ಬೇಗನೇ ಒಲಾ ಆಟೋ-ಕ್ಯಾಬ್ ಬುಕ್ ಮಾಡಬೇಕಾ..? ಈ ಆಪ್ ಇನ್‌ಸ್ಟಾಲ್ ಮಾಡಿ..!
ದೇಶದ ಪ್ರಮುಖ ನಗರಗಳಲ್ಲಿ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಒಲಾ ತನ್ನ ಗ್ರಾಹಕರಿಗೆ ಹೊಸ ಮಾದರಿಯ ಸೇವೆಯೊಂದನ್ನು ಲಾಂಚ್ ಮಾಡಿದೆ. ಇಷ್ಟು ದಿನ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಲ್ಲ ಮಾತ್ರವೇ ಕಾರ್ಯನಿರ್ವಹಿಸುತ್ತಿದ್ದ ಒಲಾ ಆಪ್ ಅನ್ನು ಹೊಸ ಮಾದರಿಯಲ್ಲಿ ಬಿಡುಗಡೆ ಮಾಡಿದೆ, ಸಾಮಾನ್ಯ ಸ್ಮಾರ್ಟ್‌ಫೋನಿನಲ್ಲಿಯೂ ಕಾರ್ಯನಿರ್ವಹಿಸುವಂತೆ ಮಾಡಿದೆ.

ಓದಿರಿ: ಏರ್‌ಟೆಲ್‌ನಿಂದ ರೂ.1249ಕ್ಕೆ 4G ಸ್ಮಾರ್ಟ್‌ಫೋನು.! ಜೊತೆಗೆ ಹೊಸ ಪ್ಲಾನು..!!
ಸಾಮಾನ್ಯ ಫೋನಿನಲ್ಲಿಯೂ ಬಳಕೆ ಮಾಡಿಕೊಳ್ಳಲು ಸಹಾಯವಾಗುವಂತೆ 'ಒಲಾ ಲೈಟ್' ಆಪ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ. ಇದು ಅತೀ ಕಡಿಮೆ ಗಾತ್ರದಲ್ಲಿ ಇರಲಿದ್ದು, ಮತ್ತು ಅತೀ ವೇಗವಾಗಿ ಕನೆಕ್ಟ್ ಆಗಲಿದೆ ಎಂದು ಒಲಾ ತಿಳಿಸಿದೆ. ಈ ಒಲಾ ಲೈಟ್ ಆಪ್ ಬಗ್ಗೆ ಮಾಹಿತಿ ಇಲ್ಲಿದೆ.

ಒಂದು MB ಗಾತ್ರದ ಆಪ್:
ಒಲಾ ಆಪ್ ಕೇವಲ 1MB ಗಾತ್ರದಲ್ಲಿದೆ ಎನ್ನಲಾಗಿದೆ. ಇದರಿಂದಾಗಿ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಈ ಆಪ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ವೇಗವಾಗಿ ಕಾರ್ಯನಿರ್ವಹಿಸಲಿದ್ದು, ಮೂರು ಸೆಕೆಂಡ್‌ನಲ್ಲಿ ಕಾರು ಬುಕ್ ಮಾಡಲಿಕೊಡಲಿದೆ.

ಸುಲಭವಾಗಿ ಕ್ಯಾಬ್ ಬುಕ್:
ಈ ಲೈಟ್ ಆಪ್‌ನಲ್ಲಿ ಹೆಚ್ಚಾಗಿ ಯಾವುದೇ ಆಯ್ಕೆಗಳು ಇರುವುದಿಲ್ಲ ಎನ್ನಲಾಗಿದೆ. ಇದು ಬಳಕೆದಾರರಿಗೆ ಸುಲಭವಾಗಿ ಕ್ಯಾಬ್ ಬುಕ್ ಮಾಡಿಕೊಡಲಿದೆ ಎನ್ನಲಾಗಿದೆ. ಇದದಿಂದಾಗಿ ಒಲಾ ಪ್ರಯಣ ಮತ್ತಷ್ಟು ಸುಲಭವಾಗಿದೆ. ಸ್ಮಾರ್ಟ್‌ಫೋನ್ ಬಳಕೆ ಮಾಡಲು ಕಲಿಯುತ್ತಿರುವವರು ಸಹ ಇದನ್ನು ಬಳಕೆ ಮಾಡಬಹುದಾಗಿದೆ.

ಎಲ್ಲಾ ನಗರಗಳಿಗೂ ಸೇವೆ:
ದೇಶದ ಪ್ರಮುಖ ನಗರಗಳಲ್ಲದೇ ಇತರೆ ನಗರಗಳಿಗೂ ಈ ಸೇವೆಯನ್ನು ವಿಸ್ತರಿಸಲು ಒಲಾ ಮುಂದಾಗಿದ್ದು, ಆ ಕಾರಣಕ್ಕಾಗಿಯೇ ಲೈಟ್ ಆಪ್ ಅನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ.

ಫೇಸ್‌ಬುಕ್-ಮೇಸೆಂಜರ್ ಮಾದರಿ:
ಇಗಾಗಲೇ ಮಾರುಕಟ್ಟೆಯಲ್ಲಿ ಲೈಟ್ ಆಪ್‌ಗಳು ಸಾಕಷ್ಟು ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಫೇಸ್‌ಬುಕ್-ಮೇಸೆಂಜರ್ ಸೇರಿದಂತೆ ಹಲವು ಆಪ್‌ಗಳು ಲೈಟ್ ಆಗಿ ಕಾಣಿಸಿಕೊಂಡಿದೆ.


Click it and Unblock the Notifications








