ನಿಮ್ಮ ಆಂಡ್ರಾಯ್ಡ್ ಫೋನಿನ ವೇಗ ಹೆಚ್ಚಿಸುವುದೇಗೆ..? ಇಲ್ಲಿದೇ ಸಿಂಪಲ್ ಟಿಪ್ಸ್

Written By:

ಇಂದಿನ ದಿನದಲ್ಲಿ ಸಾಮಾನ್ಯ ಸ್ಮಾರ್ಟ್‌ಫೋನ್‌ಗಳು ಕಡಿಮೆ ಎಂದರೆ 2GB RAM ಹೊಂದಿದರಲಿದೆ. ಆದರೂ ಸಹ ಮೊಬೈಲ್ ವೇಗ ಕಡಿಮೆ ಎನ್ನುವ ಮಾತನ್ನು ಕೇಳುತ್ತೇವೆ. ಇದು ಮೊಬೈಲ್ ನಿಂದ ಆಗುವ ತೊಂದರೆಯಲ್ಲ. ಇದಕ್ಕೇ ಕಾರಣ ನಾವು ಮೊಬೈಲ್ ಅನ್ನು ಬಳಕೆ ಮಾಡುವ ರೀತಿಯಗಿದೆ.

ನಿಮ್ಮ ಆಂಡ್ರಾಯ್ಡ್ ಫೋನಿನ ವೇಗ ಹೆಚ್ಚಿಸುವುದೇಗೆ..? ಇಲ್ಲಿದೇ ಸಿಂಪಲ್ ಟಿಪ್ಸ್

ಓದಿರಿ: ನೀವು ವಾಟ್ಸ್‌ಆಪ್‌ ನಲ್ಲೇ ಪೇಮೆಂಟ್ ಮಾಡಬಹುದು: ನಿಮ್ಮ ಫೋನಿನಲ್ಲಿ ಲಭ್ಯವಿಲ್ಲವೇ? ಹಾಗಿದ್ರೆ ಹೀಗೇ ಮಾಡಿ

ಹಾಗಾಗಿ ನಿಮ್ಮ ಮೊಬೈಲ್‌ ಫೋನಿನ ವೇಗವನ್ನು ಹೆಚ್ಚಿಸಿಕೊಳ್ಳಬೇಕಾದರೆ ಕೆಲವು ಅಗತ್ಯ ಬದಲಾವಣೆಯನ್ನು ನೀವು ಮಾಡಿಕೊಳ್ಳಬೇಕಾಗಿದೆ. ಅದು ಯಾವುದು ಎಂಬುದನ್ನು ಈ ಕೆಳಗಿನಂತೆ ನೋಡಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅನಿಮೆಟೆಡ್ ವಾಲ್‌ ಪೇಪರ್ ಬಳಕೆ ಮಾಡಬೇಡಿ:

ಅನಿಮೆಟೆಡ್ ವಾಲ್‌ ಪೇಪರ್ ಬಳಕೆ ಮಾಡಬೇಡಿ:

ನಿಮ್ಮ ಮೊಬೈಲ್ ಡಿಸ್‌ಪ್ಲೇಯಲ್ಲಿ ಲೈವ್‌ ವಾಲ್‌ಪೇಪರ್‌ಗಳು, ಅನಿಮೇಟೆಟ್ ವಾಲ್‌ಪೇಪರ್‌ಗಳು ಇದ್ದರೆ ಅವುಗಳು ಮೊಬೈಲ್‌ ವೇಗವನ್ನು ಕುಗ್ಗಿಸುತ್ತವೆ.ಇದರಿಂದ ಮೊಬೈಲ್‌ ಮೊಬೈಲ್‌ ವೇಗಕ್ಕೆ ಪೆಟ್ಟು ಬೀಳುತ್ತದೆ. ಇವುಗಳನ್ನು ಬಳಸದೆ ಇರುವುದು ಉತ್ತಮ.

ಕ್ರೋಮ್ ಬೌಸರ್ ಬಳಸಬೇಡಿ:

ಕ್ರೋಮ್ ಬೌಸರ್ ಬಳಸಬೇಡಿ:

ಗೂಗಲ್ ನೊಂದಿಗೆ ಬರುವ ಕ್ರೋಮ್ ಬ್ರೌಸರ್ ಅನ್ನು ಬಳಕೆ ಮಾಡಬೇಡಿ. ಇದು ಹೆಚ್ಚಿನ RAM ಬೇಡುತ್ತದೆ. ಅದಕ್ಕಾಗಿ ನೀವು ನಿಮ್ಮ ಫೋನಿನಲ್ಲಿರುವ ಬ್ರೌಸರ್ ಬಳಕೆ ಮಾಡಿ. ಇಲ್ಲವೇ ಬೇರೆ ಬ್ರೌಸರ್ ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಲಾಂಚರ್ ಗಳ ಬಳಕೆ ಬೇಡ:

ಲಾಂಚರ್ ಗಳ ಬಳಕೆ ಬೇಡ:

ನಿಮ್ಮ ಫೋನಿನಲ್ಲಿರುವ ಡಿಫಾಲ್ಟ್ ಲಾಂಚರ್ ಅನ್ನು ಬಿಟ್ಟು, ಬೇರೆ ಯಾವುದೇ ಲಾಂಚರ್ ಗಳನ್ನು ಬಳಕೆ ಮಾಡಿಕೊಳ್ಳಬೇಡಿ. ಇದು ನಿಮ್ಮ ಪೋನಿನ ವೇಗವನ್ನು ಕುಗ್ಗಿಸುವುದಲ್ಲದೇ ಫೋನ್ ಹ್ಯಾಗ್ ಮಾಡಲು ಕಾರಣವಾಗುತ್ತದೆ.

ಫೇಸ್‌ಬುಕ್‌ ಲೈಟ್ ಬಳಸಿಕೊಳ್ಳಿ:

ಫೇಸ್‌ಬುಕ್‌ ಲೈಟ್ ಬಳಸಿಕೊಳ್ಳಿ:

ನಿಮ್ಮ ಫೋನಿನಲ್ಲಿ ಹೆಚ್ಚಿನ RAM ಮತ್ತು ಬ್ಯಾಟರಿಯನ್ನು ತಿನ್ನುವುದರಲ್ಲಿ ಫೇಸ್‌ಬುಕ್ ಆಪ್ ಮುಂದಿದೆ. ಇದರ ಬದಲು ಫೇಸ್‌ಬುಕ್‌ ಲೈಟ್ ತಂತ್ರಾಂಶವನ್ನು ಅಳವಡಿಸಿಕೊಳ್ಳುವುದು ಉತ್ತಮ.

ಆಂಟಿ ವೈರಸ್ ಬೇಡ:

ಆಂಟಿ ವೈರಸ್ ಬೇಡ:

ಸ್ಮಾರ್ಟ್‌ಫೋನ್‌ಗಳಲ್ಲಿ ಆಂಟಿ ವೈರಸ್ ಬಳಕೆ ಮಾಡುವ ಅವಶ್ಯಕತೆ ಇಲ್ಲ ಎನ್ನಲಾಗಿದೆ. ಈ ರೀತಿಯ ತಂತ್ರಾಂಶಗಳು ಮೊಬೈಲ್‌ ವೇಗವನ್ನು ಕಡಿಮೆ ಮಾಡುತ್ತವೆ ಎಂಬುದು ಹಲವರ ಅಭಿಪ್ರಾಯ. ಪ್ರತಿ ಮೊಬೈಲ್‌ನಲ್ಲೂ ಡಿಫಾಲ್ಟ್‌ ಆಗಿ ಯಾವುದಾದರೂ ಒಂದು ಆಂಟಿ ವೈರಸ್ ತಂತ್ರಾಂಶ ಇರುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Your Android phone was probably fast when you first bought it, right? ... Read on for our best tips to speed up your phone. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot