ಫೇಸ್‌ಬುಕ್ ಬಳಕೆ ಸೇಫ್‌ ಅಲ್ಲ: ಆಧಾರ್ ನಂತರ ಕೋಟಿ-ಕೋಟಿ ಫೇಸ್‌ಬುಕ್ ಬಳಕೆದಾರರ ಮಾಹಿತಿ ಲೀಕ್..!

|

ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್‌ ಇಂದು ಜಾಗತಿಕವಾಗಿ ನಡೆಯುತ್ತಿರುವ ಹಲವು ಘಟನೆಗಳಿಗೆ ನೇರವಾಗಿ ಇಲ್ಲವೇ ಪರೋಕ್ಷವಾಗಿ ಕಾರಣವಾಗಿರುತ್ತದೆ. ಇದೇ ಮಾದರಿಯಲ್ಲಿ ಅಮೆರಿಕಾ ಸೇರಿದಂತೆ ವಿಶ್ವದಾದ್ಯಂತ ನಡೆದ ಚುನಾವಣಾ ಪ್ರಚಾರದಲ್ಲಿ ಫೇಸ್‌ಬುಕ್ ಪ್ರಮುಖ ಪಾತ್ರವನ್ನುವಹಿಸಿದೆ. ಇದೇ ಅಂಶ ಫೇಸ್‌ಬುಕ್‌ ಹಾಗೂ ಸಂಸ್ಥಾಪಕ ಜುಕರ್ ಬರ್ಗ್‌ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

 ಆಧಾರ್ ನಂತರ ಕೋಟಿ-ಕೋಟಿ ಫೇಸ್‌ಬುಕ್ ಬಳಕೆದಾರರ ಮಾಹಿತಿ ಲೀಕ್..!

ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಮಂದಿ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್‌ 2016ರಲ್ಲಿ ನಡೆದಿದ್ದ ಅಧ್ಯಕ್ಷೀಯ ಚುನಾವಣೆ ಪ್ರಚಾರದಲ್ಲಿ ಪ್ರಮುಖ ಪಾತ್ರವನ್ನುವಹಿಸಿತ್ತು. ಈ ಸಂದರ್ಭದಲ್ಲಿ ಸುಮಾರು 5 ಕೋಟಿ ಬಳಕೆದಾರರ ಸೋರಿಕೆಯಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ವಿಷಲ್ ಬ್ಲೊವರ್ ಒಬ್ಬರು ಹೊರ ಹಾಕಿದ್ದಾರೆ. ರಾಜಕೀಯ ವಿಶ್ಲೇಷಣೆ ಮಾಡುವ ಸಂಸ್ಥೆಯೊಂದು ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ತನ್ನ ಲಾಭಕ್ಕೆ ಬಳಕೆ ಮಾಡಿಕೊಂಡಿದೆ ಎನ್ನಲಾಗಿದೆ.

5 ಕೋಟಿ ಬಳಕೆದಾರರ ಮಾಹಿತಿ:

5 ಕೋಟಿ ಬಳಕೆದಾರರ ಮಾಹಿತಿ:

5 ಕೋಟಿ ಫೇಸ್‌ಬುಕ್‌ ಬಳಕೆದಾರರ ವೈಯಕ್ತಿಕ ಮಾಹಿತಿಯು ರಾಜಕೀಯ ಕಾರಣಗಳಿಗಾಗಿ ಸೋರಿಕೆಯಾಗಿದೆ ಎನ್ನುವ ಮಾಹಿತಿಯೂ ಜಾಗತಿಕವಾಗಿ ಕೋಲಾಹಲವನ್ನು ಎಬ್ಬಿಸಿದ್ದು, ಇದೇ ಕಾರಣದಿಂದ ಒಂದೇ ದಿನದಲ್ಲಿ ಫೇಸ್‌ಬುಕ್‌ನ ಷೇರುಗಳು ಕುಸಿತ ಕಂಡಿದ್ದು, ಮಾರುಕಟ್ಟೆಯಲ್ಲಿ 40 ಶತಕೋಟಿ ಡಾಲರ್‌ನಷ್ಟು ನಷ್ಟವನ್ನು ಫೇಸ್‌ಬುಕ್ ಅನುಭವಿಸಿದೆ.

ಜುಕರ್‌ಬರ್ಗ್ ವಿಚಾರಣೆ:

ಜುಕರ್‌ಬರ್ಗ್ ವಿಚಾರಣೆ:

ನಷ್ಟ ಒಂದು ಕಡೆಯಾದರೆ ಡೇಟಾ ಸೋರಿಕೆ ಪ್ರಕರಣ ಸಂಬಂಧ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಅವರನ್ನು ವಿಚರಣೆ ನಡೆಸಬೇಕು ಎನ್ನುವ ಕೂಗು ಹೆಚ್ಚಾಗಿದ್ದು, ಮೂಲಗಳ ಪ್ರಕಾರ ಬಂಧನದ ಸಾಧ್ಯತೆ ಸಹ ಇದೆ. ಈ ಸಂಬಂಧ ಬ್ರಿಟನ್‌ನ ಸಂಸದೀಯ ಮಂಡಳಿ ಮಾರ್ಕ್‌ ಜುಕರ್‌ಬರ್ಗ್‌ ಅವರನ್ನು ವಿಚಾರಣೆಯನ್ನು ನಡೆಸಲಿದೆ ಎನ್ನಲಾಗಿದೆ.

ಕೇಂಬ್ರಿಡ್ಜ್‌ ಅನಾಲಿಟಿಕಾ:

ಕೇಂಬ್ರಿಡ್ಜ್‌ ಅನಾಲಿಟಿಕಾ:

ಕೇಂಬ್ರಿಡ್ಜ್‌ ಅನಾಲಿಟಿಕಾ ಎಂಬ ಸಂಸ್ಥೆಯೂ ಚುನಾವಣೆಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಅನುಕೂಲವಾಗುವಂತೆ ಫೇಸ್‌ಬುಕ್‌ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಡೇಟಾ ಬಳಸಿಕೊಂಡಿದೆ ಎಂದು ವರದಿಯಾಗಿದ್ದು, ಇದು ಫೇಸ್‌ಬುಕ್‌ ಇಕಟ್ಟಿಗೆ ಸಿಲುಕಿಸಿದ್ದು, ಮತ್ತೊಮ್ಮೆ ಫೇಸ್‌ಬುಕ್ ಸೇಫ್ ಅಲ್ಲ ಎನ್ನುವುದನ್ನು ತೋರಿಸಿದೆ.

How to view all photos, pages, comments and posts you liked on Facebook (KANNADA)
ಫೇಸ್‌ಬುಕ್ ಡಿಲೀಟ್ ಮಾಡಿ:

ಫೇಸ್‌ಬುಕ್ ಡಿಲೀಟ್ ಮಾಡಿ:

ಈ ಘಟನೆ ಸಂಬಂಧ ವಾಟ್ಸ್‌ಆಪ್ ಸಹ ಸಂಸ್ಥಾಪಕ ಬ್ರಿಯನ್ ಆಕ್ಟನ್, ಫೇಸ್‌ಬುಕ್ ಅನ್ನು ಡಿಲೀಟ್ ಮಾಡಲು ಇದೇ ಸರಿಯಾದ ಸಮಯ ಎಂದು ಟ್ವಿಟ್ ಮಾಡಿದ್ದಾರೆ. ಇದು ಸಹ ವೈರಲ್ ಆಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಫೇಸ್‌ಬುಕ್ ಬಳಕೆದಾರರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದ್ದು, ಸುರಕ್ಷಿತವಾಗಿ ಫೇಸ್‌ಬುಕ್ ಬಳಕೆ ಮಾಡಿಕೊಳ್ಳಬೇಕಾಗಿದೆ.

Best Mobiles in India

English summary
Facebook-Cambridge Analytica data breach. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X