Subscribe to Gizbot

ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲು ಸಾಮಾಜಿಕ ನೆಟ್‌ವರ್ಕ್‌ 'ಟೆಕ್‌ಟುಡ್‌'

Written By:

ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಇಷ್ಟವಾದ ವ್ಯಕ್ತಿಗಳು, ಹಾಗೂ ನಮ್ಮ ಉದ್ದೇಶಗಳಿಗನುಗುಣವಾದ ಅಥವಾ ನಮ್ಮ ವ್ಯಕ್ತಿತ್ವಗಳಿಗೆ ಸರಿಯಾದವರನ್ನು ಗೆಳೆತನ ಮಾಡಿಕೊಳ್ಳುವುದು ಒಂದು ರೀತಿಯಲ್ಲಿ ಕಷ್ಟಕರ. ಕಾರಣ ಎಲ್ಲರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಪೂರ್ಣ ವಿಳಾಸ ನೀಡಿರುವುದಿಲ್ಲ. ಆದರೆ ಇಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಪರಸ್ಪರವಾಗಿ ಉತ್ತಮ ಸಂವಹನ ನಡೆಸಲು ವಿನೂತನ ಸಾಮಾಜಿಕ ಜಾಲತಾಣ ಒಂದು ಅಭಿವೃದ್ದಿಗೊಂಡಿದೆ.

ಓದಿರಿ:ಫೇಸ್‌ಬುಕ್‌'ಗೆ ಎದುರಾಳಿಯಾಗಿ ಬರಲಿದೆ ಗೂಗಲ್‌ ಮೆಸೇಜಿಂಗ್ ಆಪ್‌

ಟೆಕ್‌ಟುಡ್‌, ಎಂಬ ಸಾಮಾಜಿಕ ಜಾಲತಾಣವು ಕೇವಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಮಾತ್ರ ಸಂಪರ್ಕ ಕಲ್ಪಿಸುವ ವಿನೂತನ ಸಾಮಾಜಿಕ ಜಾಲತಾಣವಾಗಿ ಹೊರಹೊಮ್ಮಿದೆ. ಇದು ಎಲ್ಲರಲ್ಲೂ ಕುತೂಹಲ ಮೂಡಿಸುವಂತಹ ಹಾಗೂ ಅಧಿಕ ರೀತಿಯಲ್ಲಿ ಅನುಕೂಲತೆಯನ್ನು ಹೊಂದಿರುವ ಸಾಮಾಜಿಕ ನೆಟ್‌ವರ್ಕ್‌ ಆಗಿದೆ. ಹಾಗಾದರೆ ಒಮ್ಮೆ ಇದರ ಅನುಕೂಲತೆ ಹಾಗೂ ವಿಶೇಷತೆಯನ್ನು ಲೇಖನದ ಸ್ಲೈಡರ್‌ಗಳನ್ನು ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಾಮಾಜಿಕ ನೆಟ್‌ವರ್ಕ್‌

ಟೆಕ್‌ಟುಡ್

ವಿದ್ಯಾರ್ಥಿಗಳು ಮತ್ತು ಶಿಕ್ಷಕ/ಶಿಕ್ಷಕಿಯರಿಗಾಗಿ 'ಟೆಕ್‌ಟುಡ್' ಎಂಬ ಹೊಸ ಸಾಮಾಜಿಕ ನೆಟ್‌ವರ್ಕ್‌ ಅನ್ನು ಅಭಿವೃದ್ದಿಪಡಿಸಲಾಗಿದೆ.

ಸಾಮಾಜಿಕ ಜಾಲತಾಣ

ಟೆಕ್‌ಟುಡ್

ಟೆಕ್‌ಟುಡ್‌ ಸಾಮಾಜಿಕ ಜಾಲತಾಣದಂತೆ ವರ್ತಿಸಲಿದ್ದು, ಇದು ದೇಶದಾದ್ಯಂತ ವಿದ್ಯಾರ್ಥಿಗಳು ಮತ್ತು ಶಿಕ್ಷಕ'/ಶಿಕ್ಷಕಿಯರ ನಡುವೆ ಸಂಪರ್ಕ ಕಲ್ಪಿಸಲಿದೆ.

ಸಾಮಾಜಿಕ ಜಾಲತಾಣ

ಟೆಕ್‌ಟುಡ್

ಪ್ರಖ್ಯಾತ ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್‌ ಕ್ರಿಯೇಟ್‌ ಮಾಡಿದಂತೆಯೇ ಟೆಕ್‌ಟುಡ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರೊಫೈಲ್‌ ಕ್ರಿಯೇಟ್ ಮಾಡಬಹುದಾಗಿದೆ.

ಸಾಮಾಜಿಕ ಜಾಲತಾಣ

ಟೆಕ್‌ಟುಡ್

"ವಿದ್ಯಾರ್ಥಿ ಸಂಭಾವ್ಯ ಉದ್ಯೋಗ ಅವಕಾಶ ಅಥವಾ ಉತ್ಕೃಷ್ಟ ಪ್ರಾಧ್ಯಾಪಕರ ಜೊತೆ ಕೆಲಸ ನಿರ್ವಹಿಸಲು ಅವಕಾಶ ಹುಡುಕುತ್ತಿರುವ ವೇಳೆಯಲ್ಲಿ , ಅಂತಹವರು ಟೆಕ್‌ಟುಡ್‌ ವೇದಿಕೆಯಲ್ಲಿ ವಿವರಗಳನ್ನು ಪಡೆಯಬಹುದಾಗಿದೆ" ಎಂದು ಟೆಕ್‌ಟುಡ್‌ನ ಸಹ-ಸಂಸ್ಥಾಪಕ ಹಾಗೂ ಸಿಇಒ 'ಪ್ರೀತಮ್ ಪ್ರಸನ್‌ ಸುದ್ದಿ ಮೂಲಗಳಿಗೆ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ

ಟೆಕ್‌ಟುಡ್

ಪ್ರಸ್ತುತದಲ್ಲಿ ಪ್ರಾರಂಭದ ವೇಳೆಯಲ್ಲಿ ಇದು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾತ್ರ ಸಂಪರ್ಕ ನೀಡಲಿದ್ದು, ಮುಂದಿನ ದಿನಗಳಲ್ಲಿ ಇದರ ಸೇವೆಯನ್ನು ಇತರ ವಿಭಾಗಗಳಿಗೂ ವಿಸ್ತರಿಸಲಾಗುವುದು ಎಂದು ಸಿಇಒ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ

ಟೆಕ್‌ಟುಡ್

ವಿದ್ಯಾರ್ಥಿಗಳಿಗೆ ಗರಿಷ್ಟ ಮಟ್ಟದಲ್ಲಿ ಇಂಟರ್ನೆಟ್‌ ಮೂಲಕ ಉದ್ಯೋಗ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಐಐಟಿ ಹಾಗೂ ಇತರ ಶಿಕ್ಷಣ ಸಂಸ್ಥೆಗಳು ಇದರೊಂದಿಗೆ ಸಹಭಾಗಿತ್ವ ಹೊಂದಿವೆ.

ಸಾಮಾಜಿಕ ಜಾಲತಾಣ

ಟೆಕ್‌ಟುಡ್

ಆನ್‌ಲೈನ್‌ ಪೊರ್ಟಲ್‌ ಆದ ಟೆಕ್‌ಟುಡ್‌, ಉನ್ನತ ಕಾಲೇಜುಗಳು ಹಾಗೂ ಇತರೆ ಸಂಸ್ಥೆಗಳ ನಡುವೆ ಇರುವ ಪಠ್ಯಕ್ರಮದ ಅಂತರವನ್ನು ಸಹ ಇದು ತಿಳಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Want to connect with the best of academicians in India? Wish to know what is happening in their labs? Log in to Techtud, a new platform that acts as a social network linking students and teachers from across the country.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot