Subscribe to Gizbot

ಏರ್‌ಟೆಲ್‌ನಿಂದ ರೂ.1249ಕ್ಕೆ 4G ಸ್ಮಾರ್ಟ್‌ಫೋನು.! ಜೊತೆಗೆ ಹೊಸ ಪ್ಲಾನು..!!

Written By:

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಎಲ್ಲಾ ಕಂಪನಿಗಳ ನಡುವೆ ದರ ಸಮರ ಮಾತ್ರವಲ್ಲದೇ ಕಡಿಮೆ ಬೆಲೆಗೆ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಗ್ರಾಹಕರನ್ನು ಆಕರ್ಷಿಸಿ, ಅವರಿಗೆ ದೀರ್ಘಕಾಲದ ಪ್ಲಾನ್‌ಗಳನ್ನು ನೀಡಿ ತಮ್ಮಲ್ಲೇ ಉಳಿಸಿಕೊಳ್ಳುವ ಪ್ರಯೋಗವನ್ನು ಮಾಡಲಾಗುತ್ತಿದೆ.

ಏರ್‌ಟೆಲ್‌ನಿಂದ ರೂ.1249ಕ್ಕೆ 4G ಸ್ಮಾರ್ಟ್‌ಫೋನು.! ಜೊತೆಗೆ ಹೊಸ ಪ್ಲಾನು..!!

ಓದಿರಿ: ಶಿಯೋಮಿ ಅಲೆ ಅಳಿಸಲಿದೆ 10.or D ಸ್ಮಾರ್ಟ್‌ಪೋನ್‌: ರೂ.5000ಕ್ಕೆ ಎಷ್ಟೇಲ್ಲಾ ನೀಡುತ್ತಿದೆ ಗೊತ್ತಾ..?

ಈ ಹೊಸ ಮಾದರಿಯನ್ನು ಹೇಳಿಕೊಟ್ಟಿದ್ದು ಜಿಯೋ, ಮೊದಲಿಗೆ ಜಿಯೋ ಫೋನ್ ನೀಡುವ ಮೂಲಕ. ನಂತರದಲ್ಲಿ ಏರ್‌ಟೆಲ್‌ ಈಗಾಗಲೇ ಮಾರುಕಟ್ಟೆಗೆ ಸಾಕಷ್ಟು ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದಕ್ಕೆ ಹೊಸ ಸೇರ್ಪಡೆ ಸೆಲ್ಕಾನ್ ಫೋನ್, ಜಿಯೋ ಫೋನಿಗೆ ಸೆಡ್ಡು ಹೊಡೆಯುವ ಸಲುವಾಗಿ ರೂ.1249 ನೀಡುತ್ತಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೆಲ್ಕಾನ್ ಸ್ಟಾರ್ 4G+ ಸ್ಮಾರ್ಟ್‌ಫೋನ್:

ಸೆಲ್ಕಾನ್ ಸ್ಟಾರ್ 4G+ ಸ್ಮಾರ್ಟ್‌ಫೋನ್:

ಏರ್‌ಟೆಲ್ ತನ್ನ ಬಳಕೆದಾರರಿಗೆ ಸೆಲ್ಕಾನ್ ಸ್ಟಾರ್ 4G+ ಸ್ಮಾರ್ಟ್‌ಫೋನ್ ಅನ್ನು ರೂ.1249ಕ್ಕೆ ಮಾರಾಟ ಮಾಡುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಅತೀ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಇದಾಗಿದೆ. ಈ ಫೋನಿನೊಂದಿಗೆ ಏರ್‌ಟೆಲ್ ರೂ.169 ಟ್ಯಾರಿಫ್ ಪ್ಲಾನ್‌ ಅನ್ನು ನೀಡಲಾಗಿದೆ.

ರೂ.169 ಪ್ಲಾನ್:

ರೂ.169 ಪ್ಲಾನ್:

ಈ ಪ್ಲಾನ್‌ನಲ್ಲಿ ಏರ್‌ಟೆಲ್‌ ಬಳಕೆದಾರರು 28 ದಿನಗಳ ವ್ಯಾಲಿಡಿಟಿಯನ್ನುನ ಪಡೆದುಕೊಳ್ಳಲಿದ್ದಾರೆ. ಅಲ್ಲದೇ ಪ್ರತಿ ನಿತ್ಯ 500 MB ಡೇಟಾವನ್ನು ಏರ್‌ಟೆಲ್‌ ನೀಡಲಿದೆ ಎನ್ನಲಾಗಿದೆ. ಇದರೊಂದಿಗೆ ಅನ್‌ಲಿಮಿಟೆಡ್ ಕರೆಗಳನ್ನು ಉಚಿತವಾಗಿ ಮಾಡಬಹುದಾಗಿದೆ. ಮಾರುಕಟ್ಟೆಯ ಬೆಸ್ಟ್ ಆಫರ್ ಇದು ಎನ್ನಲಾಗಿದೆ.

ಕ್ಯಾಷ್ ಬ್ಯಾಕ್:

ಕ್ಯಾಷ್ ಬ್ಯಾಕ್:

ಏರ್‌ಟೆಲ್ ಸೆಲ್ಕಾನ್ ಸ್ಟಾರ್ 4G+ ಸ್ಮಾರ್ಟ್‌ಫೋನ್ ಮೇಲೆ ಕ್ಯಾಷ್ ಬ್ಯಾಕ್ ಆಫರ್ ನೀಡಲಿದೆ. ಮೊದಲಿಗೆ ಗ್ರಾಹಕರು ರೂ.2749 ನೀಡಿ ಫೋನ್ ಖರೀದಿ ಮಾಡಬೇಕು ಇದಾದ ಮೇಲೆ ಪ್ರತಿ ತಿಂಗಳು ರೂ.169 ಪ್ಲಾನ್ ಏರ್‌ಟೆಲ್ ರೀಚಾರ್ಜ್ ಮಾಡಿಸಿಕೊಳ್ಳಬೇಕು.

ಕ್ಯಾಷ್ ಬ್ಯಾಕ್ ಹೇಗೆ..?

ಕ್ಯಾಷ್ ಬ್ಯಾಕ್ ಹೇಗೆ..?

ಮೊದಲ 18 ತಿಂಗಳ ನಂತರ ರೂ.500 ಕ್ಯಾಷ್ ಬ್ಯಾಕ್, ಇದಾದ ಮೇಲೆ 36 ತಿಂಗಳ ನಂತರ ರೂ.1000 ಕ್ಯಾಷ್ ಬ್ಯಾಕ್ ಬರಲಿದ್ದು, ಇದರಿಂದಾಗಿ ಗ್ರಾಹಕರಿಗೆ ರೂ.1500 ಕ್ಯಾಷ್ ಬ್ಯಾಕ್ ದೊರೆಯಲಿದೆ ಎನ್ನಲಾಗಿದೆ.

ಫೋನ್ ಹೇಗಿದೆ?

ಫೋನ್ ಹೇಗಿದೆ?

ಸೆಲ್ಕಾನ್ ಸ್ಟಾರ್ 4G+ ಸ್ಮಾರ್ಟ್‌ಫೋನ್ ನಲ್ಲಿ 4 ಇಂಚಿನ WVGA ಡಿಸ್‌ಪ್ಲೇ, ಕ್ವಾಡ್ ಕೋರ್ ಪ್ರೋಸೆಸರ್, 512MB ಪ್ರೋಸೆಸರ್ ಮತ್ತು 4GB ಇಂಟರ್ನಲ್ ಮೆಮೊರಿ ನೀಡಲಾಗಿದೆ. ಅಲ್ಲದೇ ಹಿಂಭಾಗದಲ್ಲಿ 3.2MP ಕ್ಯಾಮೆರಾ ಮುಂಭಾಗದಲ್ಲಿ 2MP ಕ್ಯಾಮೆರಾ ಅಳವಡಿಸಲಾಗಿದೆ, ಜೊತೆಗೆ 1800mAh ಬ್ಯಾಟರಿಯೂ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Airtel Announces 4G Smartphone at an Effective Price of Rs 1,249. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot