Subscribe to Gizbot

ಪ್ರಪಂಚದ ಟಾಪ್ 5 ವಿಡಿಯೋ ಗೇಮ್‌ ಯಾವುವು? ಏನು ವಿಶೇಷ?

Written By:

ಹೆಚ್ಚಿನ ಯುವಕ ಯುವತಿಯರಿಗೆ ಚಾಟಿಂಗ್ ಮಾಡುವುದಕ್ಕಿಂತ ಹೆಚ್ಚಾಗಿ ಗೇಮ್ ಆಡುವುದು ಎಂದರೆ ಇಷ್ಟವಂತೆ.! ಸಮಯ ಸಿಕ್ಕಾಗಲೆಲ್ಲಾ ಈ ಬ್ಯುಸಿ ಲೈಫ್‌ನಲ್ಲಿ ಎಂಜಾಯ್ ಮಾಡಬಹುದಾದ ಈ ಗೇಮ್‌ಗಳು ಕೆಲವೊಮ್ಮೆ ಹುಚ್ಚು ಹಿಡಿಸುವುದು ಸಹ ಸತ್ಯ! ಉದಾಹರಣೆಗೆ ಟೆಂಪಲ್ ರನ್, ಕ್ಯಾಂಡಿ ಕ್ರಶ್ ಗೇಮ್‌ಗಳೇ ಸಾಕ್ಷಿ..

ಈ ಗೇಮ್‌ಗಳು ನಮ್ಮ ಮನರಂಜನೆಗಾಗಿ ಬಹಳಷ್ಟು ಪ್ರಯೋಜನಕಾರಿಯಾಗಿರುತ್ತವೆ. ಇಂತಹ ಯಾವುದೇ ಗೇಮ್‌ಗಳು ಕೆಲವೊಮ್ಮೆ ಟ್ರೆಂಡ್ ಸೃಷ್ಟಿಸಿದರೂ ನಂತರ ಬೇಜಾರಾಗುತ್ತವೆ. ಹಾಗಾಗಿ, ನಾವು ನೂತನ ಗೇಮ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಿದೆ.

ಆಂಡ್ರಾಯ್ಡ್ ನ್ಯೂಗಾ ಸಾಫ್ಟವೇರ್ ಅಪ್‌ಡೇಟ್ ನಿಮ್ಮ ಸ್ಮಾರ್ಟ್‌ಫೋನ್‌ಗಿದೆಯೇ? ಚೆಕ್ ಮಾಡಿ!

ಇನ್ನು ಇನ್‌ಸ್ಟಾಲ್ ಮಾಡಿಕೊಳ್ಳಲು ಉತ್ತಮ ಗೇಮ್‌ಗಳು ಯಾವುವು ಎಂಬುದೇ ಎಲ್ಲಾ ಸ್ಮಾರ್ಟ್‌ಪೋನ್‌ ಬಳಕೆದಾರರ ಬಹುದೊಡ್ಡ ಯೋಚನೆಯಾಗಿರುತ್ತದೆ. ಹಾಗಾಗಿ .ಪ್ರಸ್ತುತ ಇರುವ ಟಾಪ್ 5 ಅತ್ಯುತ್ತಮ ಗೇಮ್‌ಗಳು ಯಾವುವು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ ಮತ್ತು ಡೌನ್‌ಲೋಡ್‌ ಮಾಡಿಕೊಳ್ಳಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#5 ದ ಲಾಸ್ಟ್ ಗಾರ್ಡಿಯನ್ (The last guardian)

#5 ದ ಲಾಸ್ಟ್ ಗಾರ್ಡಿಯನ್ (The last guardian)

ದ ಲಾಸ್ಟ್ ಗಾರ್ಡಿಯನ್ ವಿಡಿಯೋ ಗೇಮ್ ಅತ್ಯಾಧುನಿಕ್ ಗ್ರಾಪಿಕ್ ತಂತ್ರಜ್ಷಾನವನ್ನು ಹೊಂದಿದ್ದು, 3D ಅನುಭವವನ್ನು ನೀಡುವ ಗೇಮ್. ಗ್ರಾಪಿಕ್ ಅಷ್ಟೇ ಅಲ್ಲದೇ ಕುತೋಹಲಭರಿತ ಆಟ ಮತ್ತು ಅನುಭವವನ್ನು ನೀಡುವ ದ ಲಾಸ್ಟ್ ಗಾರ್ಡಿಯನ್ ಟಾಪ್‌ 5ನೇ ಗೇಮ್ ಎನ್ನಬಹುದು.

#4 ದಿ ವಿಟ್‌ನೆಸ್ ( The Witness )

#4 ದಿ ವಿಟ್‌ನೆಸ್ ( The Witness )

ಲಾಜಿಕ್ ಗೇಮ್‌ ಗಳನ್ನು ಇಷ್ಟಪಡುವವರಿಗೆ ದಿ ವಿಟ್‌ನೆಸ್ ಗೇಮ್ ಅತ್ಯುತ್ತಮ ಗೇಮ್ ಎನ್ನಬಹುದು. ನೀಲಿ ಪ್ರಪಂಚದಲ್ಲಿ ಸೂಕ್ಮ ವಿಚಾರಗಳು ಬಹುದೊಡ್ಡ ಪ್ರಶ್ನೆಗಳಾಗಿ ಕಾಣಿಸುವಂತಹ ಸುಂದರ ಮನೋಹರ ಗೇಮ್ ಇದು. ಹಾಗಾಗಿ ಇದು ನಾಲ್ಕನೇ ಸ್ಥಾನವನ್ನು ಪಡೆದಿದೆ.

#3 ಬ್ಯಾಟಲ್‌ಫಿಲ್ಡ್ ಒನ್ ( Battefield 1)

#3 ಬ್ಯಾಟಲ್‌ಫಿಲ್ಡ್ ಒನ್ ( Battefield 1)

ಫೈಟಿಂಗ್ ಗೇಮ್‌ಗಳನ್ನು ಹೆಚ್ಚು ಇಷ್ಟ ಪಡುವವರಿಗೆ ಬ್ಯಾಟಲ್‌ಫಿಲ್ಡ್ ಒನ್ ಅತ್ಯುತ್ತಮ ಗೇಮ್ ಎನ್ನಬಹುದು. ಪ್ರತಿ ಹಂತದಲ್ಲಿಯೂ ಅತ್ಯುತ್ತಮ ಅನುಭವವನ್ನು ನಿಡುವ ಮತ್ತು ಉತ್ತಮ ಗ್ರಾಫಿಕ್ ಹೊಂದಿರುವ ಬ್ಯಾಟಲ್‌ಫಿಲ್ಡ್ ಒನ್ ಸಾಹಸ ಪ್ರಿಯರ ನೆಚ್ಚಿ ಗೇಮ್ ಆಗಬಹುದು.

#2 ಫೈರ್ ವಾಚ್ (Fire watch)

#2 ಫೈರ್ ವಾಚ್ (Fire watch)

ಒಂದು ಅರಣ್ಯವನ್ನು ಬೆಂಕಿ ಬೀಳದಂತೆ ನೊಡಿಕೊಳ್ಳುವ ಸಾಮಾಜಿಕ ಕಳಕಳಿಯನ್ನು ಹೊತ್ತಿರುವ ಗೇಮ್ ಫೈರ್ ವಾಚ್, ಅತದಯಾಧುನಿ ಗ್ರಾಫಿಕ್ ಮತ್ತು ಕುತೋಹಲಭರಿತವಾದ ಫೈರ್ ವಾಚ್ ಅತ್ಯುತ್ತಮ ಗೇಮ್‌ಗಳಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ.

#1 ಅನ್‌ಚಾರ್ಟೆಡ್ 4: ಎ ಥೀಫ್ ಎಂಡ್

#1 ಅನ್‌ಚಾರ್ಟೆಡ್ 4: ಎ ಥೀಫ್ ಎಂಡ್

ಅನ್‌ಚಾರ್ಟೆಡ್ 4: ಎ ಥೀಫ್ ಎಂಡ್ ಗೇಮ್ ಅಂತಹ ಯಾವುದೇ ಅತ್ಯದ್ಬುತ ಗ್ರಾಫಿಕ್ ತಂತ್ರಜ್ಞಾನ ಹೊಂದಿಲ್ಲದಿದ್ದರೂ ಒಂದು ಸಿನಿಮೀಯ ಕತೆಯಂತೆ ಸಾಗುವ ಗೇಮಾ ಆಗಿದೆ. ಒಮ್ಮೆ ಡೌನ್‌ಲೋಡ್ ಮಾಡಿಕೊಂಡರೆ ಎ ಥೀಫ್ ಎಂಡ್ ಕಥೆಯ ಎಳೆ ಹೊಂದಿರುವ ಗೇಮ್ ಯಾಕೆ ನಂಬರ್ ಒನ್ ಆಗಿದೆ ಎಂದು ತಿಳಿಯುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The Independent's verdict on the past year in video-games. to visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot