Home
Apps

Swiggy ಯಿಂದ ಅಗ್ಗದ ಸದಸ್ಯತ್ವ ಪ್ಲ್ಯಾನ್‌: ಫ್ರೀ ಡೆಲಿವರಿಯೊಂದಿಗೆ ಹಲವು ಪ್ರಯೋಜನ!

ಸ್ವಿಗ್ಗಿ (Swiggy) ಆಪ್‌ ಫುಡ್‌ ಆರ್ಡರ್‌ ಆಪ್‌ಗಳಲ್ಲಿ(Food Order App) ಅತ್ಯಂತ ಜನಪ್ರಿಯವಾಗಿರುವ ಆಪ್‌ ಆಗಿದೆ. ಈಗಾಗಲೇ ಇದು ಸಾಕಷ್ಟು ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಿದ್ದು, ಇದರೊಂದಿಗೆ ಗ್ರಾಹಕರಿಗೆ ಅಗತ್ಯವಾದ ಹೊಸ ಪ್ರಯೋಜನಗಳನ್ನೂ ಸಹ ನೀಡುತ್ತಿದೆ. ಆದರೂ ಸಹ ಈಗ ಮತ್ತೊಂದು ಸೌಲಭ್ಯ ಸೇರ್ಪಡೆಗೊಂಡಿದೆ.

ಹೌದು, ಸ್ವಿಗ್ಗಿ ಅಗ್ಗದ ಸದಸ್ಯತ್ವ ಯೋಜನೆಯನ್ನು ಘೋಷಣೆ ಮಾಡಿದೆ. ಈ ಮೂಲಕ ಗ್ರಾಹಕರು ಈಗಿರುವ ವಿಶೇಷ ಸೌಲಭ್ಯಗಳೊಂದಿಗೆ ಮಗದೊಂದು ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಈ ವಿಶೇಷ ಸೇವೆ ನಿಮಗೆ 100ರೂ ಅಡಿಯಲ್ಲಿ ಸಿಗಲಿದೆ. ಹಾಗಿದ್ರೆ, ಏನಿದು ಹೊಸ ಸೇವೆ?, ಇದರಿಂದ ಏನೆಲ್ಲಾ ಲಾಭ ಎಂಬ ಮಾಹಿತಿ ಇಲ್ಲಿದೆ ನೋಡಿ.

Swiggy ಯಿಂದ ಅಗ್ಗದ ಸದಸ್ಯತ್ವ ಪ್ಲ್ಯಾನ್‌: ಫ್ರೀ ಡೆಲಿವರಿಯೊಂದಿಗೆ ಹಲವು ಪ್ರಯೋಜನ

ಸ್ವಿಗ್ಗಿ ಒನ್‌ಲೈಟ್: ಸ್ವಿಗ್ಗಿ ಇದೀಗ ಸ್ವಿಗ್ಗಿ ಒನ್‌ಲೈಟ್ (Swiggy One Lite) ಎಂಬ ವಿಶೇಷ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದೆ. ಈ ಹೊಸ ಕೊಡುಗೆಯು ಆಹಾರ, ದಿನಸಿ ಮತ್ತು ಪಿಕ್-ಅಪ್ ಮತ್ತು ಡ್ರಾಪ್ ಸೇವೆಗಳಾದ್ಯಂತ ಪ್ರಯೋಜನಗಳನ್ನು ವಿಸ್ತರಿಸುತ್ತದೆ. ಇದರೊಂದಿಗೆ ಬಳಕೆದಾರರ ವೈವಿಧ್ಯಮಯ ಅಗತ್ಯಗಳನ್ನು ಇದು ಪೂರೈಸಲಿದ್ದು, ಮೂರು ತಿಂಗಳ ಚಂದಾದಾರಿಕೆಗೆ ಕೇವಲ 99 ರೂ.ಗಳನ್ನು ಪಾವತಿ ಮಾಡಬೇಕಿದೆ.

ಸ್ವಿಗ್ಗಿ ಒನ್‌ಲೈಟ್‌ನ ಪ್ರಯೋಜನಗಳು: ಈ ಸದಸ್ಯತ್ವವನ್ನು ಪಡೆದುಕೊಳ್ಳುವ ಗ್ರಾಹಕರು 149ರೂ.ಗಿಂತ ಹೆಚ್ಚಿನ ಆರ್ಡರ್‌ಗಳಿಗೆ 10 ಉಚಿತ ಆಹಾರ ವಿತರಣೆಯನ್ನು ಪಡೆಯಬಹುದಾಗಿದೆ. ಹಾಗೆಯೇ 199 ರೂ.ಗಿಂತ ಹೆಚ್ಚಿನ ಆರ್ಡರ್‌ಗಳಿಗೆ 10 ಉಚಿತ ಇನ್‌ಸ್ಟಾಮಾರ್ಟ್ ಡೆಲಿವರಿಗಳು ಲಭ್ಯ ಇರಲಿದ್ದು, ನಿಯಮಿತ ಕೊಡುಗೆಗಳ ಮೇಲೆ 20,000ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳಲ್ಲಿ 30% ವರೆಗಿನ ಡಿಸ್ಕೌಂಟ್‌ ಅನ್ನು ಸಹ ನೀಡಲಾಗುತ್ತದೆ.ಇದರೊಂದಿಗೆ ಇದಲ್ಲದೆ, ಸ್ವಿಗ್ಗಿ ಒನ್‌ಲೈಟ್ ಸದಸ್ಯರು 60ರೂ.ಗಿಂತ ಹೆಚ್ಚಿನ ಆರ್ಡರ್‌ಗಳಿಗಾಗಿ ಸ್ವಿಗ್ಗಿ ಜಿನೀ (Swiggy Genie) ಡೆಲಿವರಿಗಳ ಮೇಲೆ 10% ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಈ ಸಂಬಂಧ ಸ್ವಿಗ್ಗಿಯ ರೆವೆನ್ಯೂ ಹಾಗೂ ಗ್ರೌಥ್‌ ವಿಭಾಗದ ವಾಯ್ಸ್‌ ಪ್ರೆಸಿಡೆಂಟ್‌ ಆಗಿರುವ ಅನುರಾಗ್ ಪಂಗನಾಮಮೂಲ ಅವರು ಮಾಹಿತಿ ನೀಡಿ, ಸ್ವಿಗ್ಗಿಯಲ್ಲಿ ನಮ್ಮ ಬಳಕೆದಾರರಿಗೆ ಅನುಕೂಲತೆಯನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ಸ್ವಿಗ್ಗಿ ಒನ್‌ (Swiggy One) ಪ್ರೋಗ್ರಾಂ ಬಹು ಸೇವೆಗಳನ್ನು ಸಂಯೋಜಿಸುತ್ತದೆ. ಈಗ, ಸ್ವಿಗ್ಗಿ ಒನ್‌ಲೈಟ್‌ ನೊಂದಿಗೆ ನಾವು ವ್ಯಾಪಕವಾದ ಪ್ರೇಕ್ಷಕರನ್ನು ಪೂರೈಸಲು ಹೆಚ್ಚು ಕೈಗೆಟುಕುವ ಪರ್ಯಾಯವನ್ನು ಪರಿಚಯಿಸುತ್ತಿದ್ದೇವೆ ಎಂದಿದ್ದಾರೆ.

ಇನ್ನು ಮೂರು ತಿಂಗಳಿಗೆ ಕೇವಲ 99 ರೂ.ಗಳ ಲೈಟ್‌ ಚಂದಾದಾರಿಕೆ ಅತ್ಯುತ್ತಮ ಮೌಲ್ಯವನ್ನು ಒದಗಿಸುತ್ತದೆ. ಸರಾಸರಿಯಾಗಿ ಆಹಾರ ವಿತರಣೆ, ಇನ್‌ಸ್ಟಾಮಾರ್ಟ್‌ ಮತ್ತು ಜಿನೀ ಸೇವೆಗಳಾದ್ಯಂತ ಸದಸ್ಯತ್ವದ ಲಾಭವನ್ನು ಪಡೆಯುವ ಮೂಲಕ ಬಳಕೆದಾರರು ತಮ್ಮ ಹೂಡಿಕೆಯ ಮೇಲೆ ಕನಿಷ್ಠ ಆರು ಪಟ್ಟು ಲಾಭವನ್ನು ಪಡೆಯುವ ನಿರೀಕ್ಷೆಯಿದೆ ಎನ್ನಲಾಗಿದೆ.

ಸ್ವಿಗ್ಗಿಯ ಈ ಕ್ರಮವು ಸ್ವಿಗ್ಗಿ ಒನ್‌ಲೈಟ್‌ ಅನ್ನು ನೇರವಾಗಿ ಗ್ರಾಹಕರಿಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ತರಲು ಟೆಲಿಕಾಂ ಮತ್ತು ಬ್ಯಾಂಕಿಂಗ್ ವಲಯಗಳಲ್ಲಿನ ಪ್ರಮುಖ ಬ್ರ್ಯಾಂಡ್ ಪಾಲುದಾರರೊಂದಿಗೆ ಯಶಸ್ವಿ ಸಹಯೋಗವನ್ನು ಅನುಸರಿಸುತ್ತದೆ. ಈ ಬ್ರ್ಯಾಂಡ್‌ಗಳು ತಮ್ಮ ಸ್ವಂತ ಉತ್ಪನ್ನಗಳೊಂದಿಗೆ ಸ್ವಿಗ್ಗಿ ಒನ್ ಲೈಟ್ ಸದಸ್ಯತ್ವಗಳನ್ನು ಒಟ್ಟುಗೂಡಿಸಲಿದ್ದು, ಗ್ರಾಹಕರಿಗೆ ಅಮೂಲ್ಯವಾದ ಸದಸ್ಯತ್ವ ಕಾರ್ಯಕ್ರಮವನ್ನು ನೀಡಲಿವೆ.

Swiggy ಯಿಂದ ಅಗ್ಗದ ಸದಸ್ಯತ್ವ ಪ್ಲ್ಯಾನ್‌: ಫ್ರೀ ಡೆಲಿವರಿಯೊಂದಿಗೆ ಹಲವು ಪ್ರಯೋಜನ

ಇನ್ನು ಸ್ವಿಗ್ಗಿ ಒನ್‌ಲೈಟ್‌ ಗ್ರಾಹಕರು ಅನುಕೂಲತೆಯನ್ನು ಅನುಭವಿಸುವ ರೀತಿಯಲ್ಲಿ ಕ್ರಾಂತಿಯನ್ನುಂಟುಮಾಡಲು ರೆಡಿಯಾಗಿದೆ. ಇದು ವಿಶಾಲವಾದ ಪ್ರೇಕ್ಷಕರಿಗೆ ಹೆಚ್ಚು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡಲಿದ್ದು, ಆಕರ್ಷಕ ಪ್ರಯೋಜನಗಳು ಮತ್ತು ಸ್ಪರ್ಧಾತ್ಮಕ ಬೆಲೆಗಳೊಂದಿಗೆ ಹಲವಾರು ಸೌಲಭ್ಯಗಳು ಸಿಗಲಿವೆ. ಅಷ್ಟೇ ಅಲ್ಲದೆ ಈ ಸದಸ್ಯತ್ವ ಕಾರ್ಯಕ್ರಮವು ಭಾರತದಲ್ಲಿ ಬೇಡಿಕೆಯ ವಿತರಣಾ ಸೇವೆಗಳ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಆಗಲಿದೆ.

ಸ್ವಿಗ್ಗಿ ಒನ್‌ಲೈಟ್‌ಗೂ ಸ್ವಿಗ್ಗಿ ಒನ್‌ಗೂ ವ್ಯತ್ಯಾಸವೇನು?: ಸ್ವಿಗ್ಗಿ ಒನ್ ಎಲ್ಲಾ ರೆಸ್ಟೋರೆಂಟ್‌ಗಳಿಂದ 10 ಕಿಲೋಮೀಟರ್‌ಗಳವರೆಗಿನ ಆಹಾರ ಆರ್ಡರ್‌ಗಳ ಮೇಲೆ ಅನಿಯಮಿತ ಉಚಿತ ವಿತರಣೆಯನ್ನು ನೀಡುತ್ತದೆ. ಈ ಆರ್ಡರ್‌ಗಳ ಬೆಲೆ 149ರೂ.ಗಳಿಗಿಂತ ಅಧಿಕವಾಗಿರಬೇಕು. ಇದರ ಚಂದಾದಾರಿಕೆ ಬೆಲೆ 3 ತಿಂಗಳಿಗೆ 1,199ರೂ.ಗಳು. ಆದರೆ, ಸ್ವಿಗ್ಗಿ ಒನ್‌ಲೈಟ್ ಮೂಲಕ ಚಂದಾದಾರರು 10 ಆರ್ಡರ್‌ಗಳವರೆಗೆ ಉಚಿತ ವಿತರಣೆಯನ್ನು ಪಡೆಯಬಹುದು. ಅದರಲ್ಲೂ ಹೆಚ್ಚಿನ ದಿನಸಿ ಆರ್ಡರ್‌ಗಳಿಗಾಗಿ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಅನಿಯಮಿತ ಉಚಿತ ವಿತರಣೆಗಳಿವೆ. ಈ ಆರ್ಡರ್‌ ಮೌಲ್ಯ 99ರೂ.ಗಳಿಗಿಂತ ಹೆಚ್ಚಿರಬೇಕು.

Best Mobiles in India

English summary
Swiggy has announced a cheaper membership plan, Swiggy One lite. Through this, customers can avail the facility of a son along with the existing special facilities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+