ಬೆಂಗಳೂರಿನ ಟ್ರಾಫಿಕ್ ಟ್ರ್ಯಾಕ್ ಮಾಡಲು ಹೊಸ ಆಪ್
ಬೆಂಗಳೂರಿನ ಜನತೆಗೆ ದಿನನಿತ್ಯ ಟ್ರಾಫಿಕ್ ಸಮಸ್ಯೆಯನ್ನು ನೋಡಿ ನೋಡಿ ಯಾವಾಗ ಈ ಸಮಸ್ಯೆಯಿಂದ ಪಾರಾಗುವುದು ಎಂದು ಚಿಂತಿಸುತ್ತಿರುವವರು ಬಹುಶಃ ನೂರಕ್ಕೆ ನೂರರಷ್ಟು ವಾಹನ ಚಾಲಕರು ಇದ್ದಾರೆ. ಆದರೆ ಇಂತಹ ಸಮಸ್ಯೆಗಳಿಂದ ಪಾರಾಗಲು ಸಹ ಟೆಕ್ನಾಲಜಿಯೇ ಅವಶ್ಯಕವಾಗಿದೆ. ಹೌದಾ!! ಅಂತಹ ಟೆಕ್ನಾಲಜಿ ಯಾವುದು ಎಂಬ ಪ್ರಶ್ನೆ ನಿಮ್ಮದು ಅಲ್ವಾ. ಅದಕ್ಕೆ ಉತ್ತರ ಇಲ್ಲಿದೆ.
ಓದಿರಿ: ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲು ಸಾಮಾಜಿಕ ನೆಟ್‌ವರ್ಕ್ 'ಟೆಕ್‌ಟುಡ್'
ಟ್ರಾಫಿಕ್ ದಟ್ಟಣೆಯನ್ನು ಕಂಡುಹಿಡಿಯಲು ಈಗ ಮೊಬೈಲ್ ಅಪ್ಲಿಕೇಶನ್ ಒಂದು ರೆಡಿಯಾಗಿದೆ. ಅದು ಬೆಂಗಳೂರಿನಲ್ಲಿ ಯಾವ ಪ್ರದೇಶದಲ್ಲಿ ಹೆಚ್ಚು ಟ್ರಾಫಿಕ್ ಇದೆ ಎಂಬುದನ್ನು ವಾಹನ ಚಾಲಕರು ಆ ಪ್ರದೇಶದ ರಸ್ತೆಗೆ ಹೋಗುವ ಮುನ್ನವೇ ತಿಳಿಯಲು ಸಹಾಯಕವಾಗುತ್ತದೆ. ಅದು ಹೇಗೆ, ಅಭಿವೃದ್ದಿಗೊಳಿಸಿದವರು ಯಾರು, ಬಳಕೆ ಮಾಡುವುದು ಹೇಗೆ ಎಂಬ ವಿಶೇಷ ಮಾಹಿತಿಯನ್ನು ಈ ಲೇಖನದಿಂದ ತಿಳಿಯಿರಿ.

ಸಂಚಾರ ದಟ್ಟಣೆಯನ್ನು ಕಂಡುಹಿಡಿಯುವ ಮೊಬೈಲ್ ಅಪ್ಲಿಕೇಶನ್
ಜರ್ಮನ್ ಕಂಪನಿಯು ಸಂಚಾರ ದಟ್ಟಣೆಯನ್ನು ಕಂಡುಹಿಡಿಯುವ ಮೊಬೈಲ್ ಅಪ್ಲಿಕೇಶನ್ ಅನ್ನು ಕಂಡುಹಿಡಿದಿದ್ದು, ಈ ಅಪ್ಲಿಕೇಶನ್ ಬಳಸುವವರಿಗೆ ನಿರ್ಧಿಷ್ಟ ಪ್ರದೇಶಕ್ಕೆ ಹೋಗುವ ಮುನ್ನವೇ ಆ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೇಗಿದೆ, ವೇಗ ಎಷ್ಟಿದೆ ಎಂಬುದನ್ನು ಮುಂಚಿತವಾಗಿ ತಿಳಿಯಲು ಸಹಾಯಕವಾಗಿದೆ.

ಸಂಚಾರ ದಟ್ಟಣೆಯನ್ನು ಕಂಡುಹಿಡಿಯುವ ಮೊಬೈಲ್ ಅಪ್ಲಿಕೇಶನ್
ಸಂಚಾರ ದಟ್ಟಣಿಯ ಕುರಿತು ತಿಳಿಯಲು ಜರ್ಮನ್ ಕಂಪನಿಯ 5 ಜನರು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿ, ರಾಜ್ಯದ ಅಧಿಕಾರಿಗಳೊಂದಿಗೆ ಅಪ್ಲಿಕೇಶನ್ ಅಭಿವೃದ್ದಿಪಡಿಸುವ ಯೋಜನೆ ಬಗ್ಗೆ ಮಾತುಕತೆ ನಡೆಸಿದ್ದರು.

ಸಂಚಾರ ದಟ್ಟಣೆಯನ್ನು ಕಂಡುಹಿಡಿಯುವ ಮೊಬೈಲ್ ಅಪ್ಲಿಕೇಶನ್
ಜರ್ಮನ್ ಕಂಪನಿಯು ತಯಾರಿಸಿರುವ ಅಪ್ಲಿಕೇಶನ್ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಮತ್ತು ಅದರ ನಂತರ ವರ್ಸನ್‌ಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸಲಿದೆ.

ಸಂಚಾರ ದಟ್ಟಣೆಯನ್ನು ಕಂಡುಹಿಡಿಯುವ ಮೊಬೈಲ್ ಅಪ್ಲಿಕೇಶನ್
ಅಪ್ಲಿಕೇಶನ್ ಗೂಗಲ್ ಮ್ಯಾಪ್ಸ್‌ನ ಸಹಾಯದಿಂದ ವಾಹನಗಳ ಸಂಚಾರ ದಟ್ಟಣಿಯನ್ನು ಕಲೆಹಾಕಿ ಅವುಗಳ ವೇಗವನ್ನು ರಿಯಲ್ ಟೈಮ್ ನಲ್ಲಿ ಮಾಹಿತಿ ನೀಡಲಿದೆ. ಈ ಮಾಹಿತಿ ಇಂದ ವಾಹನ ಚಾಲಕರು ಸಂಚಾರ ದಟ್ಟಣಿ ಇರುವ ಮಾರ್ಗವನ್ನು ತಿಳಿದು ಮಾರ್ಗ ಬದಲಿಸಲು ಸಹಾಯಕವಾಗಿದೆ.

ಸಂಚಾರ ದಟ್ಟಣೆಯನ್ನು ಕಂಡುಹಿಡಿಯುವ ಮೊಬೈಲ್ ಅಪ್ಲಿಕೇಶನ್
ಜರ್ಮನಿಯ Bosch ಕಂಪನಿಯು ಈ ಆಪ್ ಅಭಿವೃದ್ದಿಗೆ 4-6 ತಿಂಗಳು ಪೈಲಟ್ ಅಧ್ಯಯನವನ್ನು ಮಾಡಲಿದ್ದು ನಂತರದಲ್ಲಿ ಅಧಿಕೃತವಾಗಿ ಜನತೆಗೆ ತಲುಪಿಸಲಿದೆ. ಹಾಗೂ ಈ ಯೋಜನೆ ಸ್ಮಾರ್ಟ್ ಸಿಟಿಗಳ ಯೋಜನೆಗಳಿಂದಲು ಸಹ ಮುಂಜಾಗ್ರತೆಯಾಗಿ ಸಂಚಾರ ದಟ್ಟಣೆ ಟ್ರ್ಯಾಕ್ ಮಾಡುವ ಆಪ್ ಅಭಿವೃದ್ದಿಪಡಿಸಲು ಸಹಾಯಕವಾಗಿದೆ.


Click it and Unblock the Notifications








