ದಕ್ಷಿಣ ಭಾರತದ ಹೆಸರಾಂತ ಟಿವಿ ನೆಟ್‌ವರ್ಕ್ ಸಂಸ್ಥೆ ಸನ್ ಟಿವಿ (Sun TV) ಇದೇ ಮೊದಲ ಭಾರಿಗೆ ಡಿಜಿಟಲ್ ಜಮಾನಕ್ಕೆ ಕಾಲಿಟ್ಟಿದೆ.!! ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ಸೇವೆಗಳಂತೆ ಸನ್ ನೆಟ್‌ವರ್ಕ್ ಕೂಡ ಇದೀಗ ತನ್ನ ಸನ್ ನೆಕ್ಸ್ಟ್ (Sun next) ಆಪ್ ಬಿಡುಗಡೆ ಮಾಡಿದೆ.!!
ದಕ್ಷಿಣ ಭಾರತದಲ್ಲಿ ಮೊದಲಿನಿಂದಲೂ ನೆಲೆಯೂರಿರುವ ಸನ್ ಟಿವಿ ನೆಟ್‌ವರ್ಕ್. ಬಹುತೇಕ ಸಿನಿಮಾ ಮತ್ತು ಮನರಂಜನೆ ಕಾರ್ಯಕ್ರಮಗಳ ಒಡೆತನ ಹೊಂದಿದೆ. ಹಾಗಾಗಿ, ತನ್ನ ಎಲ್ಲಾ ಕಾರ್ಯಕ್ರಮಗಳನ್ನು ಒಂದೇ ಆಪ್ ಮೂಲಕ ಜನರಿಗೆ ತಲುಪಿಸಲು 'ಸನ್ ನೆಕ್ಸ್ಟ್' ಡಿಜಿಟಲ್ ಆಪ್ ಬಿಡುಗಡೆ ಮಾಡಿದೆ.!!

ಇನ್ನು 'ಸನ್ ನೆಕ್ಸ್ಟ್' ಆಪ್ ಡೌನ್‌ಲೋಡ್ ಮಾಡಿ ಕಾರ್ಯಕ್ರಮ ವೀಕ್ಷಣೆಗೆ ಮೊದಲನೇ ತಿಂಗಳು ಸಂಪೂರ್ಣ ಉಚಿತವಾಗಿದೆ. ನಂತರ ಪ್ರತಿ ತಿಂಗಳು ಕೇವಲ 50 ರೂಪಾಯಿಗಳನ್ನು ಪಾವತಿಸಬೇಕಿದೆ. ಕೊಡುವ ಹಣಕ್ಕೆ ಭಾರಿ ಕೊಡುಗೆಯನ್ನು ಸನ್ ಟಿವಿ ನೀಡಿದೆ.!!

4000 ಕ್ಕಿಂತ ಹೆಚ್ಚು ಸಿನಿಮಾ ಮತ್ತು ಮನರಂಜನಾ ಕಾರ್ಯಕ್ರಮುಗಳು ಮತ್ತು ಟಿವಿ ಸೀರಿಯಲ್‌ಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು 'ಸನ್ ನೆಕ್ಸ್ಟ್' ಡಿಜಿಟಲ್ ಆಪ್‌ನಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಹಾಗಾಗಿ, 'ಸನ್ ನೆನೆಕ್ಸ್ಟ್' ಆಪ್ ಒಂದು ಉತ್ತಮ ಆಪ್ ಎನ್ನಬಹುದು.!!
ಓದಿರಿ: 'ಜಿಯೋ ಫೈ' ಖರೀದಿಸಿದರೆ ಏನೆಲ್ಲಾ ಲಾಭ? ಉಚಿತವಾಗಿ ಪಡೆಯುವುದು ಹೇಗೆ? ತಿಳಿಯಿರಿ.!!!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.