Subscribe to Gizbot

ಸ್ಮಾರ್ಟ್‌ಫೋನ್‌ನಲ್ಲಿ ಇನ್ನು ಮುಂದೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇರಲ್ಲ..! ಬದಲಾಗಲಿದೆ.!

Written By:

ಜಾಗತಿಕ ಮಾರುಕಟ್ಟೆ ಸೇರಿದಂತೆ ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಸದ್ದು ಮಾಡುತ್ತಿವೆ. ಫೀಚರ್ ಫೋನ್‌ಗಳನ್ನು ಕೇಳುವವರಿಲ್ಲದಂತಾಗಿದೆ. ಈ ಹಿನ್ನಲೆಯಲ್ಲಿ ದಿನಕ್ಕೊಂದು ಹೊಸ ಆಯ್ಕೆಗಳನ್ನು ವಿಶೇಷತೆಗಳನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ ಸ್ಮಾರ್ಟ್‌ಫೋನ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇತಿಹಾಸದಲ್ಲೇ ಹೊಸದೊಂದು ಬದಲಾವಣೆಯೂ ಕಾಣಿಸಿಕೊಂಡಿದೆ.

ಸ್ಮಾರ್ಟ್‌ಫೋನ್‌ನಲ್ಲಿ ಇನ್ನು ಮುಂದೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇರಲ್ಲ..!

ಓದಿರಿ: ಗೂಗಲ್‌ನಲ್ಲಿ ಜಿಯೋ ಬಗ್ಗೆ ಭಾರತೀಯರು ಹುಡುಕಾಡಿದ ಪ್ರಶ್ನೇ ಯಾವುದು ಗೊತ್ತಾ.?

ಈಗಾಗಲೇ ಮಾರುಕಟ್ಟೆಯಲ್ಲಿ ಫುಲ್‌ ಸ್ಕ್ರಿನ್‌ ಡಿಸ್‌ಪ್ಲೇಯ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಫೋನ್ ಮುಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಅಳವಡಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಹಿಂಭಾಗಕ್ಕೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಶೀಫ್ಟ್ ಆಗಿದೆ. ಈ ಹಿನ್ನಲೆಯಲ್ಲಿ ಮುಂಭಾಗದ ಸ್ಕ್ರಿನ್‌ ಕೆಳಭಾಗದಲ್ಲಿಯೇ ಅಳವಡಿಸಬಹುದಾ ಫಿಂಗರ್ ಪ್ರಿಂಟ್ ಸ್ಕ್ಯಾನರ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾನಾಪ್ಟಿಕ್ಸ್:

ಸ್ಯಾನಾಪ್ಟಿಕ್ಸ್:

ಫಿಂಗರ್ ಪ್ರಿಂಟ್‌ ಸ್ಕ್ಯಾನರ್‌ಗಳನ್ನು ಡಿಸ್‌ಪ್ಲೇಯ ಕೆಳಭಾಗದಲ್ಲಿ ಅಳವಡಿಸುವ ಸುಲುವಾಗಿ ಸ್ಯಾನಾಪ್ಟಿಕ್ಸ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರಿಂದಾಗಿ ಇನ್-ಡಿಸ್‌ಪ್ಲೇಯಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್‌ಗಳನ್ನು ಕಾಣಬಹುದಾಗಿದೆ. ಇದು ಮುಂದಿನ ದಿನಗಳಲ್ಲಿ ನಿರ್ಮಾಣವಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳಲಿದೆ.

ವಿವೋದಲ್ಲಿ ಮೊದಲ ಸ್ಯಾನಾಪ್ಟಿಕ್ಸ್:

ವಿವೋದಲ್ಲಿ ಮೊದಲ ಸ್ಯಾನಾಪ್ಟಿಕ್ಸ್:

ಸ್ಯಾನಾಪ್ಟಿಕ್ಸ್ ತಂತ್ರಜ್ಞಾನದ ಮೂಲಕ ಇನ್ -ಡಿಸ್‌ಪ್ಲೇ ಫಿಂಗರ್ ಪ್ರಿಂಟ್‌ ಸ್ಕ್ಯಾನರ್‌ ಅಳವಡಿಸಿದ ಮೊದಲ ಸ್ಮಾರ್ಟ್‌ಫೋನ್ ಅನ್ನು ಚೀನಾ ಮೂಲದ ವಿವೋ ಕಂಪನಿಯೂ ಲಾಂಚ್ ಮಾಡಲಿದೆ ಎನ್ನಲಾಗಿದೆ.

ಸಾಮಾನ್ಯ ಫಿಂಗರ್ ಪ್ರಿಂಟ್‌ಗಿಂತ ವೇಗ:

ಸಾಮಾನ್ಯ ಫಿಂಗರ್ ಪ್ರಿಂಟ್‌ಗಿಂತ ವೇಗ:

ಸ್ಯಾನಾಪ್ಟಿಕ್ಸ್ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುವ ಇನ್-ಡಿಸ್‌ಪ್ಲೇ ಫಿಂಗರ್ ಪ್ರಿಂಟ್‌ ಸ್ಕ್ಯಾನರ್‌ ಸಾಮಾನ್ಯ ಫಿಂಗರ್ ಪ್ರಿಂಟ್‌ಗಿಂತ ವೇಗ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಮುಂಬರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ಮಾದರಿಯ ಇನ್-ಡಿಸ್‌ಪ್ಲೇ ಫಿಂಗರ್ ಪ್ರಿಂಟ್‌ ಸ್ಕ್ಯಾನರ್‌ ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Synaptics In-Display Fingerprint Sensor, to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot