ಶಿಯೋಮಿಯ 'ಮಿ ಡ್ರಾಪ್‌' ಫೈಲ್‌ ಟ್ರಾನ್ಸ್‌ಫರ್‌ ಆಪ್ ಇನ್‌ಸ್ಟಾನ್‌ ಮಾಡಿದ್ದಿರಾ?

|

ಚೀನಾ ಮೂಲಕದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಶಿಯೋಮಿ ಅಗ್ಗದ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಸೈ ಎನಿಸಿಕೊಂಡಿರುವ ಜೊತೆಗೆ ಫ್ಯಾಶನ್ ಉತ್ಪನ್ನಗಳನ್ನು ಪರಿಚಯಿಸಿ ಗ್ರಾಹಕರಿಂದ ಮೆಚ್ಚುಗೆ ಪಡೆದಿದೆ. ಹಾಗೇ ಫೈಲ್‌ ಟ್ರಾನ್ಸ್‌ಫರ್‌ ಮಾಡಲು ಕಂಪನಿ 'ಮಿ ಡ್ರಾಪ್' ಅಪ್ಲಿಕೇಶನ್ ಅಪ್‌ಡೇಟ್‌ ಆಗಿದ್ದು, ಬಳಕೆದಾರರ ಸ್ನೇಹಿಯಾಗಿದೆ.

ಶಿಯೋಮಿಯ 'ಮಿ ಡ್ರಾಪ್‌' ಫೈಲ್‌ ಟ್ರಾನ್ಸ್‌ಫರ್‌ ಆಪ್ ಇನ್‌ಸ್ಟಾನ್‌ ಮಾಡಿದ್ದಿರಾ?

ಶಿಯೋಮಿ ಕಂಪನಿಯ 'ಮಿ ಡ್ರಾಪ್‌' ಅಪ್ಲಿಕೇಶನ್ ಫೈಲ್‌ ಟ್ರಾನ್ಸ್‌ಫರ್‌ ಆಪ್ ಅತ್ಯುತ್ತಮವಾಗಿದ್ದು, ಯಾವುದೇ ನೆಟವರ್ಕ್‌ ಸಂಪರ್ಕವಿಲ್ಲದೇ ಫೈಲ್‌ ಟ್ರಾನ್ಸ್‌ಫರ್‌ ಮಾಡುವ ಅಪ್ಲಿಕೇಶನ್ ಆಗಿದೆ. ಈ ಆಪ್‌ ಮೂಲಕ ಬಳಕೆದಾರರು ಸುಲಭವಾಗಿ ಫೋಟೋ, ವಿಡಿಯೋ, ಆಡಿಯೋ ಸೇರಿದಂತೆ ಇತರೆ ಯಾವುದೇ ಮಾದರಿಯ ಫೈಲ್‌ಗಳನ್ನು ಕಳುಹಿಸಬಹುದಾಗಿದೆ ಮತ್ತು ಸ್ವೀಕರಿಸಬಹುದಾಗಿದೆ.

ಶಿಯೋಮಿಯ 'ಮಿ ಡ್ರಾಪ್‌' ಫೈಲ್‌ ಟ್ರಾನ್ಸ್‌ಫರ್‌ ಆಪ್ ಇನ್‌ಸ್ಟಾನ್‌ ಮಾಡಿದ್ದಿರಾ?

ಈ ಆಪ್‌ ಬ್ಲೂಟೂತ್‌ ಫೈಲ್‌ ಟ್ರಾನ್ಸ್‌ಫರ್‌ ವೇಗಕ್ಕಿಂತ 200 ಪಟ್ಟು ಹೆಚ್ಚಿನ ವೇಗದಲ್ಲಿ ಫೈಲ್‌ಗಳನ್ನು ಟ್ರಾನ್ಸ್‌ಫರ್‌ ಮಾಡಲಿದ್ದು, ಇದಕ್ಕೆ ಇಂಟರ್ನೆಟ್‌ ಮತ್ತು ಮೊಬೈಲ್‌ ಡಾಟಾದ ಅವಶ್ಯಕತೆ ಇರುವುದಿಲ್ಲ. ಎಲ್ಲಾ ಅಂಡ್ರಾಯ್ಡ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಬಹುದಾಗಿದೆ. ಹಾಗಾದರೇ ಶಿಯೋಮಿ ಮಿ ಡ್ರಾಪ್‌ ಆಪ್‌ನ ಇತರೆ ವಿಶೇಷ ಫೀಚರ್ಸ್‌ಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಎಲ್ಲ ಬಗೆಯ ಫೈಲ್‌ ಶೇರ್ ಆಯ್ಕೆ

ಎಲ್ಲ ಬಗೆಯ ಫೈಲ್‌ ಶೇರ್ ಆಯ್ಕೆ

ಶಿಯೋಮಿ ಮಿ ಡ್ರಾಪ್‌ ಆಪ್‌ನಲ್ಲಿ ಮ್ಯೂಸಿಕ್, ಫೋಟೋ, ವಿಡಿಯೊ, ಆಡಿಯೊ, ಪಿಡಿಎಫ್‌, ಸೇರಿದಂತೆ ಯಾವುದೇ ಮಾದರಿಯ ಫೈಲ್‌ಗಳಿದ್ದರು ಅವುಗಳನ್ನು ಇತರರಿಗೆ ಕಳುಹಿಸಬಹುದಾಗಿದ್ದು, ಅಥವಾ ಸ್ವೀಕರಿಸಬಹುದಾದ ಆಯ್ಕೆಗಳನ್ನು ಹೊಂದಿದೆ. ಸರಳವಾಗಿ ಬಳಸಬಹುದಾಗಿರುವ ಈ ಆಪ್‌ನಲ್ಲಿ ಫೈಲ್‌ಗಳು ವೇಗವಾಗಿ ಟ್ರಾನ್ಸ್‌ಫರ್‌ ಆಗಲಿವೆ.

ಇಂಟರ್ನೆಟ್‌ ಅವಶ್ಯಕತೆ ಇಲ್ಲ

ಇಂಟರ್ನೆಟ್‌ ಅವಶ್ಯಕತೆ ಇಲ್ಲ

'ಮಿ ಡ್ರಾಪ್‌' ಆಪ್‌ನಲ್ಲಿ ಫೈಲ್‌ಗಳನ್ನು ಟ್ರಾನ್ಸ್‌ಫರ್‌ ಮಾಡಲು ಅಥವಾ ಸ್ವೀಕರಿಸಲು ಯಾವುದೇ ನೆಟವರ್ಕ್‌ನ ಸೌಲಭ್ಯ ಅಗತ್ಯವಿರುವುದಿಲ್ಲ. ಜೊತೆಗೆ ಇಂಟರ್ನೆಟ್‌ ಆಗಲಿ ಅಥವಾ ಮೊಬೈಲ್‌ ಡಾಟಾದ ಅವಶ್ಯಕತೆಯು ಸಹ ಇರುವುದಿಲ್ಲ. ಇದು ಸಂಪೂರ್ಣ ನೆಟ್‌ವರ್ಕ್‌ ಫ್ರೀ ಆಗಿದೆ.

ಒನ್‌ ಟ್ಯಾಪ್‌

ಒನ್‌ ಟ್ಯಾಪ್‌

ಕಳುಹಿಸಲು ಸೆಲೆಕ್ಟ್ ಮಾಡಿರುವ ಫೈಲ್‌ಗಳನ್ನು ಒನ್‌ ಟ್ಯಾಪ್‌ ಮಾಡುವ ಮೂಲಕ ಸುಲಭವಾಗಿ ಟ್ರಾನ್ಸ್‌ಫರ್‌ ಮಾಡಬಹುದಾಗಿದ್ದು, ಒಂದು ವೇಳೆ ಅಡಚಣೆ ಉಂಟಾದರೇ ರಿಸ್ಯೂಮ್‌ ಬಟನ್‌ ಒತ್ತುವ ಮೂಲಕ ಮತ್ತೆ ಟ್ರಾನ್ಸ್‌ಫರ್‌ ಪ್ರತ್ರಿಯೇ ಮುಂದುವರಿಸಬಹುದು.

ಯಾವುದೇ ಲಿಮಿಟ್ ಇಲ್ಲ

ಯಾವುದೇ ಲಿಮಿಟ್ ಇಲ್ಲ

ಮಿ ಡ್ರಾಪ್‌ ಅಪ್ಲಿಕೇಶನ್‌ನಲ್ಲಿ ಯಾವುದೇ ಬಗೆಯ ಫೈಲ್‌ಗಳನ್ನು ಟ್ರಾನ್ಸ್‌ಫರ್‌ ಮಾಡಬಹುದಾಗಿದ್ದು, ಅದರೊಂದಿಗೆ ದೊಡ್ಡ ಗಾತ್ರದ (large files) ಫೈಲ್‌ಗಳನ್ನು ಸಹ ಸುಲಭವಾಗಿ ಶೇರ್‌ ಮಾಡಬಹುದಾಗಿದೆ. ಕಳುಹಿಸುವ ಮತ್ತು ಸ್ವೀಕರಿಸುವ ಫೈಲ್‌ಗಳ ಗಾತ್ರಕ್ಕೆ ಯಾವುದೇ ಲಿಮಿಟ್ ಇಲ್ಲ.

ಜಾಹಿರಾತು ಮುಕ್ತ

ಜಾಹಿರಾತು ಮುಕ್ತ

ಗೂಗಲ್‌ ಪ್ಲೇನಲ್ಲಿ ಸಾಕಷ್ಟು ಫೈಲ್‌ ಟ್ರಾನ್ಸ್‌ಫರ್‌ ಆಪ್‌ಗಳು ದೊರೆಯುತ್ತವೆ ಆದರೆ ಆ ಆಪ್‌ಗಳ ಬಳಕೆಯ ಸಂದರ್ಭದಲ್ಲಿ ಜಾಹಿರಾತು ಕಾಣಿಸಿಕೊಳ್ಳುತ್ತವೆ. ಶಿಯೋಮಿ ಮಿ ಡ್ರಾಪ್‌ ಆಪ್ ಜಾಹಿರಾತು ಮುಕ್ತವಾಗಿದ್ದು, ಬಳಕೆಯ ಸಮಯ ಯಾವುದೇ ಜಾಹಿರಾತು ಗೋಚರಿಸುವುದಿಲ್ಲ.

ಫೈಲ್ ವಿಂಗಡಣೆ

ಫೈಲ್ ವಿಂಗಡಣೆ

ಆಪ್‌ ಸರಳವಾದ ರಚನೆಯನ್ನು ಹೊಂದಿದ್ದು, ಬಳಕೆದಾರರ ಸ್ನೇಹಿಯಾಗಿದೆ. ಪ್ರತಿ ಫೈಲ್‌ಗಳಿಗೂ ಪ್ರತ್ಯಕ ವಿಭಾಗಗಳನ್ನು ನೀಡಲಾಗಿದ್ದು, ಮ್ಯೂಸಿಕ್, ವಿಡಿಯೊ, ಆಪ್ಸ್‌, ಫೋಟೋ ಈ ರೀತಿ ವಿಂಗಡಣೆಯನ್ನು ಹೊಂದಿವೆ.

ಆಪ್‌ ಲಭ್ಯತೆ

ಆಪ್‌ ಲಭ್ಯತೆ

ಸರಳವಾಗಿ ಫೈಲ್‌ಗಳನ್ನು ಟ್ರಾನ್ಸ್‌ಫರ್‌ ಮಾಡುವ ಆಯ್ಕೆಯನ್ನು ಹೊಂದಿರುವ ಮಿ ಡ್ರಾಪ್‌ ಆಪ್‌ ಎಲ್ಲ ಮಾದರಿಯ ಅಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಾಗಲಿದೆ. ಬಳಕೆದಾರರು ಈ ಆಪ್‌ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Share Music & Transfer Files - Mi Drop.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X