ಕನ್ನಡಿಗನಿಗೆ ಮಣಿದ ಶೇರ್‌ಚಾಟ್ ಆಪ್ ಇದೀಗ ಕನ್ನಡದಲ್ಲಿಯೂ ಲಭ್ಯ!!
ಆರು ಕೋಟಿ ಕನ್ನಡಿಗರ ಸಪಂತ್ತನ್ನು ಕಡೆಗಳಿಸಿದ್ದ ಎಲ್ಲಾ ಆನ್‌ಲೈನ್ ಕಂಪೆನಿಗಳು ಇದೀಗ ಕನ್ನಡಿಗರಿಗೆ ಸಲಾಮು ಹೊಡೆಯುತ್ತಿವೆ ಎಂದರೆ ತಪ್ಪಾಗಲಾರದು.!
ಆರು ಕೋಟಿ ಕನ್ನಡಿಗರ ಸಪಂತ್ತನ್ನು ಕಡೆಗಳಿಸಿದ್ದ ಎಲ್ಲಾ ಆನ್‌ಲೈನ್ ಕಂಪೆನಿಗಳು ಇದೀಗ ಕನ್ನಡಿಗರಿಗೆ ಸಲಾಮು ಹೊಡೆಯುತ್ತಿವೆ ಎಂದರೆ ತಪ್ಪಾಗಲಾರದು. ಏಕೆಂದರೆ, ಕನ್ನಡಿಗರನ್ನು ಸೆಳೆಯಲು ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಾಮಾಜಿಕ ಮಾಧ್ಯಮಗಳಲ್ಲೊಂದಾದ ಶೇರ್‌ಚಾಟ್ ಇದೀಗ ಕನ್ನಡದಲ್ಲಿಯೂ ಲಭ್ಯವಿದೆ.!!
ಹೌದು, ಪ್ರಾದೇಶಿಕ ಭಾಷೆಯ ಮೊದಲ ಸಾಮಾಜಿಕ ನೆಟ್‌ವರ್ಕಿಂಗ್ ಎನ್ನುವ ಹೆಸರು ಗಳಿಸಿರುವ ಶೇರ್‌ಚಾಟ್ ಇದೀಗ ಕನ್ನಡದಲ್ಲಿಯೂ ಕಾರ್ಯನಿರ್ವಹಣೆ ನೀಡಲಿದ್ದು, ಕನ್ನಡ ಸೇರಿ ಭಾರತದ 10 ಭಾಷೆಗಳಲ್ಲಿ ಶೇರ್‌ಚಾಟ್ ಭಾರತದಲ್ಲಿ ಕಾರ್ಯನಿರ್ವಹಣೆ ನೀಡಲಿದೆ ಎಂದು ಶೇರ್‌ಚಾಟ್‌ನ ಸಿಇಓ ಫರೀದ್ ಅಹ್ಸಾನ್ ತಿಳಿಸಿದ್ದಾರೆ.!!

ಅಷ್ಟೇನೂ ಇಂಗ್ಲಿಷ್ ತಿಳಿದಿಲ್ಲದ ವ್ಯಕ್ತಿ ಕೂಡ ಶೇರ್‌ಚಾಟ್ ಅನ್ನು ಸುಲಭವಾಗಿ ಬಳಸಬಹುದಾಗಿದೆ. ಶೇರ್‌ಚಾಟ್ ಅನ್ನು ಮೊದಲ ಬಾರಿ ಇಂಟರ್‌ನೆಟ್ ಬಳಸುವವರನ್ನು ಗಮನದಲ್ಲಿರಿಸಿ ತಯಾರಿಸಿರುವುದರಿಂದ ಅತ್ಯಂತ ಸರಳ ಮತ್ತು ಅರ್ಥಗರ್ಭಿತವಾದ ವಿನ್ಯಾಸ ಹೊಂದಿದೆ ಎಂದು ಶೇರ್‌ಚಾಟ್ ಹೇಳಿದೆ.!!

ಭಾರತದಲ್ಲಿನ 10 ಜನ ಇಂಟರ್‌ನೆಟ್ ಬಳಕೆದಾರರಲ್ಲಿ 9 ಜನ ಬಳಕೆದಾರ ತಮ್ಮ ಮಾತೃ ಭಾಷೆಯಲ್ಲಿಯೇ ಇಂಟರ್‌ನೆಟ್ ಬಳಸುತ್ತಾರೆಂದು ಕೆಪಿಎಂಜಿ ಮತ್ತು ಗೂಗಲ್ ವರದಿ ತಿಳಿಸಿವೆ. ಆದರೆ, ವಿಶ್ವದರ್ಜೆಯ ಉತ್ಪನ್ನಗಳು ಸಂಪೂರ್ಣ ಭಾರತೀಯ ಅನುಭವವನ್ನು ಡಿಜಿಟಲ್‌ನಲ್ಲಿ ನೀಡಲು ಆಗಿಲ್ಲ. ಹಾಗಾಗಿ, ಈ ಅಂತರವನ್ನು ಶೇರ್‌ಚಾಟ್ ಕಡಿಮೆ ಮಾಡಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಓದಿರಿ: ಮೊಬೈಲ್ ಖರೀದಿಸಲು ಸ್ವಲ್ಪ ಕಾಯಿರಿ!..ಬಿಡುಗಡೆಗೆ ಸಿದ್ದವಾಗಿದೆ 'ರೆಡ್‌ಮಿ ನೋಟ್ 5'!!


Click it and Unblock the Notifications