ಪಬ್‌ಜಿ ಆಟಕ್ಕೆ ಬಿತ್ತು ಕಡಿವಾಣ!..ದಿನಕ್ಕೆ ಆರು ಗಂಟೆ ಮಾತ್ರ ನಿಗದಿ.!
ಪ್ರಸ್ತುತ ಅತೀ ಜನಪ್ರಿಯವಾಗಿರುವ ಪಬ್‌ಜಿ ಗೇಮ್ ಯುವಸಮೂಹವನ್ನು ಆವರಿಸಿಕೊಂಡಿದ್ದು, ಯುವಕರು ಹೆಚ್ಚಾದ ಸಮಯವನ್ನು ಪಬ್‌ಜಿ ಗೇಮ್ ಆಡುವುದರಲ್ಲಿಯೇ ಕಳೆಯುತ್ತಿದ್ದಾರೆ. ಈ ಗೇಮ್ ಅನ್ನು ಬ್ಯಾನ್ ಮಾಡಬೇಕೆಂದು ಧ್ವನಿ ಎದ್ದಿದ್ದು, ಈಗಾಗಲೇ ಭಾರತದ ಕೆಲವು ಪ್ರಮುಖ ನಗರಗಳಲ್ಲಿ ನಿಷೇಧ ಹೇರಲಾಗಿದೆ. ಆದರೆ ಇದೀಗ ಪಬ್‌ಜಿ ಸಂಸ್ಥೆಯೆ ಪಬ್‌ಜಿ ಆಟದ ಕಡಿವಾಣಕ್ಕೆ ಮುಂದಾಗಿದ್ದು, ಭಾರೀ ಅಚ್ಚರಿಗೆ ಕಾರಣವಾಗಿದೆ.

ಹೌದು, ಪಬ್‌ಜಿ ಗೇಮ್ ಸಂಸ್ಥೆ ದಿನಕ್ಕೆ ಕೇವಲ ಆರು ಗಂಟೆಗಳು ಮಾತ್ರ ಗೇಮ್ ಆಡಲು ಅವಕಾಶ ನೀಡುತ್ತಿದ್ದು, ಹೀಗಾಗಿ ಇನ್ನೂ ದಿನಪೂರ್ತಿ ಪಬ್‌ಜಿ ಆಡಲು ಸಾಧ್ಯವಾಗುವುದಿಲ್ಲ. ಮೊಬೈಲ್ ವರ್ಷನ್‌ನಲ್ಲಿ ಈ ಹೊಸ ನಿಯಮ ಜಾರಿಯಾಗಿದ್ದು, ಸ್ಮಾರ್ಟ್‌ಫೋನಿನಲ್ಲಿ ಆರು ಗಂಟೆ ಪಬ್‌ಜಿ ಆಡಿದ ನಂತರ ಡಿಸ್‌ಪ್ಲೇಯಲ್ಲಿ 'ಹೆಲ್ತ್ ರಿಮೈಂಡರ' ಎಂಬ ಸಂದೇಶ ಕಾಣಿಸಿಕೊಳ್ಳಲಿದ್ದು, ಮುಂದೆ ಆಡಲು ಅವಕಾಶ ಇರುವುದಿಲ್ಲ.

ಒಂದು ವೇಳೆ ಆಟಗಾರರು ಮತ್ತೆ ಪಬ್‌ಜಿ ಆಡಲು ಲಾಗ್ ಇನ್ ಆದರೇ 'ಈ ದಿನ ನೀವು ಆರು ಗಂಟೆ ಪಬ್‌ಜಿ ಗೇಮ್ ಆಡಿದ್ದಿರಿ ಮತ್ತೆ ನಾಳೆ 5.30am ಗೆ ಆಡಬಹುದು' ಎಂಬ ಮಾಹಿತಿ ಕಾಣಿಸುತ್ತದೆ. ಪಬ್‌ಜಿ ಗೇಮ್ ಸಂಸ್ಥೆ ಸುರಕ್ಷತೆಯತ್ತ ಗಮನ ನೀಡಿದ್ದು, ಜೊತೆಗೆ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಾಗ್‌ಇನ್ ಆಗುವ ಆಯ್ಕೆಯು ಸಹ ನೀಡಲಿದೆ. ಹಾಗೂ ಅಪ್ರಾಪ್ತ ವಯಸ್ಸಿನವರು ಗೇಮ್ ಆಡದಂತೆ ಕ್ರಮ ಕೈಗೊಳ್ಳುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.

ಯುವಕರು ಮತ್ತು ಚಿಕ್ಕಮಕ್ಕಳೇ ಪಬ್‌ಜಿ ಗೇಮ್‌ಗೆ ಹೆಚ್ಚಾಗಿ ಅಡಿಕ್ಟ್ ಆಗಿದ್ದು, ಈ ಗೇಮ್ ಅನ್ನು ಹಲವರು ಅತೀ ಆಡಿ ವಿನಾಃಕಾರಣ ಸಾವು ತಂದುಕೊಂಡಿರುವ ಘಟನೆಗಳನ್ನು ಸಹ ನಡೆದಿದ್ದು, ಹಾಗೂ ಅನೇಕ ದುರಂತಗಳು ಸಹ ನಡೆದಿವೆ. ಹಿತದೃಷ್ಟಿಯಿಂದ ಧೇಶದ ಕೆಲವು ನಗರಗಳಲ್ಲಿ ಪಬ್‌ಜಿ ಗೇಮ್ ಅನ್ನು ಬ್ಯಾನ್ ಮಾಡಿದ್ದು, ಆದರೂ ಬ್ಯಾನ್ ಇರುವ ರಾಜ್‌ಕೂಟ್ ಮತ್ತು ಗುಜರಾತ ನಗರಗಳಲ್ಲಿ ಕೇಲವುರು ಪಬ್‌ಜಿ ಗೇಮ್ ಆಡಿ ಜೈಲಿಗೆ ಹೋದ ಘಟನೆಗಳು ಸಹ ನಡೆದಿವೆ.

ಭಾರತದಲ್ಲಿ ಪಬ್‌ಜಿ ಗೇಮ್ ಬ್ಯಾನ್ ಮಾಡುವುದನ್ನು ತಡೆಯಲು ಗೇಮ್ ಕಂಪನಿ ಸುರಕ್ಷತೆಯ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿರುವುದಾಗಿ ಹೇಳಲಾಗುತ್ತಿದೆ. ಹೀಗಾಗಿ ಇನ್ನೂ 18 ವರ್ಷ್ ಮೇಲ್ಪಟ್ಟವರು ಮಾತ್ರ ಗೇಮ್ ಆಡುವುದಕ್ಕೆ ಅವಕಾಶ ನೀಡುವುದು ಮತ್ತು ಗೇಮ್ ಆಡುವ ಸಮಯದ ಮೇಲೆ ನಿರ್ಬಂಧ ಹೇರಲಿದ್ದು, ದಿನಕ್ಕೆ ಕೇವಲ ಆರು ಗಂಟೆ ಮಾತ್ರ ಗೇಮ್ ಆಡಬಹುದಾಗಿದೆ.


Click it and Unblock the Notifications