ಸೂಪರ್ ಮಾರಿಯೋ ರನ್: ಗೂಗಲ್ ಪ್ಲೇ ಸ್ಟೋರಿನಲ್ಲೀಗ ಈ ಆಟಕ್ಕೆ ಪ್ರಿ ರಿಜಿಷ್ಟರ್ ಆಗಬಹುದು.

|

ನಿಂಟೆಂಡೋದ ಅಧ್ಯಕ್ಷ ಟಟ್ಸುಮಿ ಕಿಮಿಷಿಮ 2017ರಳೊಗೆ ಸೂಪರ್ ಮಾರಿಯೋ ರನ್ ಆಟದ ಆ್ಯಂಡ್ರಯ್ಡ್ ಆವೃತ್ತಿಯನ್ನು ಬಿಡುಗಡೆಯೊಳಿಸುವುದರ ಬಗ್ಗೆ ನೀಡಿದ್ದ ಮಾಹಿತಿಯನ್ನು ನಾವು ವರದಿ ಮಾಡಿದ್ದೆವು. ನಿಂಟೆಂಡೋ ಅಮೆರಿಕಾದ ಟ್ವಿಟರ್ ಖಾತೆಯ ಇತ್ತೀಚಿನ ಪೋಸ್ಟ್ ಗಳನ್ನು ನೋಡಿದಾಗ ಸೂಪರ್ ಮಾರಿಯೋ ಆಡದ ಆ್ಯಂಡ್ರಾಯ್ಡ್ ಆವೃತ್ತಿಯ ಬಿಡುಗಡೆಯ ದಿನಾಂಕ ಸದ್ಯದಲ್ಲೇ ಹೊರಬೀಳುವ ನಿರೀಕ್ಷೆಯಿದೆ.

ಸೂಪರ್ ಮಾರಿಯೋ ರನ್  ಆಟಕ್ಕೆ ಪ್ರಿ ರಿಜಿಷ್ಟರ್ ಆರಂಭ

"ಗೂಗಲ್ ಪ್ಲೇ ನಲ್ಲಿ ಸೂಪರ್ ಮಾರಿಯೋ ರನ್ ಆಟಕ್ಕೆ ಪ್ರಿ ರಿಜಿಸ್ಟರ್ ಆಗಿ" ಎಂಬ ಟ್ವೀಟ್ ಅನ್ನು ನಿಂಟೆಂಡೊ ಅಮೆರಿಕಾ ಪೋಸ್ಟ್ ಮಾಡಿತ್ತು.

ಆಟ ಯಾವಾಗ ಲಭ್ಯವಾಗುತ್ತದೆ ಎನ್ನುವುದರ ಕುರಿತ ಮಾಹಿತಿಯನ್ನು ಕೊಡಲು ಈ ಪ್ರಿ ರಿಜಿಸ್ಟ್ರೇಷನ್ ಪ್ರಕ್ರಿಯೆ ನಡೆಯುತ್ತಿದೆ. ಇದರರ್ಥ ನಿಂಟೆಂಡೋ ಸದ್ಯದಲ್ಲೇ ಈ ಆಟವನ್ನು ಬಿಡುಗಡೆಗೊಳಿಸುತ್ತದೆ ಎನ್ನುವುದೇ ಆಗಿದೆ.

ಓದಿರಿ: ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ 5 ಮೆಮೊರಿ ಕಾರ್ಡ್‌ಗಳು (64GB)

ಜೊತೆಗೆ ಗೂಗಲ್ ಪ್ಲೇನಲ್ಲಿ ಈಗಾಗಲೇ ಸೂಪರ್ ಮಾರಿಯೋ ರನ್ ಪುಟ ಚಾಲ್ತಿಯಲ್ಲಿದೆ ಮತ್ತು ಅಲ್ಲೇ ನೀವು ಪ್ರಿ ರಿಜಿಷ್ಟರ್ ಮಾಡಿಕೊಳ್ಳಬಹುದು.

ಐ.ಒ.ಎಸ್ ನಲ್ಲಿ ಈ ಆಟ ಲಭ್ಯವಾದ ಸಮಯದಲ್ಲಿ ಆ್ಯಂಡ್ರಾಯ್ಡ್ ನಲ್ಲಿ ಲಭ್ಯವಾಗಿರಲಿಲ್ಲ. ಇದಕ್ಕೆ ಕಾರಣ ಪೈರೆಸಿ ಬಗೆಗಿನ ಕಂಪನಿಯ ಕಳವಳ. ಇದರ ಬಗ್ಗೆ ಮಾಶಬಲ್ ಗೆ ನೀಡಿದ ಸಂದರ್ಶನವೊಂದರಲ್ಲಿ ಮಾರಿಯೋದ ಸೃಷ್ಟಿಕರ್ತ ತಮಗೆ ಸಾಫ್ಟ್ ವೇರ್ ಎಷ್ಟು ಪ್ರಮುಖವಾದುದು ಎನ್ನುವುದನ್ನು ವಿವರಿಸಿದ್ದರು. ಗ್ರಾಹಕರಿಗೂ ಸಾಫ್ಟ್ ವೇರ್ ಪ್ರಮುಖವಾದುದು.

ಓದಿರಿ: ಕ್ರೆಡಿಟ್‌ಕಾರ್ಡ್‌ ಸೈಜ್ ಮೊಬೈಲ್‌ ಬೆಲೆ ಕೇವಲ 4000!..ಆದ್ರೆ 10 ದಿನ ಚಾರ್ಜ್ ನೀಡುತ್ತೆ!!

ಗ್ರಾಹಕರು ಅದನ್ನು ಬಳಸುವಾಗ ಎಲ್ಲಾ ರೀತಿಯ ಸುರಕ್ಷಾ ವಿಧಾನಗಳನ್ನು ಅಳವಡಿಸುವುದರ ಕಡೆಗೆ ಕಂಪನಿಯು ಗಮನ ಹರಿಸಿತ್ತು. ಸುರಕ್ಷತೆಯ ಬಗ್ಗೆ ನೀಡಿದ ಗಮನದಿಂದಾಗಿ ಆ್ಯಂಡ್ರಾಯ್ಡ್ ಆವೃತ್ತಿ ಐ.ಒ.ಎಸ್ ಆವೃತ್ತಿಯ ಜೊತೆಗೆ ಬಿಡುಗಡೆಗೊಳ್ಳಲಿಲ್ಲ.

ಈ ಸುರಕ್ಷಾ ಕಾರಣದಿಂದಾಗಿಯೇ ಕಂಪನಿಯು ಮೊದಲಿಗೆ ಐಫೋನಿಗೆ ಆಟವನ್ನು ಬಿಡುಗಡೆಗೊಳಿಸಿತು ಎನ್ನುತ್ತಾರೆ ಮಾರಿಯೋದ ಸೃಷ್ಟಿಕರ್ತ ಶಿಗೆರು ಮಿಯಾಮೊಟೊ. ಸುರಕ್ಷೆ ಅಂದರೆ ಪೈರೆಸಿಯ ಬಗೆಗಿನ ಕಳವಳಗಳಾ ಎಂಬ ಪ್ರಶ್ನೆಗೆ ಹೌದೆಂದು ಹೇಳಿದ್ದರು.

ಅದೇನೇ ಇರಲಿ ಸೂಪರ್ ಮಾರಿಯೋ ಆಟದ ಅಭಿಮಾನಿ ನೀವಾಗಿದ್ದರೆ ಗೂಗಲ್ ಪ್ಲೇ ಸ್ಟೋರಿನ ಸೂಪರ್ ಮಾರಿಯೋ ರನ್ ಪುಟಕ್ಕೆ ಭೇಟಿ ಕೊಟ್ಟು ಪ್ರಿ ರಿಜಿಷ್ಟರ್ ಮಾಡಿಕೊಳ್ಳಿ!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Super Mario Run Android pre-registration now open.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X