ಎಲ್ಲರೂ ಡೌನ್‌ಲೋಡ್ ಮಾಡಲೇಬೇಕಾದ ಆಪ್ ಎಸ್‌ಬಿಐನ "ಯೊನೊ"!!..ಏಕೆ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ" ಪರಿಚಯಿಸಿರುವ ಸಮಗ್ರ ಡಿಜಿಟಲ್ ಸೇವೆಗಳ ಹೊಸ ಆಪ್ ‘ಯೊನೊ’ಗೆ (You Only Need One–YONO) ಬಹುಬೇಗ ಭಾರಿ ಗ್ರಾಹಕರ ಬೆಂಬಲ ದೊರೆತಿದೆ.!!
ಖಾಸಾಗಿ ಆನ್‌ಲೈನ್ ವಾಲಟ್‌ಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಭಾರತದ ಅತಿದೊಡ್ಡ ಬ್ಯಾಂಕ್ "ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ" ಪರಿಚಯಿಸಿರುವ ಸಮಗ್ರ ಡಿಜಿಟಲ್ ಸೇವೆಗಳ ಹೊಸ ಆಪ್ 'ಯೊನೊ'ಗೆ (You Only Need One-YONO) ಬಹುಬೇಗ ಭಾರಿ ಗ್ರಾಹಕರ ಬೆಂಬಲ ದೊರೆತಿದೆ.!!
ಕ್ಯಾಬ್ ಬುಕಿಂಗ್, ಸಿನಿಮಾ, ಬಸ್, ರೈಲು ಟಿಕೆಟ್ ಖರೀದಿ, ಹೋಟೆಲ್ ರೂಮ್ ಮುಂಗಡ ಕಾದಿರಿಸುವಿಕೆ ಜತೆಗೆ ವೈದ್ಯಕೀಯ ಸೇವೆಗಳು ಲಭ್ಯವಿರುವ 'ಯೊನೊ' ಆಪ್ ಇದೀಗ ವೈರೆಲ್ ಆಗಿದ್ದು, ಕೇವಲ ಐದು ನಿಮಿಷಗಳಲ್ಲಿ ಎಸ್‌ಬಿಐ ಬ್ಯಾಂಕ್ ಖಾತೆ ತೆರೆಯಬಹುದಾದ ಫೀಚರ್ ಜನರನ್ನು ಆಕರ್ಷಿಸಿದೆ.!!

ಹಣಕಾಸು ಸೇವೆ ಮತ್ತು ಜೀವನಶೈಲಿ ಸೇವೆಗಳು ಮತ್ತು ಆನ್‌ಲೈನ್ ಉತ್ಪನ್ನಗಳು ಒಂದೇ ತಾಣದಲ್ಲಿ ದೊರೆಯುವ ವಿಶಿಷ್ಟ ಆಪ್ 'ಯೊನೊ' ಆಗಿದ್ದು, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಜತೆಗೆ ಜೀವನಶೈಲಿಯ 14 ವಿವಿಧ ಬಗೆಯ ಸೌಲಭ್ಯಗಳನ್ನೂ ಇಲ್ಲಿ ಪಡೆಯಬಹುದು ಎಂದು ಎಸ್‌ಬಿಐ ತಿಳಿಸಿದೆ.!! .

ಅಮೆಜಾನ್, ಮಿಂತ್ರಾ, ಜಬಾಂಗ್, ಷಾಪರ್ಸ್ ಸ್ಟಾಪ್, ಯಾತ್ರಾ ಸೇರಿದಂತೆ 60ಕ್ಕೂ ಹೆಚ್ಚು ಇ-ಕಾಮರ್ಸ್ ಸಂಸ್ಥೆಗಳ ಜತೆ ಎಸ್‌ಬಿಐ ಒಪ್ಪಂದ ಮಾಡಿಕೊಂಡಿದ್ದು, ಈ ಆಪ್ ಮೂಲಕ ಆನ್‌ಲೈನ್ ಖರೀದಿಗೆ ಆಕರ್ಷಕ ಕೊಡುಗೆಗಳೂ ಇರಲಿವೆ. ಹಾಗಾಗಿ, ಇನ್ನೇಕೆ ತಡ? ಈಗಲೇ ಡೌನ್‌ಲೋಡ್ ಮಾಡಿಬಿಡಿ.!!
ಓದಿರಿ: ಜ.1 ರಿಂದ ಆನ್‌ಲೈನ್‌ನಲ್ಲಿ ಆಧಾರ್-ಮೊಬೈಲ್ ಸಂಖ್ಯೆ ಜೋಡಣೆ ಆಯ್ಕೆ!!


Click it and Unblock the Notifications








