Subscribe to Gizbot

ಭಾರತೀಯರ ಡಿಜಿಟಲ್ ವೇಗಕ್ಕೆ ಬೆಪ್ಪಾದ ವಿದೇಶಿ ಕಂಪೆನಿಗಳು!.ಪೇಪಲ್ ಸೇವೆ ಈಗ ದೇಶದಲ್ಲಿಯೂ ಲಭ್ಯ!!

Written By:

ಭಾರತೀಯರು ಡಿಜಿಟಲ್ ಯುಗಕ್ಕೆ ಕಾಲಿಡುತ್ತಿರುವ ವೇಗಕ್ಕೆ ಬೆಪ್ಪಾಗಿ ನೋಡುತ್ತಿರುವ ಅಂತರಾಷ್ಟ್ರೀಯ ಕಂಪೆನಿಗಳು ಕೂಡ ಇದೀಗ ಭಾರತದ ಕಡೆ ಮುಖ ಮಾಡಿವೆ.! ಹೌದು, ಜಾಗತಿಕ ಡಿಜಿಟಲ್‌ ಪಾವತಿ ಸಂಸ್ಥೆ ಪೇಪಲ್ (PayPal) ಈಗ ಭಾರತದಲ್ಲಿ ತನ್ನ ವಹಿವಾಟು ವಿಸ್ತರಿಸಲು ಮುಂದಾಗಿದೆ.!!

ಹಲವು ವರ್ಷಗಳಿಂದ ಭಾರತದ ವರ್ತಕರಿಗೆ ವಿದೇಶ ಪಾವತಿ ಸೌಲಭ್ಯವನ್ನು ಒದಗಿಸುತ್ತಿದ್ದ ಪೇಪಲ್ ಹೋಲ್ಡಿಂಗ್ ಇಂಕ್ಸ್ (PayPal) ಸಂಸ್ಥೆಯು ಈಗ ಭಾರತದಲ್ಲಿ ನಗದುರಹಿತ ವಹಿವಾಟಿನ ಮಾರುಕಟ್ಟೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲು ಸಜ್ಜಾಗಿದೆ. ಶೀಘ್ರದಲ್ಲಿಯೇ ಸಂಸ್ಥೆಯು ಮೊಬೈಲ್‌ ವಾಲೆಟ್‌ ಸೇವೆಗೆ ಚಾಲನೆ ನೀಡಲಿದೆ.!!

ಭಾರತೀಯರ ಡಿಜಿಟಲ್ ವೇಗಕ್ಕೆ ಬೆಪ್ಪಾದ ವಿದೇಶಿ ಕಂಪೆನಿ!.ಪೇಪಲ್ ಸೇವೆ ಈಗ ದೇಶದಲ್ಲಿ!

ಹಾಗಾಗಿ, ದೇಶಿ ಗ್ರಾಹಕರು ಆನ್‌ಲೈನ್‌ನಲ್ಲಿ ಇರುವ ಭಾರತದ ಜನಪ್ರಿಯ ಆಯ್ದ ತಾಣಗಳಲ್ಲಿ ಇನ್ನು ಮುಂದೆ ಪೇಪಲ್ ಮೂಲಕ ಸರಕುಗಳನ್ನು ಖರೀದಿಸಬಹುದಾಗಿದ್ದು, ಭಾರತೀಯರು ಒಂದೇ ಖಾತೆಯ ನೆರವಿನಿಂದ ದೇಶಿ ಮತ್ತು ವಿದೇಶಗಳಲ್ಲಿಯೂ ಆನ್‌ಲೈನ್‌ ವಹಿವಾಟು ನಡೆಸಲು ಇನ್ನು ಮುಂದೆ ಅವಕಾಶ ಒದಗಲಿದೆ.!!

ಭಾರತೀಯರ ಡಿಜಿಟಲ್ ವೇಗಕ್ಕೆ ಬೆಪ್ಪಾದ ವಿದೇಶಿ ಕಂಪೆನಿ!.ಪೇಪಲ್ ಸೇವೆ ಈಗ ದೇಶದಲ್ಲಿ!

ಪೇಪಲ್ ಸಂಸ್ಥೆಯು ತನ್ನ ಜಾಗತಿಕ ಇತರ ಸೇವೆಗಳಾದ ವರ್ತಕರಿಗೆ ಸಾಲ ಮತ್ತು ವಿದೇಶಗಳಿಂದ ಹಣ ಪಾವತಿ ಸೌಲಭ್ಯಗಳನ್ನೂ ಸಹ ಭಾರತದಲ್ಲಿ ಪರಿಚಯಿಸಲಿದ್ದು, ಭಾರತದಲ್ಲಿನ ನಮ್ಮ ವಹಿವಾಟು ವಿಸ್ತರಣೆಯ ಓಟ ಈಗಷ್ಟೇ ಆರಂಭವಾಗಿದೆ ಎಂದು ಪೇಪಲ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಪಹುಜಾ ಹೇಳಿದ್ದಾರೆ.!!

ಓದಿರಿ: 5G ತಂತ್ರಜ್ಞಾನ ಅಳವಡಿಸಿಕೊಂಡ ವಿಶ್ವದ ಮೊದಲ ಟೆಲಿಕಾಂ ವೊಡಾಫೋನ್!..ಸ್ಪೀಡ್ ಎಷ್ಟು ಗೊತ್ತಾ?!

English summary
Under its services, PayPal India will offer global Indians a single account for their domestic and cross-border transactions.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot