ಈ ಆಪ್‌ಗಳು ಫೋನ್‌ನಲ್ಲಿದ್ರೆ ಮನೆಯಲ್ಲಿ ಸೊಳ್ಳೆಗಳು ನಿಮ್ಮ ಹತ್ತಿರವೇ ಸುಳಿಯಲ್ಲ!
ಸ್ಮಾರ್ಟ್‌ಫೋನ್ ಪರಿಚಯ ಆದಾಗಿನಿಂದ ಅದರ ಬಳಕೆ ಎಲ್ಲಾ ವಿಭಾಗದಲ್ಲೂ ಅಗತ್ಯವಾಗಿದೆ. ಅದರಲ್ಲೂ ಈ ಫೋನ್‌ಗಳ ಮೂಲಕ ಕರೆ ಹಾಗೂ ಮೆಸೆಜ್ ಅನ್ನು ಹೊರತುಪಡಿಸಿ ಬ್ಯಾಂಕಿಂಗ್ ವ್ಯವಹಾರ ಮಾಡಬಹುದು, ಆನ್‌ಲೈನ್ ಶಾಫಿಂಗ್ ಮಾಡಬಹುದು ಹಾಗೂ ಇನ್ನೂ ಹೆಚ್ಚಿನ ಸೇವೆಗಳನ್ನು ಪಡೆದುಕೊಳ್ಳಬಹುದು. ಈಗ ಸೊಳ್ಳೆಗಳನ್ನೂ ಸಹ ಓಡಿಸಬಹುದು.
ಹೌದು, ಮಳೆಗಾಲ ಆರಂಭ ಆಗಿರುವುದರಿಂದ ಸೊಳ್ಳೆಗಳ ಸಂಖ್ಯೆ ಸಹ ಹೆಚ್ಚಾಗಿದೆ. ಸಿಕ್ಕ ಸಿಕ್ಕಲ್ಲಿ ಕಚ್ಚುವ ಈ ಸೊಳ್ಳೆಗಳ ನಿಯಂತ್ರಣಕ್ಕೆ ಸಾಮಾನ್ಯವಾಗಿ ಮನೆಯಲ್ಲಿ ವಿವಿಧ ರೀತಿಯ ಡಿವೈಸ್‌ಗಳನ್ನು ಅಥವಾ ಸೊಳ್ಳೆ ಬ್ಯಾಟ್ ಬಳಕೆ ಮಾಡುತ್ತಿರಬಹುದು. ಆದರೆ, ಇವುಗಳಿಂದ ನಿಮಗೂ ಸಹ ಕೊಂಚ ಪ್ರಮಾಣದಲ್ಲಿ ಸಮಸ್ಯೆ ಆಗಲಿದೆ. ಈ ನಡುವೆ ಫೋನ್ ಮೂಲಕವೇ ಸೊಳ್ಳೆಗಳನ್ನು ಓಡಿಸಬಹುದು ಎಂಬುದು ನಿಮಗೆ ಗೊತ್ತಾ.?

ಸೊಳ್ಳೆಗಳು ಮನುಷ್ಯರನ್ನು ಇನ್ನಿಲ್ಲದಂತೆ ಕಾಡುವುದು ಸಹಜ. ಇವುಗಳ ಸಂಪೂರ್ಣ ನಿಯಂತ್ರಣ ಖಂಡಿತಾ ಅಸಾಧ್ಯ. ಆದರೆ, ಇವುಗಳಿಂದ ಆಗುವ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವುದು ಮಾತ್ರ ಸಾಧ್ಯವಾದ ಕೆಲಸ. ಈ ಕಾರಣಕ್ಕಾಗಿಯೇ ಆನ್‌ಲೈನ್‌ನಲ್ಲಿ ಸೊಳ್ಳೆ ಕಿಲ್ಲಿಂಗ್ ಡಿವೈಸ್‌ಗಳು ಭಾರೀ ಆಫರ್ ಬೆಲೆಯಲ್ಲಿ ಲಭ್ಯ ಇವೆ. ಇವುಗಳು ನಿಮ್ಮ ಮನೆ ಅಥವಾ ಕಛೇರಿಯಲ್ಲಿ ಸೊಳ್ಳೆಗಳನ್ನು ನಾಶ ಮಾಡಲು ಸಹಾಯ ಮಾಡುತ್ತವೆ. ಆದರೆ, ಇವುಗಳನ್ನು ಖರೀದಿ ಮಾಡಲು ಇಚ್ಚೆಪಡದವರು ಹಾಗೂ ಸೊಳ್ಳೆ ಹತ್ಯೆ ಮಾಡುವುದು ಬೇಡ ಎನ್ನುವವರು ಫೋನ್ ಬಳಕೆ ಮಾಡಬಹುದು.
ಸೊಳ್ಳೆಗಳನ್ನು ಹಿಮ್ಮೆಟ್ಟಿಸಲಿವೆ ಈ ಆಪ್‌ಗಳು: ಸ್ಮಾರ್ಟ್‌ಫೋನ್ ಹೊಂದಿರುವ ಯಾರೇ ಆದರೂ ಹಲವಾರು ಆಪ್‌ಗಳನ್ನು ಬಳಕೆ ಮಾಡಿಕೊಂಡು ವಿವಿಧ ರೀತಿಯ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ಈ ಸೊಳ್ಳೆ ವಿರುದ್ಧ ಹೋರಾಡಲು ಅಥವಾ ಸೊಳ್ಳೆಗಳು ನಿಮ್ಮ ಹತ್ತಿರಕ್ಕೆ ಬರದಂತೆ ಮಾಡಲು ಆಪ್‌ಗಳನ್ನು ಬಳಕೆ ಮಾಡಿಕೊಳ್ಳಬಹುದು. ಈ ಆಪ್‌ಗಳು ಆಪ್ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯ ಇದ್ದು, ಇವುಗಳನ್ನು ಸಕ್ರಿಯವಾಗಿ ಬಳಕೆ ಮಾಡುವ ಮೂಲಕ ಸ್ವಲ್ಪ ಮಟ್ಟದಲ್ಲಾದರೂ ಸೊಳ್ಳೆಗಳನ್ನು ನಿಮ್ಮಿಂದ ದೂರ ಇರುತ್ತವೆ.
ಯಾವೆಲ್ಲಾ ಆಪ್ ಬಳಕೆ ಮಾಡಬಹುದು?: ಈ ಸಂಬಂಧ ಪ್ಲೇ ಸ್ಟೋರ್‌ನಲ್ಲಿ ಹಲವಾರು ಆಪ್‌ಗಳು ಕಾಣಸಿಗುತ್ತವೆ. ಅದರಲ್ಲಿ ಪ್ರಮುಖವಾಗಿ ಮಸ್ಕಿಟೋಸ್ ಕಿಲ್ಲರ್, ಮಸ್ಕಿಟೋಸ್ ವಾಯ್ಸ್, ಫ್ರೀಕ್ವೆನ್ಸಿ ಜನರೇಟರ್ ಸೇರಿದಂತೆ ಮುಂದಾದ ಆಪ್‌ಗಳು ಹೆಚ್ಚು ಬಳಕೆ ಆಗುತ್ತಿವೆ. ಈ ಆಪ್‌ಗಳನ್ನು ಇನ್‌ಸ್ಟಾಲ್ ಮಾಡುವಾಗ ಒಮ್ಮೆ ವಿಮರ್ಶೆ ಹಾಗೂ ರೇಟಿಂಗ್ ನೋಡಿ ಇನ್‌ಸ್ಟಾಲ್ ಮಾಡಿಕೊಳ್ಳಿ.
ಈ ಆಪ್‌ಗಳು ಹೇಗೆ ಕೆಲಸ ಮಾಡುತ್ತವೆ?: ಸಾಮಾನ್ಯವಾಗಿ ಪ್ರತಿ ಪ್ರಾಣಿ ಹಾಗೂ ಪಕ್ಷಿಗಳು ಕೆಲವು ಶಬ್ದಕ್ಕೆ ಹೆದರುವುದುಂಟು. ಇದರ ಆಧಾರದಲ್ಲಿಯೇ ಈ ಆಪ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಇವು ವಿಭಿನ್ನ ಫ್ರೀಕ್ವೆನ್ಸಿ ಶಬ್ದಗಳನ್ನು ಉತ್ಪಾದಿಸುತ್ತವೆ. ಈ ಸೌಂಡ್ ಸೊಳ್ಳೆಗಳನ್ನು ಇನ್ನಿಲ್ಲದಂತೆ ಕಾಡಲಿದ್ದು, ಈ ಶಬ್ದದಿಂದ ದೂರ ಹೋಗಲು ಮುಂದಾಗುತ್ತವೆ ಎನ್ನಲಾಗಿದೆ. ಜೊತೆಗೆ ಈ ಸೌಂಡ್ ಕಡಿಮೆ ಇರುವುದರಿಂದ ಮನುಷ್ಯರಿಗೆ ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲ.
ನಿಜವಾಗಿ ಈ ಆಪ್‌ಗಳು ಕೆಲಸ ಮಾಡುತ್ತವೆಯೇ?: ಮೊದಲೇ ತಿಳಿಸಿದಂತೆ ಈ ಆಪ್‌ಗಳು ಖಂಡಿತಾ ನೂರಕ್ಕೆ ನೂರರಷ್ಟು ಕೆಲಸ ಪರಿಣಾಮ ಬೀರುವುದಿಲ್ಲ. ಬದಲಾಗಿ ಸ್ವಲ್ಪ ಮಟ್ಟಿನ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ. ಇನ್ನು ಆಪ್ ಸ್ಟೋರ್‌ನಲ್ಲಿ ಸಾಕಷ್ಟು ಆಪ್‌ಗಳು ಇದ್ದು ಎಲ್ಲವೂ ಉತ್ತಮ ಆಪ್‌ಗಳು ಎಂದು ಹೇಳಲು ಸಹ ಸಾಧ್ಯವಿಲ್ಲ. ಕೆಲವು ಆಪ್‌ಗಳು ದುರುದ್ದೇಶ ಹೊಂದಿದ್ದು, ಇವುಗಳಿಂದ ನೀವು ಎಚ್ಚರ ವಹಿಸುವುದು ಸಹ ಅನಿವಾರ್ಯ.

ಸಾಮಾನ್ಯವಾಗಿ ಈ ಆಪ್‌ಗಳಿಗೆ ಹೆಚ್ಚಿನ ಅನುಮತಿ ನೀಡುವ ಅಗತ್ಯ ಇರುವುದಿಲ್ಲ. ಅದಾಗ್ಯೂ ನಿಮ್ಮ ಫೋನ್‌ನಲ್ಲಿನ ಸಂಪರ್ಕ, ಮೀಡಿಯಾ ಫೈಲ್ ಅಥವಾ ಇನ್ನಿತರೆ ಅನಗತ್ಯ ವಿಷಯಗಳಿಗೆ ಅನುಮತಿ ಕೇಳಿದರೆ ಇವು ನಕಲಿ ಎಂದು ಪರಿಗಣಿಸಿ. ಎಲ್ಲಕ್ಕಿಂತ ಮಿಗಿಲಾಗಿ ಆಪ್ ಸಂಬಂಧ ಬಳಕೆದಾರರು ಹಲವಾರು ವಿಮರ್ಶೆಗಳನ್ನು ಬರೆದಿರುತ್ತಾರೆ. ಅವುಗಳನ್ನು ಓದಿಕೊಳ್ಳುವ ಮೂಲಕ ನಿಜವಾಗಿ ಕೆಲಸ ಮಾಡುವ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದು.
ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಈ ಎಲ್ಲಾ ಆಪ್‌ಗಳು ಬಹುಪಾಲು ಉಚಿತ ಆಗಿರುವುದರಿಂದ ಜಾಹಿರಾತಿನ ಕಿರಿಕಿರಿ ಹೆಚ್ಚಾಗಿರುತ್ತದೆ. ಹೀಗಾಗಿ ನಮಗೆ ಸೊಳ್ಳೆಗಳಿಂದ ಮುಕ್ತಿ ಸಿಕ್ಕಿದರೆ ಸಾಕು ಎಷ್ಟೇ ಜಾಹೀರಾತು ಬಂದರು ಪರವಾಗಿಲ್ಲ ಎನ್ನುವವರು ಈ ಸಂಬಂಧದ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದು.


Click it and Unblock the Notifications








