ಪೇಟಿಎಂ ಬಳಕೆದಾರರೇ ಈ ಸ್ಟೋರಿ ನೋಡಿ: ನೀವು 2% ಶುಲ್ಕ ಕಟ್ಟಬೇಕಾದಿತು..!!

ಪೇಟಿಎಂ ವ್ಯಾಲೆಟ್ ಖಾತೆಗೆ ಕ್ರೆಡಿಟ್ ಕಾರ್ಡ್‌ನಿಂದ ಹಣ ತುಂಬಿಸುವವರಿಗೆ 2% ಶುಲ್ಕ ವಿಧಿಸಲು ಮುಂದಾಗಿದೆ.

|

ದೇಶದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಹೆಚ್ಚಾದ ಹಿನ್ನಲೆಯಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಪೇಟಿಎಂ, ಗ್ರಾಹಕರಿಗೆ ಸುಲಭ ರೀತಿಯಲ್ಲಿ ಸೇವೆಯನ್ನು ನೀಡಿತ್ತು. ಗ್ರಾಹಕರು ಮತ್ತು ವ್ಯಾಪಾರಿಗಳು ಇದರ ಬಳಕೆ ಹೆಚ್ಚು ಮಾಡಿದರು. ಈ ಹಿನ್ನಲೆಯಲ್ಲಿ ಪೇಟಿಎಂ ವ್ಯಾಲೆಟ್ ಖಾತೆಗೆ ಕ್ರೆಡಿಟ್ ಕಾರ್ಡ್‌ನಿಂದ ಹಣ ತುಂಬಿಸುವವರಿಗೆ 2% ಶುಲ್ಕ ವಿಧಿಸಲು ಮುಂದಾಗಿದೆ.

ಪೇಟಿಎಂ ಬಳಕೆದಾರರೇ ಈ ಸ್ಟೋರಿ ನೋಡಿ: ನೀವು 2% ಶುಲ್ಕ ಕಟ್ಟಬೇಕಾದಿತು..!!

ಇದನ್ನು ಓದಿರಿ: ಜಿಯೋ ಪ್ರೈಮ್ ಮೆಂಬರ್‌ಶಿಪ್ ಆರಂಭ: ನೀವು ತಿಳಿಯಬೇಕಾದ ವಿಷಯಗಳು.!!!

ಕೆಲವು ಗ್ರಾಕರು ಉಚಿತ ಸೇವೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಹಿನ್ನಲೆಯಲ್ಲಿ ಪೇಟಿಎಂ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದ್ದು, ತನ್ನ ನಂಬಿಕೆಯ ಗ್ರಾಹಕರಿಗೆ ಇದರಿಂದ ಹೊರೆಯಾಗುವುದಿಲ್ಲ ಎಂದಿರುವ ಪೇಟಿಎಂ, 2% ಶುಲ್ಕದ ಬದಲಿಗೆ ಉಚಿತ ಕೂಪನ್ ನೀಡುವ ಭರವಸೆಯನ್ನು ನೀಡಿದ್ದು, ಇದನ್ನು ಪೇಟಿಎಂ ಪ್ಲಾಟ್‌ಫಾರ್ಮ್‌ನಲ್ಲಿ ಬಳಸಬಹುದಾಗಿದೆ.

ಪೇಟಿಎಂ ವ್ಯಾಲೆಟಿನಿಂದ ಹಣವನ್ನು ಬ್ಯಾಂಕ್ ಅಕೌಂಟಿಗೆ ವರ್ಗಾವಣೆ ಮಾಡಲು ಯಾವುದೇ ಹಣವನ್ನು ನೀಡಬೇಕಾಗಿರಲಿಲ್ಲ. ಇದರ ಲಾಭ ಪಡೆಯಲು ಮುಂದಾದ ಕ್ರೆಟಿಡ್ ಕಾರ್ಡ್‌ದಾರರು, ತಮ್ಮ ಕ್ರೆಡಿಟ್ ಕಾರ್ಡಿನಿಂದ ಹಣವನ್ನು ಪೇಟಿಎಂ ವ್ಯಾಲೆಟಿಗೆ ತುಂಬಿಸಿ ನಂತರ ಅದನ್ನು ಉಚಿತವಾಗಿ ಬ್ಯಾಂಕ್ ಖಾತೆಗೆ ವರ್ಗಹಿಸಿ ಯಾವುದೇ ಶುಲ್ಕವಿಲ್ಲದೇ ಹಣವನ್ನು ತೆಗೆದುಕೊಳ್ಳುತ್ತಿದ್ದರು.

ಹೀಗೆ ಹಣವನ್ನು ಭರ್ತಿ ಮಾಡಿದ ಸಮಯದಲ್ಲಿ ಮತ್ತು ಬ್ಯಾಂಕಿಗೆ ಹಣವನ್ನು ಕಟ್ಟುವ ಸಂದರ್ಭದಲ್ಲಿ ಪೇಟಿಎಂನಿಂದ ರಿವರ್ಡ್ ಪಾಯಿಂಟ್‌ಗಳನ್ನು ಪಡೆದುಕೊಳ್ಳುತ್ತಿದ್ದರು. ಇದನ್ನು ತಡೆಯಲು ಮುಂದಾಗಿರುವ ಪೇಟಿಎಂ ಕ್ರೆಡಿಟ್ ಕಾರ್ಡ್ ನಿಂದ ವ್ಯಾಲೆಟ್ ಭರ್ತಿ ಮಾಡುವವರಿಗೆ 2% ಶುಲ್ಕವನ್ನು ವಿಧಿಸುವ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

ಪೇಟಿಎಂ ಬಳಕೆದಾರರೇ ಈ ಸ್ಟೋರಿ ನೋಡಿ: ನೀವು 2% ಶುಲ್ಕ ಕಟ್ಟಬೇಕಾದಿತು..!!

ಇದನ್ನು ಓದಿರಿ: ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

2% ಶುಲ್ಕವನ್ನು ಪಾವತಿಸುವವರಿಗೆ ಅಷ್ಟೆ ಮೌಲ್ಯದ ಕೂಪನ್ ದೊರೆಯಲಿದ್ದು, ಇದನ್ನು ಉದಾ; ಸ್ವ್ಯಾಗಿ, ಉಬರ್ ಮುಂತಾದ ಕಡೆಗಳಲು ಬಳಸಬಹುದು ಎಂದು ಪೇಟಿಎಂ ತಿಳಿಸಿದೆ. ಅಲ್ಲದೇ 250 ರೂಗಳಿಗಿಂತಲೂ ಹೆಚ್ಚಿನ ಹಣವನ್ನು ತುಂಬಿದವರಿಗೆ ಮಾತ್ರ ಕೂಪನ್ ದೊರೆಯಲಿದೆಯಂತೆ.

Best Mobiles in India

Read more about:
English summary
Digital payments firm Paytm on Wednesday announced that it will charge a 2 percent deposit fee from users who top up their Paytm Wallet using credit cards. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X