Subscribe to Gizbot

'ನಮ್ಮ ಟೈಗರ್' ಕ್ಯಾಬ್‌ಗೆ HDD ಗ್ರೀನ್ ಸಿಗ್ನಲ್: ರಾಜ್ಯೋತ್ಸವದಂದು ಚಾಲನೆ?

Written By:

ರಾಜಧಾನಿ ಬೆಂಗಳೂರಿನಲ್ಲಿ ಆಪ್ ಆಧಾರಿತ ಟಾಕ್ಸಿ ಸೇವೆ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಉಬರ್ - ಓಲಾ ಕಂಪನಿಗಳು ಹಚ್ಚು ಖ್ಯಾತಿಯನ್ನು ಪಡೆದುಕೊಂಡಿವೆ. ಆದರೆ ಈ ಕಂಪನಿಗಳು ಚಾಲಕರನ್ನು ಹಿಂಸಿಸುತ್ತೀವೆ ಎನ್ನಲಾಗಿದೆ.

'ನಮ್ಮ ಟೈಗರ್' ಕ್ಯಾಬ್‌ಗೆ HDD ಗ್ರೀನ್ ಸಿಗ್ನಲ್: ರಾಜ್ಯೋತ್ಸವದಂದು ಚಾಲನೆ?

ಓದಿರಿ: ಐಫೋನ್ X ಮೇಲೆ 70% ರಿಯಾಯಿತಿ ಬೇಕಾ..? ಇಲ್ಲಿ ಲಭ್ಯ.!

ಈ ಹಿನ್ನಲೆಯಲ್ಲಿ ಈಗಾಗಲೇ ಸುಮಾರು ಇಪ್ಪತ್ತು ಸಾವಿರ ಮಂದಿ ಚಾಲಕರು ಸೇರಿಕೊಂಡು ನಮ್ಮ ಟೈಗರ್ ಎನ್ನುವ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುವ ಸಂಸ್ಥೆಯನ್ನು ಹುಟ್ಟಿಹಾಕಿದ್ದು, ಇದಕ್ಕೆ ಮಾಜಿ ಪ್ರಧಾನಿ ದೇವೇಗೌಡ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬದಲಾದ ಹೆಸರು:

ಬದಲಾದ ಹೆಸರು:

ಈ ನಮ್ಮ ಟೈಗರ್ ಸಂಸ್ಥೆಯನ್ನು ಹುಟ್ಟುಹಾಕುವಲ್ಲಿ ಮಾಜಿ ಮುಖ್ಯಮಂತ್ರಿ H D ಕುಮಾರಸ್ವಾಮಿ ಪಾತ್ರ ಹೆಚ್ಚಿದೆ ಎನ್ನಲಾಗಿದ್ದು. ಈ ಹಿಂದೆ ಇದಕ್ಕೆ HDK ಕ್ಯಾಬ್ಸ್ ಎಂದು ಹೆಸರಿಡಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೆ ಕೊನೆ ಹಂತದಲ್ಲಿ 'ನಮ್ಮ ಟೈಗರ್' ಎಂದು ನಾಮಕರಣವನ್ನು ಮಾಡಲಾಗಿದೆ.

'ನಮ್ಮ ಟೈಗರ್'ಗೆ HDD ಗ್ರೀನ್ ಸಿಗ್ನಲ್:

'ನಮ್ಮ ಟೈಗರ್'ಗೆ HDD ಗ್ರೀನ್ ಸಿಗ್ನಲ್:

ಚಾಲಕರಿಗೆ ಮತ್ತು ಜನರಿಗೆ ಸಹಾಯಕವಾಗಲಿರುವ 'ನಮ್ಮ ಟೈಗರ್' ಸೇವೆಯನ್ನು ಉದ್ಘಾಟಿಸಲು ನಾನು ಸಿದ್ಧನಿದ್ದೇನೆಂದು ಜೆಡಿಎಸ್ ರಾಷ್ಟ್ರಾಧ್ಯಾಕ್ಷ ಹೆಚ್.ಡಿ. ದೇವೇಗೌಡ ಅವರು ಶುಕ್ರವಾರ ತಿಳಿಸಿದ್ದಾರೆ ಎನ್ನಲಾಗಿದೆ.

Facebook Messenger Tips and Tricks : ಫೇಸ್‌ಬುಕ್‌ನಲ್ಲೂ ಫುಟ್‌ಬಾಲ್ ಆಡಿ!!
ವಿವಿಧ ಮಾದರಿಯ ಸೇವೆ:

ವಿವಿಧ ಮಾದರಿಯ ಸೇವೆ:

ಉಬರ್ - ಓಲಾ ಕಂಪನಿ ಮಾದರಿಯಲ್ಲಿ ಮಾರುಕಟ್ಟೆಯಲ್ಲಿರುವ ಕಂಪನಿಗಳಿಗೆ ಸ್ಪರ್ಧೆಯನ್ನು ನೀಡುವ ಸಲುವಾಗಿ ವಿವಿಧ ಮಾದರಿಯ ಸೇವೆಯನ್ನು ನೀಡಲಿದೆ. ಒಟ್ಟು ನಾಲ್ಕು ವರ್ಗದಲ್ಲಿ ಸೇವೆಯನ್ನು ನೀಡಲಿದೆ. ಮಿನಿ ಪ್ರತಿ ಕಿ.ಮೀ ಗೆ ರೂ.12.50 ಸ್ಪೋರ್ಟ್ಸ್ ಸೆಡಾನ್ ಪ್ರತಿ ಕಿ.ಮೀಗೆ ರೂ.14.50 ಎಸ್ ಯುವಿ ಹಾಗೂ ಹೊರವಲಯದ ಪ್ರಯಾಣಕ್ಕೆ ಪ್ರತಿ ಕಿ.ಮೀಗೆ ರೂ. 18.50 ನಿಗಧಿ ಮಾಡಲಾಗಿದೆ.

ಶೀಘ್ರವೇ ಲಾಂಚ್:

ಶೀಘ್ರವೇ ಲಾಂಚ್:

ಈ ಹಿಂದೆಯೇ ನಮ್ಮ ಟೈಗರ್ ಕ್ಯಾಬ್ ಸೇವೆಯನ್ನು ಆರಂಭಿಸಬೇಕಾಗಿತ್ತು. ಆದರೆ ಕೆಲವು ಕಾರಣಗಳಿಂದಾಗಿ ನಿಧಾನವಾಗಿದೆ ಎನ್ನಲಾಗಿದೆ. ರಾಜ್ಯೋತ್ಸವದ ಅಂಗವಾಗಿ ಕ್ಯಾಬ್ ಸೇವೆಯು ಆರಂಭವಾಗಲಿದೆ ಎನ್ನುವ ಮಾತು ಕೇಳಿ ಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Namma Tiger Cabs: Ola and Uber's new competitor. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot