Home
Apps

ಪಿನ್‌ಕೋಡ್ ಆಪ್‌ ಲಾಂಚ್‌ ಮಾಡಿದ ಫೋನ್‌ಪೇ: ಈ ಹೊಸ ಶಾಪಿಂಗ್‌ ಆಪ್‌ ಬಗ್ಗೆ ತಿಳಿಯಿರಿ

ಭಾರತದಲ್ಲಿ ಬಹುಪಾಲು ಎಲ್ಲಾ ವ್ಯವಸ್ಥೆ ಡಿಜಿಟಲೀಕರಣವಾಗುತ್ತಿದ್ದಂತೆ ಹಣದ ವ್ಯವಹಾರವೂ ಸಹ ಬಹಳ ಮಟ್ಟಿಗೆ ಯುಪಿಐನಲ್ಲೇ ನಡೆಯುತ್ತಿದೆ. ಇದಕ್ಕಾಗಿ ಫೋನ್‌ ಪೇ, ಗೂಗಲ್ ಪೇ ಹಾಗೂ ಪೇಟಿಎಮ್‌ ಸೇರಿದಂತೆ ವಿವಿಧ ಆಪ್‌ಗಳು ಬಳಕೆದಾರರ ಯುಪಿಐ ಪಾವತಿಯನ್ನು ಸರಳಗೊಳಿಸುತ್ತಿದ್ದು, ಈ ನಡುವೆ ಫೋನ್‌ಪೇ ತನ್ನ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ.

ಹೌದು, ಫೋನ್‌ಪೇ ಇದೀಗ ಪಿನ್‌ಕೋಡ್ (Pincode) ಎಂಬ ಆಪ್ ಅನ್ನು ಪರಿಚಯಿಸಿದ್ದು, ಈ ಪಿನ್‌ಕೋಡ್‌ ಮೂಲಕ ಬಳಕೆದಾರರು ಇನ್ಮುಂದೆ ಅಗತ್ಯ ದೈನಂದಿನ ಬಳಕೆಯ ವಸ್ತುಗಳನ್ನು ಆರ್ಡರ್ ಮಾಡಬಹುದಾಗಿದೆ. ಹಾಗಿದ್ರೆ, ಏನಿದು ಪಿನ್‌ಕೋಡ್?, ಇದರಿಂದ ಬಳಕೆದಾರರಿಗೆ ಆಗುವ ಲಾಭ ಏನು, ಯಾವ ಉದ್ದೇಶಕ್ಕೆ ಫೋನ್‌ ಪೇ ಇದನ್ನು ಪರಿಚಯಿಸಿದೆ? ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಪಿನ್‌ಕೋಡ್ ಆಪ್‌ ಲಾಂಚ್‌ ಮಾಡಿದ ಫೋನ್‌ಪೇ:  ಹೊಸ ಶಾಪಿಂಗ್‌ ಆಪ್‌ ಬಗ್ಗೆ ತಿಳಿಯಿರಿ

ಏನಿದು ಪಿನ್‌ಕೋಡ್‌?: ಯುಪಿಐ ಮೂಲಕ ಮಾಡುವ ಒಟ್ಟು ವಹಿವಾಟಿನ ಶೇಕಡಾ 50 ರಷ್ಟನ್ನು ಫೋನ್ ಪೇ ಮೂಲಕವೇ ಮಾಡಲಾಗುತ್ತದೆ. ಅದರಂತೆ ಫೋನ್‌ಪೇ ONDC(ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್)ಯ ಭಾಗವಾಗಿರುವ ಪಿನ್‌ಕೋಡ್ ಎಂಬ ಹೊಸ ಆಪ್‌ ಅನ್ನು ಲಾಂಚ್‌ ಮಾಡಿದೆ. ಅದರಂತೆ ಡಿಜಿಟಲ್ ಅಥವಾ ಎಲೆಕ್ಟ್ರಾನಿಕ್ ನೆಟ್‌ವರ್ಕ್‌ಗಳ ಮೂಲಕ ಸರಕು ಮತ್ತು ಸೇವೆಗಳನ್ನು ವಿನಿಮಯ ಮಾಡಿಕೊಳ್ಳಬಹುದು.

ಬೆಂಗಳೂರಿಗರಿಗೆ ಸೇವೆ: ಸದ್ಯ ಬೆಂಗಳೂರಿನಲ್ಲಿ ಈ ಹೊಸ ಆಪ್‌ ಅನ್ನು ಪರಿಚಯಿಸಿದ್ದು, ಈ ಅಪ್ಲಿಕೇಶನ್ ಮೂಲಕ, ಜನರು ದಿನಸಿ, ಔಷಧಿಗಳು ಮತ್ತು ಆಹಾರ ಪದಾರ್ಥಗಳನ್ನು ಆರ್ಡರ್ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಹಾಗೆಯೇ ಈ ಅಪ್ಲಿಕೇಶನ್ ಅನ್ನು ಕ್ರಮೇಣ ಇತರ ನಗರಗಳಲ್ಲಿಯೂ ಪರಿಚಯಿಸುವುದಾಗಿ ಕಂಪನಿ ಮಾಹಿತಿ ನೀಡಿದೆ. ಇದರೊಂದಿಗೆ ಈ ವರ್ಷದ ಅಂತ್ಯದ ವೇಳೆಗೆ ಪ್ರತಿದಿನ 1 ಲಕ್ಷ ಆರ್ಡರ್‌ಗಳನ್ನು ತೆಗೆದುಕೊಳ್ಳುವ ಗುರಿಯನ್ನು ಕಂಪೆನಿ ಹೊಂದಿದೆ.

ಪಿನ್‌ಕೋಡ್ ಆಪ್‌ ಸ್ಥಳೀಯ ವ್ಯಾಪಾರಿಗಳು ಮತ್ತು ಮಾರಾಟಗಾರರನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದು, ಪ್ರತಿ ನಗರದ ಗ್ರಾಹಕರು ಸಾಮಾನ್ಯವಾಗಿ ಆಫ್‌ಲೈನ್‌ನಿಂದ ಖರೀದಿಸುವ ಎಲ್ಲಾ ನೆರೆಹೊರೆಯ ಅಂಗಡಿಗಳೊಂದಿಗೆ ಆನ್‌ಲೈನ್ ಆರ್ಡರ್, ರಿಯಾಯಿತಿಗಳು ಮತ್ತು ತ್ವರಿತ ಮರುಪಾವತಿಗಳು ಮತ್ತು ರಿಟರ್ನ್ಸ್‌ಗಳ ಅನುಕೂಲದೊಂದಿಗೆ ಡಿಜಿಟಲ್ ಸಂಪರ್ಕವನ್ನು ಕಲ್ಪಿಸುವ ಆಶಯವನ್ನು ಹೊಂದಿದೆ.

ಪಿನ್‌ಕೋಡ್ ಆಪ್‌ ಲಾಂಚ್‌ ಮಾಡಿದ ಫೋನ್‌ಪೇ:  ಹೊಸ ಶಾಪಿಂಗ್‌ ಆಪ್‌ ಬಗ್ಗೆ ತಿಳಿಯಿರಿ

ಗ್ರಾಹಕರಿಗೆ ಸ್ಪರ್ಧೆಗಿಂತ ಉತ್ತಮ ಮತ್ತು ವ್ಯಾಪಕವಾದ ಉತ್ಪನ್ನಗಳನ್ನು ಒದಗಿಸಲು ಇದು ಮುಂದಾಗಿದ್ದು, ಮತ್ತು ಪ್ರಸಿದ್ಧ ರಾಷ್ಟ್ರೀಯ ಬ್ರ್ಯಾಂಡ್‌ಗಳು ಮತ್ತು ಸ್ಥಳೀಯವಾಗಿ ತಯಾರಿಸಿದ ದಿನಸಿ, ಉಡುಪು, ಎರಡನ್ನೂ ಒಳಗೊಂಡಿರುತ್ತದೆ ಎಂದು ಕಂಪನಿ ಹೇಳಿದೆ. ಅದರಲ್ಲಿ ಪಾದರಕ್ಷೆಗಳು ಸೇರಿದಂತೆ ಇತರೆ ಪರಿಕರಗಳು ಇತ್ಯಾದಿ ಪರಿಕರಗಳು ಇರಲಿವೆ. ಇದರೊಂದಿಗೆ MSME ಗಳು ಮತ್ತು ರೈತರನ್ನು ಒಳಗೊಂಡಂತೆ ಸಂಪೂರ್ಣ ಸ್ಥಳೀಯ ಪರಿಸರ ವ್ಯವಸ್ಥೆಗೆ ಶಕ್ತಿ ತುಂಬುವ ಕೆಲಸಕ್ಕೆ ಆಪ್‌ ಕೈ ಹಾಕಿದೆ.

ಈ ಆಪ್‌ ಬಿಡುಗಡೆಯ ಕುರಿತು ಮಾತನಾಡಿದ ಸಿಇಒ ಮತ್ತು ಫೋನ್‌ಪೇ ಸಂಸ್ಥಾಪಕ ಸಮೀರ್ ನಿಗಮ್, ನಾವು ಪಿನ್‌ಕೋಡ್ ಅನ್ನು ಪ್ರಾರಂಭಿಸಲು ಉತ್ಸುಕರಾಗಿದ್ದೇವೆ. ಪಿನ್‌ಕೋಡ್ ಹೊಚ್ಚಹೊಸ ಶಾಪಿಂಗ್ ಅಪ್‌ ಆಗಿದ್ದು, ಇ-ಕಾಮರ್ಸ್‌ಗೆ ಕ್ರಾಂತಿಕಾರಿ ಹೊಸ ವಿಧಾನವನ್ನು ಇದರಿಂದ ಕಂಡುಕೊಳ್ಳಬಹುದು. ಹಾಗೆಯೇ ಪಿನ್‌ಕೋಡ್ ಅನ್ನು ONDC ನೆಟ್‌ವರ್ಕ್‌ನಲ್ಲಿ ನಿರ್ಮಿಸಲಾಗಿದ್ದು, ಇದು ವಿವಿಧ ಮಾರಾಟಗಾರರ ಪ್ಲಾಟ್‌ಫಾರ್ಮ್‌ಗಳಿಂದ ಡಿಜಿಟೈಸ್ ಮಾಡಿದ ವ್ಯಾಪಾರಿಗಳಿಗೆ ಬೇಡಿಕೆಯನ್ನು ಉತ್ಪಾದಿಸಲು ನಮಗೆ ಅನುಮತಿಸುತ್ತದೆ ಎಂದು ತಿಳಿಸಿದ್ದಾರೆ.

ಪಿನ್‌ಕೋಡ್ ಆಪ್‌ ಲಾಂಚ್‌ ಮಾಡಿದ ಫೋನ್‌ಪೇ:  ಹೊಸ ಶಾಪಿಂಗ್‌ ಆಪ್‌ ಬಗ್ಗೆ ತಿಳಿಯಿರಿ

ಪ್ರಸ್ತುತ, ಫೋನ್‌ಪೇ ಇ-ಕಾಮರ್ಸ್ ವಿಭಾಗದಲ್ಲಿ ಸ್ವಿಚ್‌ನೊಂದಿಗೆ ಕೆಲಸ ಮಾಡಲಿದ್ದು, ಅನೇಕ ಪ್ರಮುಖ ಸೇವಾ ಗ್ರಾಹಕರಿಗೆ ಹೋಟೆಲ್, ಪ್ರಯಾಣ ಬುಕಿಂಗ್ ಮುಂತಾದ ಅನೇಕ ಸೇವೆಗಳನ್ನು ನೀಡುತ್ತಿದೆ. ಇನ್ನು ನೀವು ಗೂಗಲ್‌ ಪ್ಲೇ ಸ್ಟೋರ್‌ ಹಾಗೂ ಆಪಲ್‌ ಸ್ಟೋರ್‌ ಮೂಲಕ ಈ ಪಿನ್‌ಕೋಡ್‌(Pincode) ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬಹುದಾಗಿದೆ. ಪ್ರಮುಖ ವಿಷಯ ಏನೆಂದರೆ ಈ ಆಪ್ ONDC ಪ್ಲಾಟ್‌ಫಾರ್ಮ್‌ನ ಭಾಗವಾಗಿರುವ ಪೇಟಿಎಮ್‌ ಮಾಲ್‌ನೊಂದಿಗೆ ಸ್ಪರ್ಧಿಸಲಿದೆ.

Best Mobiles in India

English summary
Phonepe has now announced a new shopping app called Pincode, through this app you can buy all kinds of things online. This app is currently available in Bangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+