Home
Apps

Instagramನಲ್ಲೇ ರೀಲ್ಸ್ ಡೌನ್‌ಲೋಡ್‌ ಮಾಡಬಹುದು, ಅದೇಗೆ ಅತೀರಾ!

ಶಾರ್ಟ್‌ ವಿಡಿಯೋ ವೀಕ್ಷಕರ ಸಂಖ್ಯೆ ಹೆಚ್ಚಾದಂತೆ ಪ್ರಮುಖ ಸಾಮಾಜಿಕ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ವಿಡಿಯೋಗಳಿಗೆ ವಿಶೇಷವಾದ ಸ್ಥಾನ-ಮಾನ ನೀಡಲಾಗುತ್ತದೆ. ಅದರಲ್ಲೂ ಇನ್‌ಸ್ಟಾಗ್ರಾಮ್‌ನಲ್ಲಿ ಕ್ರಿಯೇಟರ್ಸ್‌ಗಳು ತಮ್ಮ ರೀಲ್ಸ್‌ ಮೂಲಕ ಜಗತ್ತಿಗೆ ತಮ್ಮದೇ ಆದ ರೀತಿಯಲ್ಲಿ ಪರಿಚಯ ಆಗುತ್ತಿದ್ದಾರೆ. ಈ ನಡುವೆ ಈ ಪ್ಲಾಟ್‌ಫಾರ್ಮ್‌ನಲ್ಲಿ ದೊಡ್ಡ ಸೌಲಭ್ಯವೊಂದನ್ನು ನೀಡಲಾಗುತ್ತಿದೆ.

ಹೌದು, ಇನ್‌ಸ್ಟಾಗ್ರಾಮ್‌ (Instagram) ಬಳಕೆದಾರರು ಈಗ ಮೀಸಲಾದ ಬಟನ್ ಮೂಲಕ ಇತರ ಬಳಕೆದಾರರು ಶೇರ್‌ ಮಾಡಿರುವ ರೀಲ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಹಾಗಿದ್ರೆ, ಈ ಡೌನ್‌ಲೋಡ್‌ ಪ್ರಕ್ರಿಯೆ ಹೇಗಿರಲಿದೆ?, ಇದರಿಂದ ಬಳಕೆದಾರರಿಗೆ ಆಗುವ ಲಾಭ?, ಜೊತೆಗೆ ಈ ಪ್ರಯೋಜನವನ್ನು ಈಗ್ಯಾಕೆ ಇನ್‌ಸ್ಟಾಗ್ರಾಮ್‌ ನೀಡಿದೆ ಎಂಬೆಲ್ಲಾ ಮಾಹಿತಿಗಾಗಿ ಈ ಲೇಖನ ಓದಿರಿ.

Instagramನಲ್ಲೇ ರೀಲ್ಸ್ ಡೌನ್‌ಲೋಡ್‌ ಮಾಡಬಹುದು, ಅದೇಗೆ ಅತೀರಾ!

ಇನ್‌ಸ್ಟಾಗ್ರಾಮ್‌ ರೀಲ್ಸ್‌ ಡೌನ್‌ಲೋಡ್: ಈ ಹಿಂದೆ ಇನ್‌ಸ್ಟಾಗ್ರಾಮ್ ವಿಡಿಯೋವನ್ನು ಡೌನ್‌ಲೋಡ್ ಮಾಡಬೇಕು ಎಂದರೆ ಥರ್ಡ್ ಪಾರ್ಟಿ ಆಪ್‌ ಬಳಕೆ ಮಾಡಬೇಕಿತ್ತು. ಇಲ್ಲವಾದರೆ ಇತರೆ ವೆಬ್‌ಸೈಟ್‌ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬೇಕಿತ್ತು. ಆದರೆ, ಇನ್ಮುಂದೆ ಈ ತಾಪತ್ರಯ ಇರೋದಿಲ್ಲ. ಇನ್‌ಸ್ಟಾಗ್ರಾನಲ್ಲೇ ಡೌನ್‌ಲೋಡ್ ಆಯ್ಕೆ ನೀಡಲಾಗಿದ್ದು, ಕೇವಲ ಒಂದು ಕ್ಲಿಕ್‌ನಿಂದ ನಿಮ್ಮಿಷ್ಟದ ವಿಡಿಯೋವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಇನ್ನು ಡೌನ್‌ಲೋಡ್ ಆದ ರೀಲ್‌ಗಳಲ್ಲಿ ವಾಟರ್‌ಮಾರ್ಕ್ ಇರಲಿದೆಯೋ ಇಲ್ಲವೋ ಎಂಬ ಬಗ್ಗೆ ಖಚಿತವಾಗಿಲ್ಲ. ಅದಾಗ್ಯೂ ಕೆಲವು ವರದಿಗಳ ಪ್ರಕಾರ ಡೌನ್‌ಲೋಡ್ ಮಾಡಿದ ವಿಡಿಯೋದ ಮೇಲೆ ಪೋಸ್ಟ್ ಮಾಡಿದ ಬಳಕೆದಾರರ ಖಾತೆಯ ಹೆಸರು ಮತ್ತು ಕಂಪನಿಯ ಲೋಗೋ ಇರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇನ್‌ಸ್ಟಾಗ್ರಾಮ್ ಮಾಹಿತಿ ಖಚಿತಪಡಿಸಿಲ್ಲ.

ಈ ಸಂಬಂಧ ಇನ್‌ಸ್ಟಾಗ್ರಾಮ್‌ನ ಮುಖ್ಯಸ್ಥ ಆಡಮ್ ಮೊಸ್ಸೇರಿ ಮಾಹಿತಿ ನೀಡಿದ್ದು, ಸಾರ್ವಜನಿಕ ಖಾತೆಗಳಿಂದ ಶೇರ್‌ ಮಾಡಿಕೊಂಡ ರೀಲ್‌ಗಳನ್ನು ನಿಮ್ಮ ಕ್ಯಾಮರಾ ರೋಲ್‌ಗೆ ಡೌನ್‌ಲೋಡ್ ಮಾಡುವ ಸಾಮರ್ಥ್ಯವನ್ನು ನಾವು ಹೊರತರುತ್ತಿದ್ದೇವೆ. ನೀವು ಇಷ್ಟಪಡುವ ರೀಲ್‌ನಲ್ಲಿನ ಶೇರ್‌ ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು ಡೌನ್‌ಲೋಡ್ ಅನ್ನು ಆಯ್ಕೆಮಾಡಿ ಎಂದು ತಿಳಿಸಿದ್ದಾರೆ.

ಮುಂದುವರೆದು ಮಾಹಿತಿ ನೀಡಿರುವ ಅವರು ಇದು ತುಂಬಾ ಯೋಗ್ಯವಾಗಿದೆ. ಆದರೆ, ಖಾಸಗಿ ಖಾತೆಗಳಿಂದ ಶೇರ್‌ ಮಾಡಿಕೊಂಡ ರೀಲ್‌ಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ ಮತ್ತು ಸಾರ್ವಜನಿಕ ಖಾತೆಗಳು ಖಾತೆ ಸೆಟ್ಟಿಂಗ್‌ಗಳಲ್ಲಿ ತಮ್ಮ ರೀಲ್‌ಗಳನ್ನು ಸಾವರ್ವಜನಿಕರು ಡೌನ್‌ಲೋಡ್ ಮಾಡಿಕೊಳ್ಳಬೇಕೋ ಅಥವಾ ಬೇಡವೋ ಎಂಬ ಆಯ್ಕೆ ನೀಡುವ ಸಾಮರ್ಥ್ಯವನ್ನು ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಇದರಿಂದ ಬಳಕೆದಾರರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದಂತೆ ಆಗಿದೆ.

ಇನ್ನು ಕಳೆದ ತಿಂಗಳು ಕಂಪೆನಿಯು ರೀಲ್ಸ್‌ನಲ್ಲಿ ಹೊಸ ಎಡಿಟಿಂಗ್ ಅಪ್‌ಡೇಟ್‌ಗಳನ್ನು ಪರಿಚಯಿಸಿತ್ತು. ಈ ಮೂಲಕ ಕ್ರಿಯೇಟರ್ಸ್‌ಗಳು ತಮ್ಮ ಸೃಜನಶೀಲತೆಯನ್ನು ಹೊರಹಾಕಲು ಸಹಾಯ ಮಾಡಿತ್ತು. ಈ ಮೂಲಕ ಬಳಕೆದಾರರು ಯಾವುದೇ ಇತರೆ ಆಪ್‌ಗಳ ಮೊರೆ ಹೋಗದೆ ನೇರವಾಗಿ ಈ ಪ್ಲಾಟ್‌ಫಾರ್ಮ್‌ ಮೂಲಕವೇ ತಮ್ಮ ಕಂಟೆಂಟ್‌ ಅನ್ನು ಎಡಿಟ್‌ ಮಾಡುತ್ತಿದ್ದಾರೆ. ಇದರಲ್ಲಿ ಸ್ಪ್ಲಿಟ್, ಸ್ಪೀಡ್ ಮತ್ತು ರಿಪ್ಲೇಸ್‌ನಂತಹ ಫೀಚರ್ಸ್‌ ಆಯ್ಕೆ ಇದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಮೋಸ: ಈ ನಡುವೆ ಕೆಲವು ಸ್ಕ್ಯಾಮರ್‌ಗಳು ಈ ಪ್ಲಾಟ್‌ಫಾರ್ಮ್‌ಅನ್ನು ವ್ಯವಸ್ಥಿತವಾಗಿ ಬಳಕೆ ಮಾಡಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ. ಅಂದರೆ ದುಬಾರಿ ಬೆಲೆಯ ವಸ್ತುಗಳನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುವ ಮೂಲಕ ಹಾಗೂ ಹಣ ಡಬಲ್‌ ಮಾಡುತ್ತೇವೆ ಎನ್ನುವ ಮೂಲ ಜೊತೆಗೆ ನಕಲಿ ಲಿಂಕ್‌ಗಳನ್ನು ನೀಡಿ ಜನರ ಖಾಸಗಿ ಮಾಹಿತಿ ಕದಿಯುವ ಮೂಲಕ ಒಂದಲ್ಲಾ ಒಂದು ವಿಧದಲ್ಲಿ ಜನರಿಗೆ ಪಂಗನಾಮ ಹಾಕುತ್ತಿದ್ದಾರೆ.

Instagramನಲ್ಲೇ ರೀಲ್ಸ್ ಡೌನ್‌ಲೋಡ್‌ ಮಾಡಬಹುದು, ಅದೇಗೆ ಅತೀರಾ!

ಇದಕ್ಕೆ ನಿದರ್ಶನ ಎಂಬಂತೆ ದಿ ಗಾರ್ಡಿಯನ್ ವರದಿಯೊಂದನ್ನು ಮಾಡಿದ್ದು, ಅದರ ಪ್ರಕಾರ ಮೆಲ್‌ ಎಂಬ ಮಹಿಳೆ ತನ್ನ ಮಗನಿಗೆ ಬಟ್ಟೆ ಖರೀದಿ ಮಾಡಲು ಹೋಗಿ ಬರೋಬ್ಬರಿ 1,25,000 ರೂ.ಗಳನ್ನು ಕಳೆದುಕೊಂಡಿದ್ದಾರೆ ಎಂದು ಉಲ್ಲೇಖಿಸಿದೆ. ಇವರು ಇನ್‌ಸ್ಟಾಗ್ರಾಮ್‌ನಲ್ಲಿ ಕಾಣಿಸಿಕೊಂಡ ಆಫರ್‌ ನೋಡಿ ಮೋಸ ಹೋಗಿದ್ದಾರೆ. ಇದೇ ರೀತಿಯ ಅದೆಷ್ಟೋ ಘಟನೆಗಳು ನಿತ್ಯವೂ ನಡೆಯುತ್ತಿವೆ. ಈ ಕಾರಣಕ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ ಅನವಶ್ಯಕ ಲಿಂಕ್‌ ಕ್ಲಿಕ್‌ ಮಾಡುವ ಮುನ್ನ ಗಮನ ಇರಲಿ.

Best Mobiles in India

English summary
Instagram users can now download reels shared by other users through a dedicated button.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+