ವಾಟ್ಸಪ್ ಬಳಸುವ ಪ್ರತಿಯೊಬ್ಬರು ಈ ಸೇಫ್ಟಿ ಫೀಚರ್ಸ್ ಬಗ್ಗೆ ತಿಳಿಯಬೇಕು!
ವಿಶ್ವದಲ್ಲಿಯೇ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಇನ್‌ಸ್ಟಂಟ್ ಮೆಸೆಜಿಂಗ್ ಆಪ್, ವಾಟ್ಸಪ್ ತನ್ನ ಬಳಕೆದಾರರಿಗೆ ಹಲವು ಅಗತ್ಯ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅದಾಗ್ಯೂ ವಾಟ್ಸಪ್ ಆಪ್‌ನಲ್ಲಿ ದೋಷಗಳು ಕಂಡುಬಂದಿರುವ ಮತ್ತು ಹಾಕ್‌ನಂತಹ ಸುದ್ದಿಗಳನ್ನು ಕೇಳಿದ್ದೇವೆ. ಆದರೆ ವಾಟ್ಸಪ್ ಬಳಕೆದಾರರ ಚಾಟ್ ಅನ್ನು ಸುರಕ್ಷಿತವಾಗಿಡಲು ಕೆಲವು ಅತ್ಯುತ್ತಮ ಸೇಫ್ಟಿ ಫೀಚರ್ಸ್ ನೀಡಿದ್ದು, ಅವುಗಳು ಚಾಟ್‌ನ ಖಾಸಗಿತನ ಕಾಪಾಡಲು ನೆರವಾಗುತ್ತವೆ.

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಬಳೆಕೆದಾರರ ಖಾಸಗಿ ಚಾಟ್/ಮೆಸೆಜ್‌ಗಳಿಗೆ ಹೆಚ್ಚಿನ ಸುರಕ್ಷಿತೆ ಒದಗಿಸುವ ನಿಟ್ಟಿನಲ್ಲಿ ಸೇಫ್ಟಿ ಫೀಚರ್ಸ್‌ಗಳನ್ನು ನೀಡಿದೆ. ಅವುಗಳು ಬಳಕೆದಾರರ ಚಾಟ್‌ಗೆ ಹೆಚ್ಚುವರಿ ಕವಚ್‌ದಂತೆ ಕಾರ್ಯನಿರ್ವಹಿಸಲಿವೆ. ಅಷ್ಟೇ ಅಲ್ಲದೇ ಇತ್ತೀಚಿಗಷ್ಟೆ ಫಿಂಗರ್‌ಪ್ರಿಂಟ್ ಲಾಕ್ ಫೀಚರ್ ಅನ್ನು ಸಹ ಪರಿಚಯಿಸಿದೆ. ಒಟ್ಟಾರೇ ವಾಟ್ಸಪ್ ಚಾಟ್ ಡಬಲ್ ರಕ್ಷಣೆ ಪಡೆದಿದೆ ಎನ್ನಬಹುದಾಗಿದೆ. ಹಾಗಾದರೇ ವಾಟ್ಸಪ್‌ನಲ್ಲಿ ಲಭ್ಯ ಇರುವ ಟಾಪ್ ಚಾಟ್ ಸುರಕ್ಷಾ ಫೀಚರ್ಸ್‌ಗಳು ಯಾವುವು ಎನ್ನುವುದನ್ನು ಮುಂದೆ ತಿಳಿಯೋಣ.

DP ಫೋಟೊ ಕಂಟ್ರೋಲ್
ವಾಟ್ಸಪ್ ಬಳಕೆದಾರರು ಅವರ ಪ್ರೋಫೈಲ್‌ಗೆ ಇಡುವ ಫೋಟೊವನ್ನು ಶಾರ್ಟ್ ಆಗಿ ಡಿಪಿ ಎಂದು ಕರೆಯಲಾಗುತ್ತದೆ. ಡಿಪಿಯಲ್ಲಿಡುವ ಫೋಟೊ ಯಾರಿಗೆ ಕಾಣಿಸಬೇಕು ಯಾರಿಗೆ ಕಾಣಿಸಬಾರದು ಎಂಬುದನ್ನು ಸೆಟ್ ಮಾಡುವುದಕ್ಕೆ ಅವಕಾಶ ಇದೆ. ಡಿಪಿ ಫೋಟೊವನ್ನು ಇತರರು ವೀಕ್ಷಿಸದಂತೆ ನಿಯಂತ್ರಿಸಬಹುದಾಗಿದೆ. ಅದಕ್ಕಾಗಿ Everyone, My Contacts ಮತ್ತು Nobody ಆಯ್ಕೆಗಳನ್ನು ನೀಡಿದೆ. ಈ ಫೀಚರ್ ಅನ್ನು ಸೆಟ್ ಮಾಡಲು ಬಳಕೆದಾರರು ಈ ಹಂತಗಳನ್ನು ಅನುಸರಿಸಿ ವಾಟ್ಸಪ್ > ಸೆಟ್ಟಿಂಗ್ > ಅಕೌಂಟ್ > ಪ್ರೈವೆಸಿ > ಪ್ರೋಫೈಲ್ ಫೋಟೊ.

ಬ್ಲಾಕ್ ಮಾಡುವ ಆಯ್ಕೆ
ವಾಟ್ಸಪ್‌ನಲ್ಲಿ ಬಳಕೆದಾರರಿಗೆ ಲಭ್ಯವಾಗಿರುವ ಅನುಕೂಲಕರ ಫೀಚರ್‌ಗಳಲ್ಲಿ ಬ್ಲಾಕ್ ಮಾಡುವ ಆಯ್ಕೆ ಸಹ ಒಂದು. ನಿಮಗೆ ಕಿರಿ ಕಿರಿ ಅನಿಸುವ ಕಾಂಟ್ಯಾಕ್ಟ್ ಅನ್ನು ಬ್ಲಾಕ್ ಮಾಡುವ ಮೂಲಕ ಅವರಿಂದ ಬರುವ ಟೆಕ್ಸ್ಟ್ ಮೆಸೆಜ್ ಮತ್ತು ವಾಯಿಸ್ ಮೆಸೆಜ್‌ಗಳನ್ನು ನಿಯಂತ್ರಿಸಿಕೊಳ್ಳಬಹುದು. ಈ ಆಯ್ಕೆ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಬ್ಬರಿಗೂ ಲಭ್ಯವಿದೆ.

ವಾಟ್ಸಪ್ ಬ್ಲೂ ಟಿಕ್ ಮಾರ್ಕ್ ಆಫ್ ಮಾಡಿ
ವಾಟ್ಸಪ್‌ನಲ್ಲಿ ಮೆಸೆಜ್ ಕಳುಹಿಸಿದ ಮೇಲೆ ಎರಡು ಪಾಸ್ ಮಾರ್ಕ್ ಕಾಣಿಸುತ್ತವೆ. ಅವುಗಳು ಬಿಳಿ ಬಣ್ಣದಲ್ಲಿದ್ದರೇ ಮೆಸೆಜ್ ಅವರಿಗೆ ತಲುಪಿದೆ ಎಂದರ್ಥ. ಅದೇ ಅವುಗಳು ಬ್ಲೂ ಬಣ್ಣಗಳಾದರೇ ಅವರು ಆ ಮೆಸೆಜ್ ನೋಡಿದ್ದಾರೆ ಎಂದರ್ಥ. ಆದರೆ ಈ ಬ್ಲೂ ಟಿಕ್ ಮಾರ್ಕ್ ಬೇಕಿದ್ದರೇ ಆಪ್ ಮಾಡಿಕೊಳ್ಳಬಹುದಾದ ಆಯ್ಕೆ ವಾಟ್ಸಪ್‌ನಲ್ಲಿ ಲಭ್ಯ ಇದೆ. ಆಫ್ ಮಾಡಿದರೇ ಬಳಕೆದಾರ ಮೆಸೆಜ್ ನೋಡಿದರೂ ಕಳುಹಿಸಿದವರಿಗೆ ಬ್ಲೂ ಬಣ್ಣದಲ್ಲಿ ಕಾಣಿಸುವುದಿಲ್ಲ.

ವಾಟ್ಸಪ್ ಗ್ರೂಪ್ ಸೇರುವ ಆಯ್ಕೆ
ವಾಟ್ಸಪ್ ಬಳಕೆದಾರರು ಹೊಸದಾಗಿ ರಚಿಸುವ ವಾಟ್ಸಪ್ ಗ್ರೂಪ್ ಸೇರುವಿಕೆ ನಿಯಂತ್ರಿಸಬಹುದಾದ ಆಯ್ಕೆಗಳಿವೆ. ಈ ಫೀಚರ್‌ನಲ್ಲಿ Everyone, My Contacts, My Contacts Except..ಮತ್ತು Nobody ಆಯ್ಕೆಗಳಿದ್ದು, ಬಳಕೆದಾರರು ಅಗತ್ಯ ಎನಿಸುವುದನ್ನು ಸೆಟ್ ಮಾಡಬಹುದಾಗಿದೆ. ಅದಕ್ಕಾಗಿ ಈ ಹಂತಗಳನ್ನು ಅನುಸರಿಸಿರಿ. ವಾಟ್ಸಪ್ > ಸೆಟ್ಟಿಂಗ್ > ಅಕೌಂಟ್ > ಪ್ರೈವೆಸಿ > ಗ್ರೂಪ್ಸ್.

ಫಿಂಗರ್‌ಪ್ರಿಂಟ್ ಲಾಕ್
ವಾಟ್ಸಪ್ ಬಳಕೆದಾರರ ಮಾಹಿತಿ ಸುರಕ್ಷತೆಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಹೊಸದಾಗಿ ಫಿಂಗರ್‌ಪ್ರಿಂಟ್ ಲಾಕ್ ಫೀಚರ್ ಪರಿಚಯಿಸಿದೆ. ಈ ಫೀಚರ್ ವಾಟ್ಸಪ್ ಆಪ್‌ಗೆ ಲಾಕ್ ಒದಗಿಸಲು ನೆರವಾಗಲಿದ್ದು, ಬಳಕೆದಾರರು ಅವರ ಬೆರಳ ಗುರುತನ್ನು ಸ್ಕ್ಯಾನ್ ಮಾಡುವ ಮೂಲಕ ಆಪ್ ಲಾಕ್ ಮಾಡಬಹುದು ಮತ್ತು ಅನ್‌ಲಾಕ್ ಮಾಡಬಹುದಾಗಿದೆ. ಸ್ಮಾರ್ಟ್‌ಫೋನ್ ಫಿಂಗರ್‌ಪ್ರಿಂಟ್ ಲಾಕ್ ತರಹವೇ ಇದು ಕೆಲಸ ಮಾಡಲಿದೆ.


Click it and Unblock the Notifications








