ಆಪ್‌ನಲ್ಲಿ ಮೊದಲೇ ಟಿಕೆಟ್ ಬುಕ್ ಮಾಡಿದರೆ ರೈಲ್ವೆಯಲ್ಲಿಯೂ ಡಿಸ್ಕೌಂಟ್ಸ್!?
ಖಾಸಾಗಿ ವಿಮಾನಯಾನ ಕಂಪೆನಿಗಳು ಪ್ರಯಾಣಿಕರನ್ನು ಸೆಳೆಯಲು ಮುಂಗಡ ಬುಕ್ಕಿಂಗ್ ಟಿಕೆಟ್‌ಗೆ ಭಾರಿ ಡಿಸ್ಕೌಂಟ್ ನೀಡುವುದನ್ನು ರೈಲ್ವೆ ಕೂಡ ಹೊಂದಬೇಕು ಎಂದು ಸಮೀತಿ ಹೇಳಿದೆ.!!
ಡಿಜಿಟಲ್ ಯುಗದಲ್ಲಿ ಡಿಜಿಟಲ್ ಆಪ್‌ಗಳನ್ನು ಸದ್ಬಳಕೆ ಮಾಡಿಕೊಳ್ಳುವತ್ತ ರೈಲ್ವೆ ಇಲಾಖೆ ಮನಸ್ಸು ಮಾಡಬೇಕು. ಆನ್‌ಲೈನ್ ಪಾವತಿ ಸೇವೆ ನೀಡುವ ಕಂಪೆನಿಗಳ ಸಹಯೋಗದಲ್ಲಿ ಡಿಸ್ಕೌಂಟ್ ಹಾಗೂರೀತಿಯ ಆಫರ್‌ಗಳನ್ನು ನೀಡಿ ಪ್ರಯಾಣಿಕರಿಗೆ ರೈಲ್ವೆ ಪ್ರಯಾಣವನ್ನು ಉತ್ತೇಜನಗೊಳಿಸಬೇಕು ಎಂದು ಶುಲ್ಕ ವಿಮರ್ಶೆ ಸಮಿತಿ ರೈಲ್ವೆ ಮಂಡಳಿಗೆ ಶಿಫಾರಸು ಮಾಡಿದೆ.!!
ರೈಲ್ವೆ ಸೇವೆಯು ಸರ್ಕಾರಿ ನಿಯಂತ್ರಣದಲ್ಲಿದ್ದರೂ ಕೂಡ ಹೆಚ್ಚು ಲಾಭದ ನಿರೀಕ್ಷೆಯೊಂದಿಗೆ ಖಾಸಾಗಿ ಆಲೋಚನೆಗಳನ್ನು ಸಹ ಬಳಸಿಕೊಳ್ಳಬೇಕು ಮತ್ತು ಪ್ರಯಾಣಿಕರಿಗೂ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸೇವೆಗಳನ್ನು ನೀಡಬೇಕು. ಇದಕ್ಕಾಗಿ ರೈಲ್ವೆ ಹಲವು ಮಾರ್ಪಾಡು ಮಾಡಿಕೊಳ್ಳಬೇಕಾಗಬಹುದು ಎಂದು ಸಮಿತಿ ಶಿಫಾರಸ್ಸಿನಲ್ಲಿ ತಿಳಿಸಿದೆ.!!

ವಿಮಾನದ ಟಿಕೆಟ್ ಅನ್ನು ಮೊದಲೇ ಬುಕ್ಕಿಂಗ್ ಮಾಡಿದರೆ ಕಡಮೆ ಬೆಲೆಗೆ ಟಿಕೆಟ್ ನೀಡುವ ಸೌಲಭ್ಯವನ್ನು ರೈಲ್ವೆ ಇಲಾಖೆಗೂ ತರುವ ಕೆಲಸವಾಗಬೇಕು. ಖಾಸಾಗಿ ವಿಮಾನಯಾನ ಕಂಪೆನಿಗಳು ಪ್ರಯಾಣಿಕರನ್ನು ಸೆಳೆಯಲು ಮುಂಗಡ ಬುಕ್ಕಿಂಗ್ ಟಿಕೆಟ್‌ಗೆ ಭಾರಿ ಡಿಸ್ಕೌಂಟ್ ನೀಡುವುದನ್ನು ರೈಲ್ವೆ ಕೂಡ ಹೊಂದಬೇಕು ಎಂದು ಸಮೀತಿ ಹೇಳಿದೆ.!!


ಇನ್ನು ತಿಂಗಳುಗಟ್ಟಲೆ ಮೊದಲು ಟಿಕೆಟ್ ಬುಕ್ ಮಾಡುವವರಿಗೆ ಡಿಸ್ಕೌಂಟ್ ನೀಡುವ ಮಾದರಿಯನ್ನು ರೈಲ್ವೆಯಲ್ಲೂ ಜಾರಿಗೆ ತರುವ ಈ ಪ್ರಸ್ತಾಪವನ್ನು ರೈಲ್ವೆ ಮಂಡಳಿ ಪರಿಶೀಲಿಸುತ್ತಿದ್ದು, ಒಂದು ವೇಳೆ ಶೀಫಾರಸ್ಸಿಗೆ ಅನುಮೋದನೆ ನೀಡಿದರೆ ಪ್ರಯಾಣಿಕರಿಗೆ ಡಿಜಿಟಲ್ ಭಾರತದ ಮತ್ತೊಂದು ಅನುಕೂಲ ದೊರೆಯಲಿದೆ.!!
ಓದಿರಿ: ಸ್ಯಾಮ್‌ಸಂಗ್ ಆಡಿಕೊಂಡವರೇ ನಾಳೆ 'ಗ್ಯಾಲಕ್ಸಿ ಆನ್7 ಪ್ರೈಮ್' ಖರೀದಿಸಲು ರೆಡಿಯಾಗಿದ್ದಾರೆ!!


Click it and Unblock the Notifications








