ಐಪಿಎಲ್ ಪ್ರಿಯರ ಕಿಕ್ ಏರಿಸಲು ಬರುತ್ತಿದೆ ‘ಒಪೆರಾ ಕ್ರಿಕೆಟ್’: ಏನಿದು? ಇಲ್ಲಿದೆ ಮಾಹಿತಿ’

By: Precilla Dias

ಐಪಿಎಲ್ ಪ್ರಿಯರನ್ನು ಮನರಂಜಿಸಲು 10ನೇ ಆವೃತ್ತಿಗೆ ಭರ್ಜರಿ ಆರಂಭ ಸಿಕ್ಕಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಗೆಲ್ಲಬೇಕೆಂಬ ಹುಮ್ಮಸ್ಸಿನಲ್ಲಿ ಪಂದ್ಯ ವೀಕ್ಷಿಸುತ್ತಿದ್ದಾರೆ. ಇದೀಗ ಈ ಅಭಿಮಾನಿಗಳ ಕಿಕ್ ಏರಿಸಲು ಒಪೆರಾ ಬ್ರೌಸರ್’ನ, ಒಪೆರಾ ಮಿನಿ ಮೊಬೈಲ್ ಹಾಗೂ ಟ್ಯಾಬ್ಲೆಟ್ ವರ್ಶನ್’ನಲ್ಲಿ 'ಒಪರಾ ಕ್ರಿಕೆಟ್’ ಎಂಬ ನೂತನ ಫೀಚರ್ ಒಂದನ್ನು ಇಂದು ಪರಿಚಯಿಸಿದೆ.

ಐಪಿಎಲ್ ಪ್ರಿಯರ ಕಿಕ್ ಏರಿಸಲು ಬರುತ್ತಿದೆ ‘ಒಪೆರಾ ಕ್ರಿಕೆಟ್’: ಏನಿದು?

'ಒಪೆರಾ ಕ್ರಿಕೆಟ್’ನಲ್ಲಿ ಏನೇನಿರುತ್ತೆ?

ಈ ಹೊಸ ಫೀಚರ್ ಬಳಕೆದಾದರರಿಗೆ ಕ್ರಿಕೆಟ್’ನ ಲೈವ್ ಸ್ಕೋರ್, ಕಮೆಂಟರಿ, ವಿಡಿಯೋ ಹಾಗೂ ನೋಟಿಫಿಕೇಷನ್ ಸೇರಿದಂತೆ ಐಪಿಎಲ್’ಗೆ ಸಂಬಂಧಿಸಿದ ಇನ್ನೂ ಹಲವಾರು ಮಾಹಿತಿಗಳನ್ನು ನೀಡಲಿದೆ. ಒಪೆರಾ ಮಿನಿ ಬ್ರೌಸರ್ ಇರುವ ಆ್ಯಂಡ್ರಾಯ್ಡ್ ಫೋನ್’ಗಳಲ್ಲಿ 'ಒಪೆರಾ ಕ್ರಿಕೆಟ್ ಸೇವೆಗಳು’ ಲಭ್ಯವಿದೆ. ಆದರೆ ಒಪೆರಾ ಮಿನಿಯನ್ನು ಲೇಟೆಸ್ಟ್ ಆವೃತ್ತಿಗೆ ಅಪ್’ಗ್ರೇಡ್ ಮಾಡಿಸಿಕೊಂಡ ಬಳಕೆದಾರರು 'Get Started’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ಈ ಹೊಸ ಫೀಚರ್’ನ್ನು ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು.

ಐಫೋನ್ ಖರೀದಿಸಲಿರುವವರಿಗೆ ಸಿಹಿಸುದ್ದಿ!: ಐಫೋನ್ 8ರಲ್ಲಿ ಇರಲಿದೆ 'ಟ್ರೂ ಟೋನ್ ಡಿಸ್ಪ್ಲೇ'!!

ಇದಾದ ಬಳಿಕ ಯಾವುದೇ ತೊಡಕಿಲ್ಲದೆ ಐಪಿಎಲ್ ಸ್ಕೋರ್’ಗಳನ್ನು ನೋಡಬಹುದಲ್ಲದೆ. ಇತರ ಯಾವುದೇ ಆ್ಯಪ್’ಗಳ ಸಹಾಯವಿಲ್ಲದೆ ಆ ಕೂಡಲೇ ವಿಡಿಯೋಗಳನ್ನೂ ಡೌನ್’ಲೋಡ್ ಮಾಡಿಕೊಳ್ಳಬಹುದಾಗಿದೆ.

ಇಲ್ಲರುವ 'What’s On’ ಸೆಕ್ಷನ್ ಪಂದ್ಯಗಳು ನಡೆಯುತ್ತಿರುವಾಗ ಅಪ್’ಡೇಟ್ ಆದ ಡೇಟಾಗಳನ್ನು ನೀಡುವುದಲ್ಲದೆ, ಫೈನಲ್ ಸ್ಕೋರ್ ಹಾಗೂ ಪ್ರತಿ ನಿಮಿಷದ ಕಮೆಂಟರಿಗಳನ್ನು ಪ್ರಸ್ತುತಪಡಿಸಲಿವೆ.

ಐಪಿಎಲ್ ಪ್ರಿಯರ ಕಿಕ್ ಏರಿಸಲು ಬರುತ್ತಿದೆ ‘ಒಪೆರಾ ಕ್ರಿಕೆಟ್’: ಏನಿದು?

ಒಪೆರಾ ಕ್ರಿಕೆಟ್ ಡೆವಲಪ್ ಮಾಡಿದ ಹಿಂದಿನ ಕಾರಣವೇನು?

ಸೌತ್ ಏಷ್ಯಾ ಹಾಗೂ ಸೌತ್ ಈಸ್ಟ್ ಏಷ್ಯಾದ ಒಪೆರಾ ಸಾಫ್ಟ್’ವೇರ್’ನ ಉಪಾಧ್ಯಕ್ಷ ಸುನೀಲ್ ಕಾಮತ್ ಈ ನೂತನ ಫೀಚರ್ ಕುರಿತಾಗಿ ಮಾಹಿತಿ ನೀಡುತ್ತಾ 'ನಾವು ಭಾರತೀಯರು ಕ್ರಿಕೆಟ್’ಗಾಗಿ ಬದುಕುತ್ತೇವೆ. ನಾವ್ಯಾರೂ ಕ್ರಿಕೆಟ್’ನ್ನು ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ. ಹೀಗಾಗಿಯೇ ನಾವು ಒಪೆರಾ ಮಿನಿಯಲ್ಲಿ ಈ ನೂತನ ಫೀಚರ್’ನ್ನು ಪರಿಚಯಿಸಿದ್ದೇವೆ. ಇದು ಒಪೆರಾ ಮಿನಿ ಬಳಸುವ ಕ್ರಿಕೆಟ್ ಅಭಿಮಾನಿಗಳಿಗೆ ಇದಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಅತ್ಯಂತ ಶೀಘ್ರವಾಗಿ ಪಡೆಯಲು ಸಹಾಯಕವಾಗಲಿದೆ’ ಎಂದು ಹೇಳಿದ್ದಾರೆ.

ಬಳಕೆ ಹೇಗೆ?

ಪಂದ್ಯಗಳು ಆರಂಭವಾಗುವ ಮುನ್ನ ನೋಟಿಫಿಕೇಷನ್ ಪಡೆಯಲು ಬಳಕೆದಾರರು ಪ್ರತಿಯೊಂದು ಮ್ಯಾಚ್’ಗಳಿಗೂ ಚಂದಾದಾರರಾಗಬೇಕಾಗುತ್ತದೆ. ಇದ್ಕಾಗಿ ಬಳಕೆದಾರರು ಮಾಹಿತಿ ಬಯಸುವ ಪಂದ್ಯಗಳನ್ನು ಆಯ್ಕೆ ಮಾಡಿ ನೀಡಿದ ಬಟನ್’ನನ್ನು ಎಡಕ್ಕೆ ತಳ್ಳಬೇಕಾಗುತ್ತದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಐಪಿಎಲ್ ಕಿಚ್ಚು ಹತ್ತಿರುವ ಸಂದರ್ಭದಲ್ಲೇ ಒಪೆರಾ ಬ್ರೌಸರ್’ನ ಈ ನೂತನ ಫೀಚರ್ ಅಭಿಮಾನಿಗಳ ಕಿಕ್ ಹೆಚ್ಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕಿಕ್’ನೊಂದಿಗೆ ಕಂಪೆನಿಗೂ ಲಾಭವಾಗುವುದು ಖಚಿತ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Read more about:
English summary
Recently, Opera Mini has introduced its new features which not only let users access more of the web but also facilitate them to get the content they want. The new download manager makes video and music downloads easier.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot