Subscribe to Gizbot

ಒಲಾ ಆಟೊ ಬುಕ್ ಮಾಡಿ.. 4 ಕಿ.ಮೀಗೆ ಕೇವಲ 29 ರೂ...!!!

Written By:

ಮೊಬೈಲ್ ಆಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುತ್ತಿತುವ ಒಲಾ ಕ್ಯಾಬ್ ವಿರುದ್ದ ಕಾರು ಚಾಲಕರು ಮತ್ತು ಮಾಲಿಕರು ಪ್ರತಿಭಟನೆ ನಡೆಸುತ್ತಿದ್ದರೆ ಇತ್ತ ಒಲಾ ಕಂಪೆನಿ 1.20 ಲಕ್ಷಕ್ಕೂ ಹೆಚ್ಚು ಆಟೋಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.!

ಆಟೋ ಪ್ರಯಾಣಿಕರಿಗೆ ಅಚ್ಚರಿಯ ಕೊಡುಗೆಗಳನ್ನು ಘೋಷಿಸಿರುವ ಒಲಾ 4 ಕಿ.ಮೀಟರ್ ದೂರವನ್ನು ಕೇವಲ 29 ರೂಪಾಯಿಗಳ ದರದಲ್ಲಿ ಪ್ರಯಾಣಿಸುವ ಆಫರ್ ನೀಡಿದೆ.!! ಇನ್ನು ಈ ಆಫರ್ ಸೀಮಿತ ಅವಧಿಗೆ ಇರುವುದಾಗಿ ಒಲಾ ತಿಳಿಸಿದ್ದು, ಗ್ರಾಹಕರು ಈ ಅವಧಿಯಲ್ಲಿ ಆಫರ್ ಬಳಕೆ ಮಾಡಿಕೊಳ್ಳಬಹುದು.!

ಒಲಾ ಆಟೊ ಬುಕ್ ಮಾಡಿ.. 4 ಕಿ.ಮೀಗೆ ಕೇವಲ 29 ರೂ...!!!

ಜಿಯೋ ವಿರುದ್ದ ಕರ್ನಾಟಕದಲ್ಲಿ ಪ್ರತಿಭಟನೆ!! ಏಕೆ ಗೊತ್ತಾ?

ಇತ್ತೀಚಿಗೆ ಕಾರು ಚಾಲಕರು ಒಲಾ ವಿರುದ್ದ ಪ್ರತಿಭಟನೆ ನಡೆಸಿದ್ದರಿಂದ ಒಲಾ ಆಟೋ ಚಾಲಕರನ್ನು ಸೆಳೆಯಲು ಮನಸ್ಸು ಮಾಡಿದೆ. ಆಟೊ ಚಾಲಕರಿಗೂ ಕೈ ತುಂಬ ಆದಾಯ ನೀಡುತ್ತಿರುವ ಒಲಾ ತಿಂಗಳಿಗೆ ಕನಿಷ್ಠ 40,000 ದಿಂದ 50,000 ರೂಪಾಯಿಗಳ ಲಾಭ ಗಳಿಸಬಹುದು ಎಂದು ಹೇಳಿದೆ.!!

ಒಲಾ ಆಟೊ ಬುಕ್ ಮಾಡಿ.. 4 ಕಿ.ಮೀಗೆ ಕೇವಲ 29 ರೂ...!!!

ಒಲಾದಲ್ಲಿ ಕ್ಯಾಬ್‌ ನೋಂದಾಯಿಸುವ ರೀತಿಯಲ್ಲಿಯೇ ಆಟೊ ಚಾಲಕರು ಕೆವೈಸಿ ಪ್ರಕ್ರಿಯೇಯಲ್ಲಿ ಒಲಾಗೆ ಸೇರಬಹುದಾಗಿದ್ದು, ಚಾಲಕರಿಗೆ ಈ ಬಗ್ಗೆ ಪ್ರಾಥಮಿಕ ತರಬೇತಿಯನ್ನು ನೀಡುವುದಾಗಿ ಹೇಳಿದೆ. ಇನ್ನು ಹೊಸದಾಗಿ ಆಟೊ ಖರೀದಿಸುವವರಿಗೆ ಸಾಲ ಸೌಲಭ್ಯ ಒದಗಿಸುವುದಾಗಿಯೂ ಒಲಾ ತಿಳಿಸಿದೆ.

Read more about:
English summary
With over 1 lakh autos already registered on the platform. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot