ಏ.15ಕ್ಕೆ ಜಿಯೋ ಪ್ರೈಮ್, ಧನ್ ಧನಾ ಧನ್ ಆಫರ್ ಕೊನೆ: ನೀವು ತಿಳಿಯಲೇಬೇಕಾದ ಅಂಶಗಳು.!!
ಈ ಸೇವೆಗಳನ್ನು ಪಡೆಯಬಯಸುವ ಗ್ರಾಹಕರ ನಾಳೆ ಕಳೆಯವುದರ ಒಳಗೆ ಈ ಸೇವೆಯ ಲಾಭ ಪಡೆಯಬೇಕಾಗಿದೆ.
ರಿಲಯನ್ಸ್ ಮಾಲೀಕತ್ವದ ಜಿಯೋ 10 ಕೋಟಿ ಗ್ರಾಹಕರನ್ನು ಹೊಂದಿದ ಸಂಭ್ರಮದಲ್ಲಿ ಘೋಷಣೆ ಮಾಡಿದ್ದ 'ಪ್ರೈಮ್ ಮೆಂಬರ್ಶಿಪ್' ಆಫರ್ ಮತ್ತು ಮತ್ತೆ ಮೂರು ತಿಂಗಳ ಉಚಿತ ಸೇವೆ 'ಧನ್ ಧನಾ ಧನ್' ಆಫರ್ ಏಪ್ರಿಲ್ 15ಕ್ಕೆ ಕೊನೆಯಾಗಲಿದ್ದು, ಈ ಸೇವೆಗಳನ್ನು ಪಡೆಯ ಬಯಸುವ ಗ್ರಾಹಕರ ನಾಳೆ ಕಳೆಯವುದರ ಒಳಗೆ ಈ ಸೇವೆಯ ಲಾಭ ಪಡೆಯಬೇಕಾಗಿದೆ.

ಓದಿರಿ: ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವುದು ಹೇಗೆ..?
ನಾಳೆಯಿಂದ ಜಿಯೋ ಸೇವೆಗೆ ಹಣ ಪಾವತಿ ಮಾಡಬೇಕಾಗಿದೆ. 'ಧನ್ ಧನಾ ಧನ್' ಆಫರ್ ಕೇವಲ ಜಿಯೋ ಪ್ರೈಮ್ ಸದಸ್ಯರಿಗೆ ಮಾತ್ರವೇ ಲಭ್ಯವಿದ್ದು, ಈ ಹಿನ್ನಲೆಯಲ್ಲಿ ಪ್ರೈಮ್ ಸದಸ್ಯತ್ವ ಕೊನೆಯಾದ ಬೆನ್ನಲೇ 'ಧನ್ ಧನಾ ಧನ್' ಆಫರ್ ಸಹ ಸ್ಥಗಿತಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಜಿಯೋ ಬಳಕೆದಾರರು ತಿಳಿಯಲೇ ಬೇಕಾದ ವಿಷಯಗಳ ಕುರಿತ ಮಾಹಿತಿ ಇಲ್ಲಿದೇ.

ಏನೀದು ಜಿಯೋ ಪ್ರೈಮ್ ಸದಸ್ಯತ್ವ:
2018ರ ಮಾರ್ಚ್ 31ರ ವರೆಗೆ ಜಿಯೋ ನೀಡಿದ್ದ ಹ್ಯಾಪಿ ನ್ಯೂಯಿರ್ ಸೇವೆಯನ್ನು ಪಡೆದುಕೊಳ್ಳಲು ರೂ.99 ನೀಡಿ ಜಿಯೋ ಪ್ರೈಮ್ ಬಳಕೆದಾರರಾಗಿ ಸದಸ್ಯತ್ವವನ್ನು ಪಡೆದುಕೊಳ್ಳುವುದಾಗಿದೆ. ಈ ಗ್ರಾಹಕರಿಗೆ ಮೊದಲ ಮೂರು ತಿಂಗಳಿಗೆ 'ಧನ್ ಧನಾ ಧನ್' ಹೆಸರಿನಲ್ಲಿ ಉಚಿತ ಸೇವೆ ಲಭ್ಯವಿರಲಿದೆ. ಆದರೆ ಇದಕ್ಕಾಗಿ ರೂ.309 ಇಲ್ಲವೇ ರೂ.509 ಪಾವತಿ ಮಾಡಬೇಕಾಗಿದೆ.

ಏನೀದು ಧನ್ ಧನಾ ಧನ್' ಆಫರ್:
ರಿಲಯನ್ಸ್ ತನ್ನ ಪ್ರೈಮ್ ಸದಸ್ಯರಿಗಾಗಿಯೇ ಜಾರಿಗೆ ತಂದ ಮೂರು ತಿಂಗಳ ಉಚಿತ ಸೇವೆಯಾಗಿದೆ. ಇಲ್ಲಿ ಪ್ರೈಮ್ ಸದಸ್ಯರಿಗಾಗಿ 84 ದಿನಗಳಕಾಲ ಅನ್‌ಲಿಮಿಟೆಡ್ ಡೇಟಾ ಕೊಡುಗೆಯನ್ನು ನೀಡಲಿದೆ. ಇದಕ್ಕಾಗಿ ರೂ.309 ಇಲ್ಲವೇ ರೂ. 509 ಪಾವತಿ ಮಾಡಬೇಕಾಗಿದೆ. ಉಚಿತ ಡೇಟಾ, ಉಚಿತ ಕರೆ, ಉಚಿತ ಜಿಯೋ ಆಪ್‌ಗಳನ್ನು ಬಳಸಬಹುದಾಗಿದೆ.

ಜಿಯೋ ಪ್ರೈಮ್ ಸದಸ್ಯರಾಗಲಿಲ್ಲ ಎಂದರೇ..?
ಏಪ್ರಿಲ್ 15 ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳಲು ಕೊನೆಯ ದಿನವಾಗಿದ್ದು, ಒಮ್ಮೆ ಸದಸ್ಯತ್ವ ಪಡೆದುಕೊಳ್ಳಲಿಲ್ಲ ಎಂದರೆ 149 ರೂ. ಪ್ಲಾನ್ ಜಿಯೋ ಪ್ರೈಮ್ ಸದಸ್ಯರಲ್ಲದವರಿಗೆ ಲಭ್ಯವಿದೆ. ಇಲ್ಲಿ ಜಿಯೋ ಗ್ರಾಹಕರು ಪ್ರೈಮ್ ಸದಸ್ಯರಿಗಿಂತ ಅರ್ಧಷ್ಟು ಕಡಿಮೆ ಲಾಭವನ್ನು ಪಡೆದುಕೊಳ್ಳಿದಾರೆ.


Click it and Unblock the Notifications








