ಭೀಮ್ ಆಧಾರ್ ಲಾಂಚ್ ಮಾಡಿದ ಪ್ರಧಾನಿ ಮೋದಿ: ಏನೀದು ಭೀಮ್ ಆಧಾರ್..??

ಭೀಮ್ ಆಧಾರ್ ಮಾರಾಟಗಾರರಿಗಾಗಿ ಲಾಂಚ್ ಮಾಡಿರುವ ಆಪ್ ಆಗಿದ್ದು, ಇದು ಗ್ರಾಹಕರಿಂದ ಹಣವನ್ನು ಸ್ವೀಕರಿಸುವ ಆಪ್ ಆಗಿದೆ.

|

ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾ ಕನಸನ್ನು ನನಸು ಮಾಡುವ ಹಾದಿಯಲ್ಲಿ ಸಾಗುತ್ತಿದ್ದಾರೆ. ಇಂದು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯ ಮತ್ತೊಂದು ಭಾಗವಾದ ಭೀಮ್ ಆಧಾರ್ ಲಾಂಚ್ ಮಾಡಿದ್ದಾರೆ. ಈ ಮೂಲಕ ಜನರಿಗೆ ಕಾರ್ಡ್ ಲೈಸ್ ವಹಿವಾಟು ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ.

ಭೀಮ್ ಆಧಾರ್ ಲಾಂಚ್ ಮಾಡಿದ ಪ್ರಧಾನಿ ಮೋದಿ: ಏನೀದು ಭೀಮ್ ಆಧಾರ್..??

ಓದಿರಿ: ಏ.15ಕ್ಕೆ ಜಿಯೋ ಪ್ರೈಮ್, ಧನ್ ಧನಾ ಧನ್ ಆಫರ್ ಕೊನೆ: ನೀವು ತಿಳಿಯಲೇಬೇಕಾದ ಅಂಶಗಳು.!!

ಭೀಮ್ ಆಧಾರ್ ಮಾರಾಟಗಾರರಿಗಾಗಿ ಲಾಂಚ್ ಮಾಡಿರುವ ಆಪ್ ಆಗಿದ್ದು, ಇದು ಗ್ರಾಹಕರಿಂದ ಹಣವನ್ನು ಸ್ವೀಕರಿಸುವ ಆಪ್ ಆಗಿದೆ. ಇದು ಗ್ರಾಹಕರಿಗೆ ತಮ್ಮ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಹಾಗೂ ನಗದು ಹಣವನ್ನು ಪಾವತಿ ಮಾಡದೆ ಖರೀದಿ ಮಾಡುವ ಅವಕಾಶವನ್ನು ಮಾಡಿಕೊಡಲಿದ್ದು, ಕೇವಲ ತಮ್ಮ ಹೆಬೆಟ್ಟಿನ ಗುರುತು ನೀಡಿ ತಮಗೆ ಬೇಕಾದ ಸರಕು ಮತ್ತು ಸೇವೆಗಳನ್ನು ಪಡೆದುಕೊಳ್ಳುವ ಅವಕಾಶ ನೀಡಲಾಗಿದೆ.

ಗ್ರಾಹಕರು ಮೊಬೈಲ್‌ಗಳನ್ನು ಬಳಸುವ ಅವಶ್ಯಕತೆ ಇಲ್ಲ:

ಗ್ರಾಹಕರು ಮೊಬೈಲ್‌ಗಳನ್ನು ಬಳಸುವ ಅವಶ್ಯಕತೆ ಇಲ್ಲ:

ಭೀಮ್ ಆಧಾರ್ ಸೇವೆಯನ್ನು ಪಡೆಯಲು ಗ್ರಾಹಕರು ಮೊಬೈಲ್‌ಗಳನ್ನು ಬಳಸುವ ಅವಶ್ಯಕತೆ ಇಲ್ಲ, ಆಪ್ ಬಳಸುವ ಹಾಗಿಲ್ಲ, ಕೇವಲ ಬಯೋಮೆಟ್ರಿಕ್ ಸ್ಕ್ಯಾನರ್‌ನಲ್ಲಿ ಆಧಾರ್ ಎನ್ಬಲ್ ಪೈಮೆಂಟ್ ಸಿಸ್ಟಮ್ ನಲ್ಲಿ ಹೆಬ್ಬೆರಳು ಇಟ್ಟು ತಾವು ಪಡೆದ ಸೇವೆಗಳು ಹಾಗೂ ಸರಕುಗಳಿಗೆ ಮಾರಾಟಗಾರ ಬಳಿ ಇರುವ ಭೀಮ್ ಆಧಾರ್ ಮೂಲಕ ಪಾವತಿಯನ್ನು ಮಾಡಬಹುದಾಗಿದೆ.

ಕ್ಯಾಷ್ ಲೈಸ್ ಅಲ್ಲ, ಇದು ಕಾರ್ಡ್ ಲೈಸ್

ಕ್ಯಾಷ್ ಲೈಸ್ ಅಲ್ಲ, ಇದು ಕಾರ್ಡ್ ಲೈಸ್

ಈ ವ್ಯವಸ್ಥೆಯೂ ಕ್ಯಾಷ್ ಲೈಸ್ ಹಾಗೂ ಕಾರ್ಡ್ ಲೈಸ್ ವ್ಯವಸ್ಥೆಯನ್ನು ಜಾರಿಗೆ ತರಲು ಸಹಾಯಕಾರಿಯಾಗಲಿದೆ ಎಂದರೆ ತಪ್ಪಾಗುವುದಿಲ್ಲ. ಈ ಮಾದರಿಯ ಪಾವತಿಯಲ್ಲಿ ಗ್ರಾಹಕರು ಯಾವುದೇ ರೀತಿಯ ವಸ್ತುಗಳನ್ನು ಬಳಸುವ ಅಗತ್ಯವೇ ಇರುವುದಿಲ್ಲ, ಸ್ಮಾರ್ಟ್‌ಫೋನ್, ಇಂಟರ್ ನೆಟ್, ಆಪ್‌ಗಳು, ಕಾರ್ಡ್ ಹಾಗೂ ಚೆಕ್ ಬಳಸುವ ಅಗತ್ಯವೇ ಇರುವುದಿಲ್ಲ.

ಮಾರಾಟಗಾರಿಗೆ ಇದು;

ಮಾರಾಟಗಾರಿಗೆ ಇದು;

ಈ ಭೀಮ್ ಆಧಾರ್ ಬಳಕೆಗೆ ಮಾರಾಟಗಾರು ಹೆಚ್ಚಿನ ಡಿಜಿಟಲ್ ವಸ್ತುವೊಂದನ್ನು ಖರೀದಿಸಬೇಕಾಗಿದೆ. ಇದರಿಂದ ಮೋಸ, ವಂಚನೆ ಪ್ರಕರಣಗಳು ತಪ್ಪಲಿದ್ದು, ನಿಮ್ಮ ವೈಯಕ್ತಿಕ ಮಾಹಿತಿಗಳು ಇತರರಿಗೆ ಸೋರಿಕೆಯಾಗದಂತೆ ತಡೆಗಟ್ಟಬಹುದಾಗಿದೆ. ಒಟ್ಟಿನಲ್ಲಿ ಕ್ಯಾಷ್ ಲೈಸ್ ವ್ಯವಸ್ಥೆಯ ಕಡೆಗೆ ಸಾಗುತ್ತಿರುವ ಭಾರತದಲ್ಲಿ ಹೊಸ ಬೆಳವಣಿಗೆಯಾಗಿದೆ.

Best Mobiles in India

Read more about:
English summary
Finally, the Aadhaar Pay app for merchants was launched, known as BhimAadhaar. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X