Home
Apps

ಜಿಯೋ ಕ್ರಿಸ್‌ಮಸ್ ಗಿಫ್ಟ್: ಮಿಲಿಯನ್ ಬಳಕೆದಾರರಿಗೆ ಹೊಸ ಸೇವೆ.!

By Srinidhi

ಲಯನ್ಸ್ ಮಾಲೀಕತ್ವದ ಜಿಯೋ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಕೇವಲ ಡೇಟಾ-ಉಚಿತ ಕರೆಗಳ ಸೇವೆಯನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲಿಲ್ಲ. ಇದರ ಬದಲಿಗೆ ಹೊಸ ಮಾದರಿಯ ಆಪ್‌ ಸೇವೆಗಳನ್ನು ನೀಡುವ ಮೂಲಕ ಹೊಸ ಹಾದಿಯನ್ನು ಟೆಲಿಕಾಂ ಕಂಪನಿಗಳಿಗೆ ತೋರಿಸಿಕೊಟ್ಟಿತ್ತು. ಅಲ್ಲದೇ ಗ್ರಾಹಕರನ್ನು ಸೆಳೆದಿತ್ತು.

ಜಿಯೋ ಕ್ರಿಸ್‌ಮಸ್ ಗಿಫ್ಟ್: ಮಿಲಿಯನ್ ಬಳಕೆದಾರರಿಗೆ ಹೊಸ ಸೇವೆ.!

ಓದಿರಿ: ಸ್ಮಾರ್ಟ್‌ಫೋನ್‌ನಲ್ಲಿ ಇನ್ನು ಮುಂದೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇರಲ್ಲ..! ಬದಲಾಗಲಿದೆ.!

ಇವುಗಳಲ್ಲಿ ಜಿಯೋ ಸಿನಿಮಾ ಮತ್ತು ಜಿಯೋ ಲೈವ್ ಟಿವಿ ಆಪ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿತ್ತು. ಅಲ್ಲದೇ ಪ್ಲೇ ಸ್ಟೋರಿನಲ್ಲಿ ಅತೀ ಹೆಚ್ಚು ಡೌನ್‌ಲೋಡ್‌ ಸಹ ಆಗಿತ್ತು. ಈ ಸೇವೆಗಳನ್ನು ತನ್ನ ಗ್ರಾಹಕರಿಗೆ ಉಚಿತವಾಗಿ ನೀಡುವ ಕಾರ್ಯಕ್ಕೆ ಜಿಯೋ ಮುಂದಾಗಿತ್ತು. ಅಲ್ಲದೇ ಬೇರೆ ಯಾವ ಆಪ್‌ಗಳಲ್ಲಿಯೂ ಕಾಣದಷ್ಟು ಚಾನಲ್‌ಗಳನ್ನು ಹಾಗೂ ಸಿನಿಮಾಗಳನ್ನು ಜಿಯೋ ತನ್ನ ಬಳಕೆದಾರರಿಗೆ ಉಚಿತವಾಗಿ ನೀಡಿತ್ತು.

ಆಪ್‌ನಿಂದ ವೆಬ್‌ ಸೇವೆ:

ಆಪ್‌ನಿಂದ ವೆಬ್‌ ಸೇವೆ:

ಇದೇ ಕೆಲವು ದಿನಗಳ ಹಿಂದೆ ಜಿಯೋ ಸಿನಿಮಾ ಆಪ್‌ ಸೇವೆಯನ್ನು ವೆಬ್‌ನಲ್ಲಿಯೂ ನೋಡುವ ಅವಕಾಶವನ್ನು ತನ್ನ ಬಳಕೆದಾರರಿಗೆ ಮಾಡಿಟ್ಟಿದ್ದ ಜಿಯೋ, ಈ ಮೂಲಕ ತನ್ನ ಬಳಕೆದಾರರಿಗೆ ಹೊಸ ಅನುಭವನ್ನು ನೀಡಲು ಮುಂದಾಗಿತ್ತು. ಇದು ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿತ್ತು.

Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?
ಈಗ ಜಿಯೋ ಟಿವಿ ಸೇವೆ:

ಈಗ ಜಿಯೋ ಟಿವಿ ಸೇವೆ:

ಜಿಯೋ ಸಿನಿಮಾ ವೆಬ್‌ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡ ಹಿನ್ನಲೆಯಲ್ಲಿ ಜಿಯೋ ತನ್ನ ಲೈವ್‌ ಟಿವಿ ಆಪ್‌ ಸೇವೆಯನ್ನು ವೆಬ್‌ಗೆ ವಿಸ್ತರಿಸಿದ್ದು, ಈ ಮೂಲಕ ಮಿಲಿಯನ್ ಬಳಕೆದಾರರು ಜಿಯೋ ಲೈವ್‌ ಟಿವಿಯನ್ನು ವೆಬ್‌ ನಲ್ಲಿ ನೋಡಬಹುದಾಗಿದೆ. ಈ ಮೂಲಕ ಮತ್ತೊಂದು ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ.

550ಕ್ಕೂ ಹೆಚ್ಚು ಚಾನಲ್‌ಗಳು:

550ಕ್ಕೂ ಹೆಚ್ಚು ಚಾನಲ್‌ಗಳು:

ಜಿಯೋ ಲೈವ್‌ ಟಿವಿಯಲ್ಲಿ ಬಳಕೆದಾರರು 550ಕ್ಕೂ ಹೆಚ್ಚು ಚಾನಲ್‌ಗಳನ್ನು ನೋಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಬೇರೆ ಯಾವುದೇ ಆಪ್‌ಗಳಲ್ಲಿ ಇಷ್ಟು ಪ್ರಮಾಣದ ಲೈವ್‌ ಟಿವಿ ಸೇವೆಯನ್ನು ನೋಡಲು ಸಾಧ್ಯವೇ ಇಲ್ಲ ಎನ್ನಲಾಗಿದೆ. ಯಾವುದೇ DHT, ಇಂಟರ್ನೆಟ್ TVಗಳಲ್ಲಿ ಇಷ್ಟು ಪ್ರಮಾಣದ ಚಾನಲ್ ನೋಡಲು ಸಾಧ್ಯವಿಲ್ಲ ಎನ್ನಲಾಗಿದೆ.

HD ಸೇವೆ:

HD ಸೇವೆ:

ಇದಲ್ಲದೇ ಜಿಯೋ ಲೈವ್‌ ಟಿವಿಯನ್ನು ಗ್ರಾಹಕರು ವೆಬ್‌ ಆವೃತ್ತಿಯಲ್ಲಿ HD ಗುಣಮಟ್ಟದಲ್ಲಿ ನೋಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದರಿಂದಾಗಿ ಗ್ರಾಹಕರು ತಮ್ಮ ಸ್ಮಾರ್ಟ್‌ ಟಿವಿಯಲ್ಲಿಯೂ ಈ ಸೇವೆಯನ್ನು ಪಡೆಯಬಹುದಾಗಿದೆ.

Best Mobiles in India

English summary
Reliance Jio Silently Introduces Web Version of JioTV. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+