ಒಂದೇ ಆಪ್‌ನಲ್ಲಿ ಎಲ್ಲಾ ಸೇವೆ ನೀಡಿದ ರೈಲ್ವೆ ಇಲಾಖೆ!!..ಯಾವ ಆಪ್‌?

Written By:

ಆನ್‌ಲೈನ್ ಮುಖಾಂತರ ರೈಲ್ವೇ ಸೇವೆಯನ್ನು ಉನ್ನತಿಗೇರಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ.!! ಹಾಗಾಗಿ, ದೇಶದ ರೈಲು ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆಗಾಗಿ ಹಲವಾರು ಆಪ್ಗಳನ್ನು ನೀಡಿದ್ದು, ಇದೀಗ ರೈಲುಗಳಲ್ಲಿ ಆಹಾರ ಸರಬರಾಜು ಟಿಕೆಟ್ ಬುಕ್ಕಿಂಗ್ ಸೇರಿದಂತೆ ಹಲವು ಸೇವೆ ಹೊಂದಿರುವ ನೂತನ 'ರೈಲ್ ಸಾರಥಿ' ಆಪ್‌ ಬಿಡುಗಡೆ ಮಾಡಿದೆ.!!

ರೈಲ್ವೆಯಲ್ಲಿ ಎಂದೂ ಸಹ ಉತ್ತಮ ಗುಣಮಟ್ಟದ ಆಹಾರ ದೊರೆಯುವುದಿಲ್ಲ ಎನ್ನುವ ದೂರು ಸದಾಮಾನ್ಯವಾಗಿ ಕೇಳಿಬರುತ್ತದೆ. ಮತ್ತು ಅದು ಸತ್ಯವೂ ಕೂಡ.!! ಹಾಗಾಗಿ, ರೈಲ್ವೆ ಇಲಾಖೆಯು ಆಪ್‌ ಮೂಲಕ ಉತ್ತಮ ಸೇಯನ್ನು ನೀಡಿ ಪ್ರಯಾಣಿಕರಿಗೆ ಆರೋಗ್ಯಪೂರ್ಣ ಆಹಾರ ತಲುಪಿಸಲು ಮುಂದಾಗಿದೆ.!!

ಒಂದೇ ಆಪ್‌ನಲ್ಲಿ ಎಲ್ಲಾ ಸೇವೆ ನೀಡಿದ ರೈಲ್ವೆ ಇಲಾಖೆ!!..ಯಾವ ಆಪ್‌?

ಆಪ್‌ ಬಳಸಿಕೊಂಡು ಪ್ರಯಾಣಿಕರು ರೈಲುಗಳಲ್ಲಿ ಆಹಾರ ಮತ್ತು ನೀರು ತರಿಸಿಕೊಳ್ಳಬಹುದು. ಅದಕ್ಕಾಗಿಯೇ ಈ ಆಪ್‌ ಅನ್ನು ವಿಶೇಷವಾಗಿ ವಿನ್ಯಾಸ ಮಾಡಲಾದ್ದು, ಬಳಕೆಗೂ ಕೂಡ ಯೋಗ್ಯ ಆಪ್ ಇದಾಗಿದೆ.! ಹಾಗಾಗಿ, ಇನ್ನು ರೈಲ್ವೆಯಲ್ಲಿಯೂ ಉತ್ತಮ ಸೇವೆ ಸಿಗುವ ಭರವಸೆ ಮೂಡಿದೆ.!!

ಒಂದೇ ಆಪ್‌ನಲ್ಲಿ ಎಲ್ಲಾ ಸೇವೆ ನೀಡಿದ ರೈಲ್ವೆ ಇಲಾಖೆ!!..ಯಾವ ಆಪ್‌?

ಇದೇ ಮೊದಲ ಸಾರಿ ಒಂದೇ ಆಪ್‌ನಲ್ಲಿ ಇಷ್ಟೊಂದು ಸೇವೆಯನ್ನು ರೈಲ್ವೆ ಇಲಾಖೆ ನೀಡಿದ್ದು, ಟಿಕೆಟ್ ಬುಕ್ಕಿಂಗ್, ಬೋಗಿ ಕ್ಲೀನಿಂಗ್, ವಿಚಾರಣೆ ಸೇರಿದಂತೆ ಪ್ರಯಾಣಿಕರ ಅನುಕೂಲ ವೈಶಿಷ್ಟ್ಯಗಳು ಈ ಆಪ್‌ನಲ್ಲಿ ಲಭ್ಯವಿದೆ.!! ಆಂಡ್ರಾಯ್ಡ್, ವಿಂಡೋಸ್, ಐಒಎಸ್ ಮಾದರಿಗಳಲ್ಲಿ ಆಪ್ ಲಭ್ಯವಿದ್ದು ಪ್ರಯಾಣಿಕರು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಹುದು.

ಓದಿರಿ: ತನ್ನದೇ ಆಪ್ ಬಿಡುಗಡೆ ಮಾಡಿದ ಕ್ರಿಕೆಟರ್ ಜಡೇಜಾ!!..ಏನೆನೆಲ್ಲಾ ಇದೆ ಆಪ್‌ನಲ್ಲಿ?English summary
The Railways today launched an integrated mobile application to cater to various passenger requirements, to know more visit to kannada.gizbot.co
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot