಾಡಿಕೊಂಡು ನೋಡಿದರೆ ದಿನಕ್ಕೊಂದು ಆಫರ್ ದೊರೆಯಲಿದೆ.


Click it and Unblock the Notifications








