ಹೆದ್ದಾರಿ ಪ್ರಯಾಣಿಕರಿಗಾಗಿ ಆಪ್!..ಪ್ರಯಾಣಿಸುವಾಗ ಆಪ್ ಮೂಲಕ ವಿಡಿಯೋ ಮಾಡಬಹುದು!!
ಹೆದ್ದಾರಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಕೇಂದ್ರ ಸರ್ಕಾರ 24 ಗಂಟೆಯ ಉಚಿತ ತುರ್ತು ಕರೆ ಸೌಲಭ್ಯವಿರುವ ಮೊಬೈಲ್ ಆಪ್ ಸೌಲಭ್ಯವನ್ನು ಒದಗಿಸಿ ಸಿಹಿಸುದ್ದಿ ನೀಡಿದೆ.
ಹೆದ್ದಾರಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಕೇಂದ್ರ ಸರ್ಕಾರ 24 ಗಂಟೆಯ ಉಚಿತ ತುರ್ತು ಕರೆ ಸೌಲಭ್ಯವಿರುವ ಮೊಬೈಲ್ ಆಪ್ ಸೌಲಭ್ಯವನ್ನು ಒದಗಿಸಿ ಸಿಹಿಸುದ್ದಿ ನೀಡಿದೆ. ರಸ್ತೆಗಳು, ಟೋಲ್‌ಗಳು, ಆಂಬುಲೆನ್ಸ್ ಮತ್ತು ಅಪಘಾತಗಳ ಬಗ್ಗೆ ಪ್ರಯಾಣಿಕರು ಆಪ್ ಮೂಲಕವೇ ಮಾಹಿತಿ ಪಡೆಯಬಹುದಾದ ಆಯ್ಕೆಯನ್ನು ಒದಗಿಸಿದೆ.!!
ಹೆದ್ದಾರಿಯ ನೂತನ ಆಪ್ ಅನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಭಿವೃದ್ಧಿಪಡಿಸಿದ್ದು, ಹೆದ್ದಾರಿ ಬಳಕೆದಾರರ ಈ ಆಪ್‌ಗೆ 'ಸುಖದ್‌ಯಾತ್ರಾ' ಎಂದು ಹೆಸರಿಡಲಾಗಿದೆ. ವಿಳಂಬ ಪ್ರಯಾಣ, ರಸ್ತೆಗುಂಡಿಗಳು, ಟೋಲ್ ವಿಳಂಬ ಹೀಗೆ ಯಾವುದೇ ತೊಂದರೆ ಬಗ್ಗೆ ಕ್ಷಣಮಾತ್ರದಲ್ಲಿ ಆಪ್ ಮೂಲಕ ಮಾಹಿತಿ ಅಥವಾ ದೂರು ಸಲ್ಲಿಸಬಹುದು ಎಂದು ಪ್ರಾಧಿಕಾರ ತಿಳಿಸಿದೆ.!!

ಹೆದ್ದಾರಿಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಈ ಆಪ್ ಬಳಕೆ ಮಾಡಿ ಗೂಗಲ್ ಮ್ಯಾಪಿನಂತೆ ರಿಯಲ್ ಟೈಮ್ ಮಾರ್ಗಗಳನ್ನು ಸಹ ನೋಡಬಹುದು ಮತ್ತು ಯಾವ ಮಾರ್ಗ ಹೇಗಿದೆ ಎಂಬ ಮಾಹಿತಿಯನ್ನು ಸಹ ಪಡೆಯಬಹುದಾಗಿದೆ.! ಇನ್ನು ಆಪ್‌ನಲ್ಲಿ ಫಾಸ್ಟ್‌ಟ್ಯಾಗ್ ಸಂಪರ್ಕಿಸುವ ವ್ಯವಸ್ಥೆಯನ್ನು ಕಲ್ಪಿಸಿರುವುದು ಸಹ ವಿಶೇಷವಾಗಿದೆ.!!

ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಆಪ್ ಮೂಲಕವೇ ವಿಡಿಯೋ ಮಾಡಬಹುದಾದ ಆಯ್ಕೆಯನ್ನು ಆಪ್‌ನಲ್ಲಿ ನೀಡಿರುವುದು ಮತ್ತೊಂದು ವಿಶೇಷ ಎನ್ನಬಹುದು. ಹೆದ್ದಾರಿಗಳಲ್ಲಿ ಪ್ರಯಾಣ ಮಾಡುವಾಗ ದೃಶ್ಯ ದಾಖಲೆಗಳನ್ನ ಒದಗಿಸಲು ಈ ಸೇವೆಯನ್ನು ತರಲಾಗಿದೆ. ಆದರೆ, ಈ ಸೇವೆ ಪ್ರಯಾಣಿಕರ ಮನರಂಜನೆಗೆ ಬಳಕೆಯಾಗುತ್ತಿದೆ ಎನ್ನಬಹುದು.!!

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ಈ ಆಪ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಮಾದರಿಗಳಲ್ಲಿಯೂ ಲಭ್ಯವಿದ್ದು, SukhadYatra ಎಂದು ಸರ್ಚ್ ಮಾಡಿ ಆಪ್ ಅನ್ನು ಉಚಿತವಾಗಿ ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಹೆದ್ದಾರಿ ಪ್ರಯಾಣದಲ್ಲಿ ಸೇವೆ ಪಡೆಯಬಹುದು.!!

ಓದಿರಿ: ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುವ ಹೆಣ್ಣುಮಕ್ಕಳ ಮೇಲೆ ಗಮನ ಇಡುವುದು ಅನಿವಾರ್ಯ!!


Click it and Unblock the Notifications








