ಇಂದಿನ ದಿನದಲ್ಲಿ ಕಡಿಮೆ ಬೆಲೆಗೆ ಡೇಟಾ ಆಫರ್ ದೊರೆಯುತ್ತಿರುವ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಹೊಸ ಹೊಸ ಆಪ್ ಡೌನ್‌ಲೋಡ್ ಮಾಡಿಕೊಂಡು ಬಳಕೆ ಮಾಡಲು ಶುರು ಮಾಡಿದ್ದಾರೆ. ಆದರೆ ಹೊಸ ಹೊಸ ಆಪ್ ಬಳಕೆ ಮಾಡುವ ಮುನ್ನ ಎಚ್ಚರವಾಗಿರಿ.

ಓದಿರಿ: ನಿಮ್ಮ ಆಂಡ್ರಾಯ್ಡ್ ಫೋನಿನ ವೇಗ ಹೆಚ್ಚಿಸುವುದೇಗೆ..? ಇಲ್ಲಿದೇ ಸಿಂಪಲ್ ಟಿಪ್ಸ್
ಈಗಾಗಲೇ ಗೂಗಲ್ ಆಪ್ ಸ್ಟೋರಿನಲ್ಲಿ ಅನೇಕ ಆಪ್‌ಗಳು ಆಡ್‌ವೇರ್ ದಾಳಿಗೆ ತುತ್ತಾಗಿದ್ದವು. ಈ ಹಿನ್ನಲೆಯಲ್ಲಿ ನೀವು ಹೊಸ ಆಪ್ ಗಳನ್ನು ಬಳಕೆ ಮಾಡುವ ಮುನ್ನ ಎಚ್ಚರವಾಗಿರಿ, ಆಪ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದ ನಂತರವೇ ಇನ್‌ಸ್ಟಾಲ್ ಮಾಡಿಕೊಂಡು ಬಳಕೆ ಮಾಡಲು ಮುಂದಾಗಿರಿ.
ನಿಮಗೆ ಗೊತ್ತಿಲ್ಲದೇ ಮಾಹಿತಿ ಕದಿಯಬಹುದು:
ನಿಮ್ಮ ಮೊಬೈಲ್‌ನಲ್ಲಿರುವ ವೈಯಕ್ತಿಕ ಮಾಹಿತಿಗಳನ್ನು ಆಪ್‌ಗಳು ಕದಿಯುವ ಸಾಧ್ಯತೆಯೂ ಹೆಚ್ಚಾಗಿರಲಿದೆ. ಈ ಹಿನ್ನಲೆಯಲ್ಲಿ ನೀವು ಭಾರೀ ಎಚ್ಚರದಿಂದ ಇರುವುದು ತೀರಾ ಅವಶ್ಯಕ. ಇಲ್ಲವಾದರೆ ನೀವು ತೊಂದರೆಗೆ ಸಿಲುಕಿಕೊಳ್ಳುವಿರಿ.
ಜಾಹೀರಾತು ಪ್ರಸಾರ:
ಅನೇಕ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡರೆ ಅದರೊಂದಿಗೆ ಜಾಹಿರಾತು ಸಹ ಕಾಣಿಸಿಕೊಳ್ಳಲಿದೆ. ಫೋನ್ ಲಾಕ್ ಮಾಡಿರರೆ ಅನ್‌ಲಾಕ್ ಮಾಡಿದರೆ ಜಾಹಿರಾತು ಬರುತ್ತದೆ ನೀವು ಅದನ್ನು ಬಂದ್ ಮಾಡಲು ಸಹ ಸಾಧ್ಯವಾಗುವುದಿಲ್ಲ.
ಮೊಬೈಲ್ ಸ್ಫೀಡ್ ಕಡಿಮೆಯಾಗಲಿದೆ:
ನಿಮ್ಮ ಮೊಬೈಲ್ ನಲ್ಲಿ ಹೆಚ್ಚು ಆಪ್ ಗಳನ್ನು ಹಾಕಿಕೊಂಡಷ್ಟು RAM ವೇಗವೂ ಕಡಿಮೆಯಾಗಲಿದೆ. ಅಲ್ಲದೇ ಸುಮ್ಮನೆ ಕಿರಿಕಿರಿಯನ್ನು ಉಂಟು ಮಾಡಲಿದೆ. ಈ ಹಿನ್ನಲೆಯಲ್ಲಿ ನೀವು ಹೊಸ ಆಪ್ ಗಳ ಬಳಕೆ ಮಾಡಿದರುವುದೇ ಸೂಕ್ತ.
ಬ್ಯಾಂಕ್ ವ್ಯವಹಾರಕ್ಕೆ ಕನ್ನ:
ಇಂದಿನ ದಿನದಲ್ಲಿ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ನೀವು ಹೆಚ್ಚಿನ ವ್ಯವಹಾರವನ್ನು ಮಾಡುತ್ತೀರಾ. ಈ ಹಿನ್ನಲೆಯಲ್ಲಿ ಅಪರಿಚತ ಆಪ್ ಗಳು ಆ ಮಾಹಿತಿಗಳನ್ನು ಲೀಕ್ ಮಾಡುವ ಸಾಧ್ಯತೆ ಇರಲಿದ್ದು, ನಿಮ್ಮ ಬ್ಯಾಂಕ್ ವ್ಯವಹಾರಕ್ಕೂ ಕನ್ನ ಹಾಕಲಿವೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.