ಆಂಡ್ರಾಯ್ಡ್ ನ್ಯೂಗಾ ಸಾಫ್ಟವೇರ್ ಅಪ್‌ಡೇಟ್ ನಿಮ್ಮ ಸ್ಮಾರ್ಟ್‌ಫೋನ್‌ಗಿದೆಯೇ? ಚೆಕ್ ಮಾಡಿ!

"ಆಂಡ್ರಾಯ್ಡ್ ನ್ಯೂಗಾ" ಬಿಡುಗಡೆಗಗೂ ಮೊದಲು ಖರೀದಿಸಿದ್ದ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ನ್ಯೂಗಾ ವರ್ಷನ್‌ ಹೊಂದಿರಲಿಲ್ಲ.

|

ಆಂಡ್ರಾಯ್ಡ್ ಬಳಕೆದಾರರ ಅತ್ಯುತ್ತಮ ಅನುಭವವಕ್ಕಾಗಿ ಗೂಗಲ್ ತನ್ನ ಏಳನೆ ಆವೃತ್ತಿಯ "ಆಂಡ್ರಾಯ್ಡ್ ನ್ಯೂಗಾ" ಸಾಫ್ಟ್‌ವೇರ್ ಬಿಡುಗಡೆ ಮಾಡಿ ಇಲ್ಲಿಗೆ ನಾಲ್ಕು ತಿಂಗಳು ಕಳೆದಿವೆ. ಹೊಸದಾಗಿ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಫೋನ್‌ಗಳು ಬಹುತೇಕ ಆಂಡ್ರಾಯ್ಡ್ ನ್ಯೂಗಾ ಸಾಫ್ಟ್‌ವೇರ್ ಹೊಂದಿದ್ದರೆ, "ಆಂಡ್ರಾಯ್ಡ್ ನ್ಯೂಗಾ" ಬಿಡುಗಡೆಗಗೂ ಮೊದಲು ಖರೀದಿಸಿದ್ದ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ನ್ಯೂಗಾ ವರ್ಷನ್‌ ಹೊಂದಿರಲಿಲ್ಲ.

ಸ್ಮಾರ್ಟ್‌ಫೋನ್‌ಗೆ ವೈರ್‌ಲೆಸ್‌ ಚಾರ್ಜರ್ ತಯಾರಿಸುವುದು ಹೇಗೆ? ಸಿಂಪಲ್ ಸ್ಟೆಪ್ಸ್!!

ಇನ್ನು ಎಲ್ಲಾ ಕಂಪೆನಿಗಳು ತನ್ನ ಸ್ಮಾರ್ಟ್‌ಫೋನ್‌ಗಳಿಗೆ ಆಂಡ್ರಾಯ್ಡ್ ನ್ಯೂಗಾ ಸಾಫ್ಟವೇರ್ ಅಪ್‌ಡೇಟ್ ನೀಡಲು ಪ್ರಯತ್ನಿಸುತ್ತಿವೆ. ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನ್‌ ಸಹ ನೂತನ ಆಂಡ್ರಾಯ್ಡ್ ವರ್ಷನ್ "ಆಂಡ್ರಾಯ್ಡ್‌ನ್ಯೂಗಾ" ಸಾಫ್ಟ್‌ವೇರ್ ಸಪೋರ್ಟ್ ಹೊಂದಿದೆಯೇ ಮತ್ತು ಯಾವ ಯಾವ ಕಂಪೆನಿಯ ಯಾವ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ ನ್ಯೂಗಾ ಅಪ್‌ಡೇಟ್ ಸಹಕರಿಸುತ್ತವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

"ಲೆನೊವೂ ಮೊಟೊ" ಸ್ಮಾರ್ಟ್‌ಫೋನ್ಸ್.

ಮೊಟೊ ಜಿ ಪ್ಲೇ, ಮೊಟೊ ಪ್ಯೂರ್ ಎಡಿಷನ್, ಮೊಟೊ ಎಕ್ಸ್ ಸ್ಟೈಲ್ , ಮೊಟೊ ಎಕ್ಸ್ ಪ್ಲೇ, ಮೊಟೊ ಎಕ್ಸ್ ಫೋರ್ಸ್,ಮತ್ತು ಮೊಟೊ ಎಮ್ ಸ್ಮಾರ್ಟ್‌ಫೊನ್‌ಗಳಲ್ಲಿ ನೂತನ ಆಂಡ್ರಾಯ್ಡ್‌ನ್ಯೂಗಾ ಸಾಫ್ಟ್‌ವೇರ್‌ ಅಪ್‌ಡೇಟ್ ಮಾಡಿಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ಸ್.

ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ಸ್.

ಸ್ಯಾಮ್‌ಸಂಗ್‌ನ ಗ್ಯಾಲಾಕ್ಸಿ ಎಸ್‌7 ಮತ್ತು ಎಸ್‌7 ಎಡ್ಜ್ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಆಂಡ್ರಾಯ್ಡ್ ನ್ಯೂಗಾ ಸಾಫ್ಟವೇರ್ ಒಳಗೊಂಡು ಮಾರುಕಟ್ಟೆಗೆ ಬಂದಿವೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಾಕ್ಸಿ A5 (2016) ಮತ್ತು ಗ್ಯಾಲಾಕ್ಸಿ A3 ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ನ್ಯೂಗಾ ಸಾಫ್ಟ್‌ವೇರ್‌ಗೆ ಅಪ್‌ಡೇಟ್ ಆಗುತ್ತವೆ ಎನ್ನಲಾಗಿದೆ.

ಶ್ಯೋಮಿ ಸ್ಮಾರ್ಟ್‌ಫೋನ್ಸ್.

ಶ್ಯೋಮಿ ಸ್ಮಾರ್ಟ್‌ಫೋನ್ಸ್.

ಶ್ಯೋಮಿಯ ಮೈ ಮ್ಯಾಕ್ಸ್, ಮೈ ನೊಟ್, ಮೈ 4ಸಿ ಮತತ್ತು ಮೈ ಎಸ್ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ ನ್ಯೂಗಾ ಸಾಫ್ಟವೇರ್ ಆವೃತ್ತಿಗೆ ಅಪ್‌ಡೇಟ್ ಆಗುತ್ತವೆ.

ಹುವಾವೆ ಸ್ಮಾರ್ಟ್‌ಫೋನ್ಸ್.

ಹುವಾವೆ ಸ್ಮಾರ್ಟ್‌ಫೋನ್ಸ್.

ಹುವಾವೆ ಮೇಟ್ ಸೀರಿಸ್‌ನ ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ ನ್ಯೂಗಾ ಸಾಫ್ಟವೇರ್‌ಗೆ ಅಪ್‌ಡೇಟ್ ಆಗುತ್ತವೆ. ಇನ್ನು ಹುವಾವೆಯ ಹಾನರ್ 5ಎಕ್ಸ್ ಮತ್ತು 5ಸಿ ಸ್ಮಾರ್ಟ್‌ಪೋನ್‌ಗಳು ಸಹ ನ್ಯೂಗಾ ಅಪ್‌ಡೇಟ್ ಆಗುತ್ತವೆ ಎಂದು ಹೇಳಲಾಗಿದೆ.

ಹೆಚ್‌ಟಿಸಿ ಸ್ಮಾರ್ಟ್‌ಫೋನ್ಸ್.

ಹೆಚ್‌ಟಿಸಿ ಸ್ಮಾರ್ಟ್‌ಫೋನ್ಸ್.

ಹೆಚ್‌ಟಿಸಿಯ ಅನ್‌ಲಾಕಡ್ ವರ್ಷನ್ ಸ್ಮಾರ್ಟ್‌ಫೋನ್ ಹೆಚ್‌ಟಿಸಿ10 ಮತ್ತು ಹೆಚ್‌ಟಿಸಿ ಎಂ 9 ಸ್ಮಾರ್ಟ್‌ಫೋನ್‌ಗಳು ನೂತನ ಆಂಡ್ರಾಯ್ಡ್ ವರ್ಷನ್‌ಗೆ ಅಪ್‌ಡೇಟ್ ಆಗಲಿವೆ ಇನ್ನು ಹೆಚ್‌ಟಿಸಿ ಬೋಲ್ಟ್ ಸ್ಮಾರ್ಟ್‌ಫೋನ್ ಇ ವರ್ಷದಲ್ಲಿ ಅಪ್‌ಡೇಟ್ ಆಗಲಿದೆ.

Best Mobiles in India

English summary
Google on August 22 announced the release of the seventh version of Android, the Nougat.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X