ಕ್ರೆಡಿಟ್‌ಕಾರ್ಡ್‌ ಸೈಜ್ ಮೊಬೈಲ್‌ ಬೆಲೆ ಕೇವಲ 4000!..ಆದ್ರೆ 10 ದಿನ ಚಾರ್ಜ್ ನೀಡುತ್ತೆ!!

|

ಮೊಬೈಲ್ ಪ್ರಪಂಚ ಇಷ್ಟು ಬದಲಾಗುತ್ತದೆ ಎಂದು ಯಾರೂ ಊಹೆಯನ್ನು ಮಾಡಿರಲು ಸಾಧ್ಯವಿಲ್ಲ. ಮಾನವನ ಬೇಡಿಕೆಗಿಂತ ಹೆಚ್ಚು ಬೆಳವಣಿಗೆ ಕಂಡ ಏಕೈಕ ವಸ್ತು ಎಂದರೆ ಅದು ಮೊಬೈಲ್‌ ಎನ್ನಬಹುದು. ಹಾಗಾಗಿ, ಮೊಬೈಲ್‌ಗಳು ಹೇಗೆ ಬರಲಿವೆ ಎನ್ನುವ ಊಹೆಯೂ ಯಾರಿಗೂ ಇಲ್ಲ!!

ಹೀಗೆಕೆ ಹೇಳಿದೆ ಗೊತ್ತಾ.? ಈ ಮೊಬೈಲ್‌ ಪ್ರಪಂಚದಲ್ಲಿ ನಾನು ಒಂದು ಮೊಬೈಲ್‌ ಅನ್ನು ಇಂದು ನಿಮಗೆ ಪರಿಚಯಿಸುತ್ತಿದ್ದೇನೆ. ಈ ಮೊಬೈಲ್ ನಿಮ್ಮ ಊಹೆಗೂ ಸಿಲುಕದ್ದು ಎನ್ನುವುದು ನನ್ನ ನಂಬಿಕೆ. ಒಂದು ಕ್ರೆಡಿಟ್‌ ಕಾರ್ಡ್‌ಗಿಂತಲೂ ಸಣ್ಣದಾದ ಈ ಮೊಬೈಲ್‌ ಎಲ್ಲರನ್ನು ನಿಬ್ಬೆರಗಾಗುವ ರೀತಿಯಲ್ಲಿ ಕಾರ್ಯನಿರ್ವಹಣೆ ನೀಡುತ್ತದೆ.!

ಶಾಕ್‌ ಮೇಲೆ ಶಾಕ್‌ ನೀಡುತ್ತಿರುವ ನೋಕಿಯಾ!..ಆಂಡ್ರಾಯ್ಡ್ ಆಯ್ತು ಇದೀಗ?

All about Nokia 3310 Phone - GIZBOT KANNADA

ಹಾಗಂತ ಇದು ಮಾರುಕಟ್ಟೆಯಲ್ಲಿ ಇಲ್ಲ ಎಂದುಕೊಳ್ಳಬೇಡಿ. ಮೊದಲ ಬಾರಿ ನೋಡಿದರೂ ನಂಬಲು ಸಾಧ್ಯವಾಗದ "ಟಾಲ್‌ಕೇಸ್" ಮೊಬೈಲ್‌ ಮಾರುಕಟ್ಟೆಗೆ ಬಿಡುಗಡೆಯಾಗಿದೆ.! ಕೇವಲ 4000 ರೂಪಾಯಿ ಬೆಲೆ ಇರುವ ಈ ಮೊಬೈಲ್ ಉಪಯೋಗ ಮಾತ್ರ ಐಫೋನ್‌ ಮತ್ತು ಸ್ಯಾಮ್‌ಸಂಗ್‌ಗಿಂತಲೂ ಹೆಚ್ಚು!!. ಹಾಗಾದರೆ ಈ ಮೊಬೈಲ್ ಹೇಗಿದೆ ಇದರ ಉಪಯೋಗಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಕ್ರೆಡಿಟ್‌ ಕಾರ್ಡ್ ದಪ್ಪವಿದೆ ಈ ಮೊಬೈಲ್!!

ಕ್ರೆಡಿಟ್‌ ಕಾರ್ಡ್ ದಪ್ಪವಿದೆ ಈ ಮೊಬೈಲ್!!

ಈವಾಗ ಮೋಬೈಲ್‌ ಸೈಜ್‌ದೆ ಮಾತು. 5.5 ಇಂಚ್‌ ಸೈಜ್ ಇರುವ ಮೊಬೈಲ್‌ ಬೇಕು ಎನ್ನುವ ಇಂದು ಕ್ರೆಡಿಟ್‌ ಕಾರ್ಡ್ ದಪ್ಪದ ಮೊಬೈಲ್ ಇದೆ ಎಂದರೆ ಆಶ್ಚರ್ಯವಾಗೋದು ಖಂಡಿತ. ಆದರೂ ಈ ಮೊಬೈಲ್ ಕ್ರೆಡಿಟ್ ಕಾರ್ಡ್ ಸೈಜ್‌ನಲ್ಲಿದ್ದು, ನಿಮ್ಮ ಪರ್ಸ್ ಒಳಗೆ ಇದನ್ನು ಇಡಬಹುದು!!

ಹೆಚ್‌ಡಿ ಸ್ಕ್ರೀನ್ ಹೊಂದಿದೆ.

ಹೆಚ್‌ಡಿ ಸ್ಕ್ರೀನ್ ಹೊಂದಿದೆ.

ಬೇಸಿಕ್ ಮೊಬೈಲ್‌ಗಳಂತೆ ಚಿಕ್ಕದಾದ ಸ್ಕ್ರೀನ್ ಹೊಂದಿರುವ ಈ ಮೊಬೈಲ್ ಹೆಚ್‌ಡಿ ಸ್ಕ್ರೀನ್‌ ಹೊಂದಿದೆ. ಸ್ಮಾರ್ಟ್‌ಫೊನ್‌ ಇದ್ದರೂ ಇನ್ನೊಂದು ಕೀಪ್ಯಾಡ್ ಮೊಬೈಲ್ ಇಟ್ಟುಕೊಳ್ಳುವವರಿಗೆ ಈ ಫೋನ್ ಹೇಳಿಮಾಡಿಸಿದಂತಿದೆ. ಏಕೆಂದರೆ ನಿಮ್ಮ ಸ್ಮಾರ್ಟ್‌ಪೊನ್‌ ಬ್ಯಾಕ್‌ಕವರ್ ಕೇಸ್‌ಗೆ ಇದನ್ನು ಸ್ಟಿಕ್ ಮಾಡಬಹುದಾಗಿದೆ.

ಹೈ-ಫೈ ಬ್ಲೂಟೂತ್ ಕನೆಕ್ಟರ್!!

ಹೈ-ಫೈ ಬ್ಲೂಟೂತ್ ಕನೆಕ್ಟರ್!!

ನಿಮ್ಮ ಇನ್ನೊಂದು ಫೋನ್‌ಗೆ ಬ್ಲೂಟೂತ್ ಕನೆಕ್ಟ್ ಮಾಡಬಹುದಾದ ತಂತ್ರಜ್ಞಾನ ಇದರಲ್ಲಿ ಇದ್ದು, ನಿಮ್ಮ ಸ್ಮಾರ್ಟ್‌ಫೋನ್‌ ಇಂದ ಇದಕ್ಕೆ ಕನೆಕ್ಷನ್‌ ನೀಡಬಹುದು. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಮರೆತರು ನಿಮ್ಮ ಪಾಕೆಟ್‌ನಲ್ಲಿ ಇಡಬಹುದಾದ ಈ ಫೋನ್‌ನಿಂದ ನಿಮ್ಮ ಐಫೋನ್‌ ಕಾರ್ಯಚರಣೆ ನಡೆಸಬಹುದು.

ಗ್ಲೋಬಲ್ GSM ಸಪೋರ್ಟ್!!

ಗ್ಲೋಬಲ್ GSM ಸಪೋರ್ಟ್!!

ವಿಶ್ವದ ಕೆಲವೇ ಕಲವು ಸ್ಮಾರ್ಟ್‌ಫೋನ್‌ಗಳು ಹೊಂದಿರಬಹುದಾದ ಈ ಫೀಚರ್‌ ಅನ್ನು ಟಾಲ್‌ಕೇಸ್ ಮೋಬೈಲ್ ಹೊಂದಿದೆ. ವಿಶ್ವದ ನಾಲ್ಕು ಬ್ರಾಂಡ್ GSM ಸಪೋರ್ಟ್ ಹೊಂದಿದ್ದು, ಎಲ್ಲೆಡೆ ಕಾರ್ಯ ನಿರ್ವಹಣೆ ನೀಡುತ್ತದೆ.

10 ದಿವಸಗಳ ಬ್ಯಾಟರಿ ಬ್ಯಾಕಪ್.

10 ದಿವಸಗಳ ಬ್ಯಾಟರಿ ಬ್ಯಾಕಪ್.

ಸ್ಮಾರ್ಟ್‌ಪೊನ್‌ಗಳು ಹೆಚ್ಚೆಂದರೆ 1 ರಿಂದ 2 ದಿವಸಗಳು ಬ್ಯಾಟರಿ ಬಾಳಿಕೆ ಬರುತ್ತವೆ. ಆದರೆ, ಕ್ರೆಡಿಟ್‌ ಕಾರ್ಡ್ ದಪ್ಪವಿರುವ ಈ ಟಾಲ್‌ಕೇಸ್ ಮೊಬೈಲ್‌ ಹತ್ತುದಿವಸಗಳಿಗಿಂತ ಹೆಚ್ಚು ದಿವಸ ನಿಮಗೆ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ತುರ್ತು ಪರಿಸ್ಥಿಯಲ್ಲಿ ಅನುಕೂಲಕ್ಕೆ ಬರಲಿದೆ.

Best Mobiles in India

English summary
The slimmest phone in the world is as slim as it gets, the size of your CREDIT CARD, beat that!. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X