ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್ ಫೋನ್ ಖರೀದಿಸಲು ಆಫರ್..!
ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಸ್ಮಾರ್ಟ್ ಫೋನ್ ಕೊಳ್ಳುವವರಿಗೆ ದೈತ್ಯ ಟೆಲಿಕಾಂ ಕಂಪನಿಗಳು ಬಂಪರ್ ಆಫರ್ ಅನ್ನು ನೀಡಲು ಮುಂದಾಗಿವೆ. ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ ಟೆಲ್ ಕ್ಯಾಷ್ ಬ್ಯಾಕ್ ಸೇರಿದಂತೆ ಹೆಚ್ಚುವರಿ ಡೇಟಾ, ಬೈಬ್ಯಾಕ್ ಆಫರ್ ಗಳನ್ನು ನೀಡುತ್ತಿವೆ. ಈ ಹಿನ್ನಲೆಯಲ್ಲಿ ನೂತನ ಬಳಕೆದಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿರುವ ಈ ಎರಡು ಕಂಪನಿಗಳು ನೀಡುತ್ತಿರುವ ಆಫರ್ ಗಳ ಬಗ್ಗೆ ಮಾಹಿತಿಯೂ ಈ ಮುಂದಿನಂತಿದೆ.

ಮಾರುಕಟ್ಟೆಯಲ್ಲಿ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್ ಎರಡು ಆವೃತ್ತಿಗಳಲ್ಲಿ ದೊರೆಯುತ್ತಿದೆ. ಗ್ಯಾಲೆಕ್ಸಿ S9 64GB ಆವೃತ್ತಿಯೂ ರೂ. 57,900ಕ್ಕೆ ಹಾಗೂ 256GB ಆವೃತ್ತಿಯೂ ರೂ.65,900ಕ್ಕೆ ಲಭ್ಯ ವಿದೆ. ಇದೇ ಮಾದರಿಯಲ್ಲಿ ಗ್ಯಾಲೆಕ್ಸಿ S9 ಪ್ಲಸ್ 64GB ಆವೃತ್ತಿಯೂ ರೂ. 64,900ಕ್ಕೆ ಹಾಗೂ 256GB ಆವೃತ್ತಿಯೂ ರೂ.73,900ಕ್ಕೆ ದೊರೆಯಲಿದೆ.
ಓದಿರಿ: ಫೇಸ್‌ಬುಕ್ ಬಳಕೆ ಸೇಫ್ ಅಲ್ಲ: ಆಧಾರ್ ನಂತರ ಕೋಟಿ-ಕೋಟಿ ಫೇಸ್‌ಬುಕ್ ಬಳಕೆದಾರರ ಮಾಹಿತಿ ಲೀಕ್..!
ಏರ್ ಟೆಲ್ ಆಫರ್:
ಏರ್ ಟೆಲ್ ರೂ.9900 ಡೌನ್ ಪೇಮೆಂಟ್ ಗೆ ಗ್ಯಾಲೆಕ್ಸಿ S9 64GB ಆವೃತ್ತಿ ಸ್ಮಾರ್ಟ್ ಫೋನ್ ಅನ್ನು ನೀಡಲಿದ್ದು, ರೂ.24,499 ಗಳನ್ನು 24 ತಿಂಗಳು ಗಳ ಕಾಲ ಪಾವತಿ ಮಾಡಬೇಕಾಗಿದೆ. ಇದೇ ಮಾದರಿಯಲ್ಲಿ ಗ್ಯಾಲೆಕ್ಸಿ S9 ಪ್ಲಸ್ 64GB ಆವೃತ್ತಿಯನ್ನು ರೂ.9900 ಡೌನ್ ಪೇಮೆಂಟ್ ನೀಡಿ 24 ತಿಂಗಳು ಕಾಲ ರೂ.2799ಗಳನ್ನು ಪಾವತಿ ಮಾಡಬೇಕಾಗಿದೆ.
ಇದಲ್ಲದೇ ರೂ.17,900 ಡೌನ್ ಪೇಮೆಂಟ್ ಗೆ ಗ್ಯಾಲೆಕ್ಸಿ S9 256 GB ಆವೃತ್ತಿ ಸ್ಮಾರ್ಟ್ ಫೋನ್ ಅನ್ನು ನೀಡಲಿದ್ದು, ರೂ.24,499 ಗಳನ್ನು 24 ತಿಂಗಳು ಗಳ ಕಾಲ ಪಾವತಿ ಮಾಡಬೇಕಾಗಿದೆ. ಇದೇ ಮಾದರಿಯಲ್ಲಿ ಗ್ಯಾಲೆಕ್ಸಿ S9 ಪ್ಲಸ್ 256 GB ಆವೃತ್ತಿಯನ್ನು ರೂ.17,900 ಡೌನ್ ಪೇಮೆಂಟ್ ನೀಡಿ 24 ತಿಂಗಳು ಕಾಲ ರೂ.2799ಗಳನ್ನು ಪಾವತಿ ಮಾಡಬೇಕಾಗಿದೆ.

ಇದರಲ್ಲಿ ಬಳಕೆದಾರರಿಗೆ 80GB ಉಚಿತ ಡೇಟಾ ಬಳಕೆಗೆ ದೊರೆಯಲಿದೆ. ಅಲ್ಲದೇ ಒಂದು ವರ್ಷಗಳ ಕಾಲ ಅಮೆಜಾನ್ ಪ್ರೈಮ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಅನ್ ಲಿಮಿಟೆಡ್ ಕರೆ ಮಾಡುವ ಅವಕಾಶ ಮತ್ತು ಏರ್ ಟೆಲ್ ಆಪ್ ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ರಿಲಯನ್ಸ್ ಜಿಯೋ:
ಇದಲ್ಲದೇ ರಿಲಯನ್ಸ್ ಮಾಲೀಕತ್ವದ ಜಿಯೋ ಬಳಕೆದಾರರಿಗೆ 1 TB ಉಚಿತ ಡೇಟಾವನ್ನು ನೀಡಲಿದ್ದು, ಅಲ್ಲದೇ ಒಂದು ವರ್ಷಗಳ ಕಾಲ ಉಚಿತವಾಗಿ ಕರೆ ಮಾಡುವ ಅವಕಾಶ ಮತ್ತು SMS ಕಳುಹಿಸುವ ಅವಕಾಶವನ್ನು ಮಾಡಿಕೊಡಲಿದೆ. ಅದುವೇ ರೂ.4999ಕ್ಕೆ ದೊರೆಯುತ್ತಿದೆ. ಇದಲ್ಲದೇ 70% ಬೈ ಬ್ಯಾಕ್ ಆಫರ್ ಅನ್ನು ಸಹ ನೀಡಲು ಮುಂದಾಗಿದೆ. ಇದಲ್ಲದೇ EMI ಆಯ್ಕೆಯನ್ನು ಸಹ ನೀಡುತ್ತಿದೆ.


Click it and Unblock the Notifications








