ಬಿಟ್ ಕಾಯಿನ್ ವ್ಯವಹರಿಸಬೇಕಾ..? ಈ ಆಪ್ ಹಾಕಿಕೊಳ್ಳಿ..!
ಬಿಟ್ ಕಾಯಿನ್ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ದೇಶದಲ್ಲಿ ಮೊದಲ ಬಿಟ್ ಕಾಯಿನ್ ಟ್ರೆಟಿಂಗ್ ಆಪ್ ಅನ್ನು ಲಾಂಚ್ ಮಾಡಲಾಗಿದ್ದು, ಇದು ವರ್ಚುವಲ್ ಕರೆಸ್ಸಿಯನ್ನು ವರ್ಗಾಹಿಸಲು ಬಳಕೆಯಾಗಲಿದೆ ಎನ್ನಲಾಗಿದೆ.

ಓದಿರಿ: ಶಿಯೋಮಿ ನೋಟ್ 4, Mi A1, ಮೊಟೊ C ಪ್ಲಸ್ ಸ್ಮಾರ್ಟ್‌ಫೋನ್ ರೂ.999ಕ್ಕೆ ಲಭ್ಯ..! ಇಲ್ಲಿ ಮಾತ್ರ..!
ಪ್ಲುಟೊ ಎಕ್ಸ್‌ಚೆಂಜ್ ಆಪ್ ಸಧ್ಯ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಇದೇ ದೇಶದ ಮೊದಲ ಬಿಟ್‌ಕಾಯಿನ್ ಮೊಬೈಲ್ ವ್ಯಾಲೆಟ್ ಆಗಿದ್ದು, ಈ ಮೂಲಕ ದೇಶದಲ್ಲಿಯೂ ಬಿಟ್ ಕಾಯಿನ್ ಹವಾ ಹೆಚ್ಚಾಗಿಸಲು ಈ ಆಪ್ ಮುಂದಾಗಲಿದೆ ಎನ್ನುವ ಮಾತು ಕೇಳಿ ಬಂದಿದೆ.

ಬಿಟ್ ಕಾಯಿನ್ ವ್ಯಾಲೆಟ್:
ಭಾರತೀಯ ರೂಪಾಯಿಗಳಲ್ಲಿ ಕಾರ್ಯನಿರ್ವಹಿಸುವ ವ್ಯಾಲೆಟ್ ಆಪ್ ಮಾದರಿಯಲ್ಲಿ ಪ್ಲುಟೊ ಎಕ್ಸ್‌ಚೆಂಜ್ ಆಪ್ ಬಿಟ್ ಕಾಯಿನ್ ವ್ಯಾಲೆಟ್ ಆಪ್ ವ್ಯಾಲೆಟ್ ಆಗಲಿದೆ. ಅಲ್ಲದೇ ಇದರಲ್ಲಿ ಬಿಟ್ ಕಾಯಿನ್ ವರ್ಚುವಲ್ ಮನಿಯನ್ನು ಟ್ರಾನ್ಸ್‌ಫಾರ್ ಮಾಡಬಹುದಾಗಿದೆ.


ಮೊಬೈಲ್ ನಂಬರ್ ಐಡಿ:
ಈ ಆಪ್‌ನಲ್ಲಿ ಸಾಮಾನ್ಯ UPI ಆಪ್ ಗಳ ಮಾದರಿಯಲ್ಲಿ ಮೊಬೈಲ್ ನಂಬರ್ ಅನ್ನೇ ಐಡಿ ಮಾದರಿಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ನಾಲ್ಕು ಅಂಕಿಗಳ ಪರ್ನಸನಲ್ ಐಡೆನ್ಟಿಫಿಕೇಷನ್ ನಂಬರ್ ಅನ್ನು ಪಾಸ್‌ವರ್ಡ್ ಆಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಬಿಟ್ ಕಾಯಿನ್ ಹವಾ:
ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿರುವ ಬಿಟ್ ಕಾಯಿನ್ ಬೇಡಿಕೆ ಹೆಚ್ಚಾಗುತ್ತಿದ್ದು, ಇದರಿಂದ ಬೇಡಿಕೆಯೂ ಅಧಿಕವಾಗಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಬಿಟ್ ಕಾಯಿನ್ ಖ್ಯಾತಿಯನ್ನು ಹೆಚ್ಚಿಸುವ ಕಾರ್ಯವನ್ನು ಈ ಆಪ್ ಮಾಡಲಿದೆ.


Click it and Unblock the Notifications








