ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ಕಳೆಯುವ ಹೆಣ್ಣು ಮಕ್ಕಳ ಮೇಲೆ ಗಮನ ಇಡುವುದು ಅನಿವಾರ್ಯವಾಗಿದೆ. ಸೋಶಿಯಲ್ ಮೀಡಿಯಾದ ಋಣಾತ್ಮಕ ಪರಿಣಾಮಗಳು ಹದಿಹರೆಯದ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಮೇಲೆ ಹೆಚ್ಚಾಗಿರುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ತನ್ನ ವರದಿಯಲ್ಲಿ ತಿಳಿಸಿದೆ.!!
ವಾಷಿಂಗ್ಟನ್ ನಗರದಲ್ಲಿರುವ ಎಸ್ಸೆಕ್ಸ್ ಮತ್ತು ಯುಸಿಎಲ್ ಫೌಂಡ್ ಯೂನಿವರ್ಸಿಟಿ ನಡೆಸಿದ ಸಂಶೋಧನೆಯಿಂದ ಈ ರೀತಿಯ ಒಂದು ವರದಿ ಹೊರಬಿದ್ದಿದ್ದು, ಗಂಡು ಮಕ್ಕಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾರೆ. ಹದಿಹರೆಯದ ಹಾಗೂ ಪ್ರೌಡಾವಸ್ಥೆಗೆ ಬಹುವ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದೆ.!!
ಸಾಮಾಜಿಕ ಮಾಧ್ಯಮಳಲ್ಲಿ 13 ವರ್ಷದ ಹೆಣ್ಣು ಮಕ್ಕಳು ಪ್ರತಿದಿನ 1 ಗಂಟೆಗೂ ಹೆಚ್ಚಿನ ಸಮಯವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಯಿಸುತ್ತಾತಿದ್ದಾರೆ. 15 ವರ್ಷದ ಹೆಣ್ಣು ಹಾಗೂ ಗಂಡು ಮಕ್ಕಳೂ ಸಹ ಸಾಮಾಜಿಕ ಮಾಧ್ಯಮಳಲ್ಲಿ ಹೆಚ್ಚಾಗಿ ಸಮಯ ಕಳೆಯುತ್ತಿದ್ದರೂ, ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಹೆಚ್ಚಿನ ಸಮಯ ವ್ಯಯಿಸುತ್ತಾರೆ ಎಂದು ವರದಿಯಲ್ಲಿ ತಿಳಿಸಿದೆ.!!
ಹೆಚ್ಚಿನ ಸಮಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕಳೆಯುವುದರಿಂದ 10 -15 ವರ್ಷದ ಹೆಣ್ಣು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ. ಶೇ.59 ರಷ್ಟು ಹೆಣ್ಣು ಮಕ್ಕಳುಸೋಷಿಯಲ್ ಮೀಡಿಯಾ ಬಳಕೆಯಲ್ಲಿ ತೊಡಗಿದ್ದರೆ, ಶೇ.46 ಗಂಡು ಮಕ್ಕಳು ಮಾತ್ರ ಸೋಷಿಯಲ್ ಮೀಡಿಯಾ ಬಳಕೆಯಲ್ಲಿ ತೊಡಗಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.!!
ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT
ಓದಿರಿ: ಫೇಸ್‌ಬುಕ್ ಅನ್ನು ಡಿಲೀಟ್ ಮಾಡಿ ಎನ್ನುತ್ತಿದ್ದಾರೆ ವಾಟ್ಸ್ಆಪ್ ಸಂಸ್ಥಾಪಕ!!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.
English summary
Social media use may have different effects on wellbeing in adolescent boys and girls, according to a recent research.to know more visit tlo kannada.gizbot.com
Story first published: Wednesday, March 21, 2018, 12:00 [IST]