PDF ಫೈಲ್ ಎಡಿಟ್ ಮಾಡಬೇಕೆ.?..ಹಾಗಾದರೇ ಈ ಆಪ್‌ಗಳು ನಿಮ್ಮ ಸಹಾಯಕ್ಕೆ ಬರಲಿವೆ.!!
ಕಂಪ್ಯೂಟರ್‌ನಲ್ಲಿ ಹಲವು ಮಾದರಿಗಳಲ್ಲಿ ಡಾಕ್ಯುಮೆಂಟ್‌ಗಳನ್ನು ಸೇವ್ ಮಾಡಿಕೊಳ್ಳಬಹುದಾಗಿದ್ದರು, ಇತರರಿಗೆ ಶೇರ್ ಮಾಡಲು 'ಪಿಡಿಎಫ್' ಮಾದರಿಯನ್ನು ಹೆಚ್ಚಾಗಿ ಬಳೆಸುತ್ತಾರೆ. ಏಕೆಂದರೇ ಪಿಡಿಎಫ್ ಫೈಲ್‌ಗಳನ್ನು ಎಡಿಟ್ ಮಾಡಲು ಬರುವುದಿಲ್ಲ ಮತ್ತು ಮೂಲ ಡಾಟಾ ಸೇಫ್ ಆಗಿ ಇರುತ್ತದೆ. ಆದರೆ ಪಿಡಿಎಫ್ ಫೈಲ್‌ಗಳನ್ನು ಮರು ಎಡಿಟ್ ಸಾಧ್ಯವಿದ್ದು, ಅದಕ್ಕಾಗಿ ಹಲವು ಉಚಿತ ಅಪ್ಲಿಕೇಶನ್‌ಗಳು ಲಭ್ಯ.

ಹೌದು, ಪಿಡಿಎಫ್ ಫೈಲ್‌ಗಳು ಓದುವ ಮಾದರಿಯಲ್ಲಿದ್ದು, ಅವುಗಳನ್ನು ಎಡಿಟ್ ಮಾಡಲು ಬರುವುದಿಲ್ಲ. ಆದರೆ 'ಗೂಗಲ್ ಪ್ಲೇ' ಸ್ಟೋರ್‌ನಲ್ಲಿ ಉಚಿತವಾಗಿ ದೊರೆಯುವ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಸರಳವಾಗಿ ಪಿಡಿಎಫ್ ಡಾಕ್ಯುಮೆಂಟ್ ಗಳನ್ನು ಮರು ಎಡಿಟ್ ಮಾಡಬಹುದಾಗಿದೆ. ಇದರೊಂದಿಗೆ ಮರಳಿ ಪಿಡಿಎಫ್ ಫೈಲ್ ಮಾದರಿಯಲ್ಲಿಯೇ ಸೇವ್ ಕೂಡಾ ಮಾಡಿಕೊಳ್ಳಬಹುದಾಗಿದೆ.

ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅನೇಕ ಉಚಿತ ಪಿಡಿಎಫ್ ಅಪ್ಲಿಕೇಶನ್‌ಗಳನ್ನು ಸರ್ಚ್ ಮಾಡುತ್ತಿರುತ್ತಾರೆ. ಆದರೆ ಸರಿಯಾದ ಅಪ್ಲಿಕೇಶನ್ ಸೀಗುವುದು ವಿರಳ. ಸಿಕ್ಕರೂ ಅವು ವಾಟರ್ ಮಾರ್ಕ್ ಹೊಂದಿರುತ್ತವೆ. ಹೀಗಾಗಿ ಇಂದಿನ ನಮ್ಮ ಲೇಖನದಲ್ಲಿ ಕೆಲವು 'ಪಿಡಿಎಫ್ ಎಡಿಟರ್' ಆಪ್‌ಗಳನ್ನು ಸೂಚಿಸಲಾಗಿದ್ದು, ಈ ಆಪ್‌ಗಳು ಉಚಿತವಾಗಿರುವ ಜೊತೆಗೆ ಹಲವು ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿವೆ. ಹಾಗಾದರೇ ಆ ಆಪ್‌ಗಳು ಯಾವವು ಎಂಬುದನ್ನು ನೋಡೋಣ ಬನ್ನಿರಿ.

ApowerPDF
ಈ ಅಪ್ಲಿಕೇಶನ್ 'ಲಾಂಚ್ ಆನ್‌ಲೈನ್' ಮತ್ತು ಡೌನ್‌ಲೋಡ್ ಡೆಸ್ಕಟಾಪ್ ಎಂವ ಎರಡು ಮಾದರಿಗಳಲ್ಲಿ ದೊರೆಯಲಿದ್ದು, ಆದರೆ ಇವೆರಡು ಒಂದೆ ತರಹದ ಫೀಚರ್ಸ್‌ಗಳನ್ನು ಹೊಂದಿಲ್ಲ. ಡೌನ್‌ಲೋಡ್ ಡೆಸ್ಕ್‌ಟಾಪ್ ಮಾದರಿಯು ಟ್ರಾಯಲ್ ಮಾದರಿಯದ್ದಾಗಿದ್ದು, ಈ ಆಪ್‌ನಲ್ಲಿ ಪಿಡಿಎಫ್‌ನಲ್ಲಿ ವಾಟರ್ ಮಾರ್ಕ್ ಬರುತ್ತದೆ. ಆದರೆ ಲಾಂಚ್ ಆನ್‌ಲೈಲ್ ಮಾದರಿಯಲ್ಲಿ ಆಯ್ಕೆಯಲ್ಲಿ ಪಿಡಿಎಫ್, ಇಮೇಜ್ ಮತ್ತು ಟೆಕ್ಸ್ಟ್ ಮಾದರಿಗೆ ಬದಲಾಯಿಸಿಕೊಳ್ಳಬಹುದಾಗಿದೆ.

PDF-XChange Editor
ಪಿಡಿಎಫ್‌ಡಾಕ್ಯಮೆಂಟ್‌ನಲ್ಲಿ ಎಡಿಟ್ ಮಾಡಬೇಕೆಂದರೆ ಇದುವೇ ಅತ್ಯುತ್ತಮ ಅಪ್ಲಿಕೇಶನ್ ಆಗಿದೆ. PC ಯಲ್ಲಿ ಈ ಆಪ್ ಇನ್‌ಸ್ಟಾಲ್ ಮಾಡಿಕೊಂಡು ಪಿಡಿಎಫ್ ಫೈಲ್‌ನಲ್ಲಿ ಮತ್ತೆ ಹೊಸದನ್ನು ಸೇರಿಸಲುಬಹುದು ಮತ್ತು ಡಿಲೀಟ್ ಮಾಡುವ ಆಯ್ಕೆಗಳೊಂದಿಗೆ ಇನ್ನು ಅನೇಕ ಆಯ್ಕೆಗಳು ಲಭ್ಯವಾಗುತ್ತವೆ. OCR ಫೈಲ್‌ನ್ನು ಗುರುತಿಸುವ ಆಯದಕೆಯನ್ನು ಹೊಂದಿರುವುದು ಈ ಆಪ್‌ನ ಪ್ರಮುಖ ಫೀಚರ್ಸ್

PDF editor Sedja
ಇದೊಂದು ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿರುವ ಆನ್‌ಲೈನ್ ಪಿಡಿಎಫ್ ಎಡಿಟರ್ ಆಗಿದೆ. ಬೇರೆ ಮಾದರಿಯಲ್ಲಿರುವ ಫೈಲ್‌ಗಳನ್ನು ಪಿಡಿಎಫ್‌ಗೆ ಬದಲಾಯಿಸಿಕೊಳ್ಳಬಹುದಾಗಿದ್ದು, ಜೊತೆಗೆ ಪಿಡಿಎಫ್ ಮಾದರಿಯ ಫೈಲ್‌ಗಳನ್ನು ಎಡಿಟ್ ಸಹ ಮಾಡಬಹುದಾಗಿದೆ. OCR ಮಾದರಿಯ ಫೈಲ್‌ಗಳನ್ನು ಮತ್ತು ಸ್ಕ್ಯಾನ್ ಮಾಡಿದ ಪಿಡಿಎಫ್ ಫೈಲ್‌ಗಳನ್ನು ಎಡಿಟ್ ಮಾಡಲು ಸಹಕರಿಸುವುದಿಲ್ಲ. ಎಡಿಟ್ ಆದನಂತರ 'Apply changes' ಆಯ್ಕೆ ಮಾಡಿಕೊಳ್ಳಬೇಕು ಇಲ್ಲದಿದ್ದರೇ ಮೂರು ಗಂಟೆಯಲ್ಲಿ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುವುದು.

PDFescape
ಈ ಅಪ್ಲಿಕೇಶನ್ ಎರಡು ಮಾದರಿಯಲ್ಲಿ ಲಭ್ಯವಿದ್ದು, ವೆಬ್ ಆಪ್ ಮತ್ತು ಪ್ರೀಮಿಯಮ್ ಡೆಸ್ಕಟಾಪ್ ಪ್ರೋಗ್ರಾಮ್ ಗಳಲ್ಲಿ ಇದ್ದು, ಟ್ರಾಯಲ್ ಪ್ರೀಮಿಯಮ್ ಎಡಿಷನ್‌ನಲ್ಲಿ ದೊರೆಯಲಿದೆ. ಈ ಆಪ್‌ನ ವೆಬ್ ಆನ್‌ಲೈನ್ ಮಾದರಿಯಲ್ಲಿ ಹೊಸ ಟೆಕ್ಸ್ಟ್ ಬರಹವನ್ನು ಸೇರಿಸಬಹುದಾಗಿದೆ. ಆದರೆ ಟೆಕ್ಸ್ಟ್ ಎಡಿಟ್ ಆಯ್ಕೆ ನೀಡಿಲ್ಲ. ಆದರೆ PC ಯಲ್ಲಿರುವ ಟೆಕ್ಸ್ಟ್ ಮಾದರಿಯ ಚಿತ್ರಗಳನ್ನು ಆಯ್ದುಕೊಂಡು, ಡ್ರ್ಯಾಗ್ ಮಾಡಿ ಸೇರಿಸಬಹುದಾಗಿದೆ.

PDFsam Basic
ಈ ಪಿಡಿಎಫ್ ಎಡಿಟಿಂಗ್ ಆಪ್ ಸರಳವಾಗಿದ್ದು ‘split and merge', ಚಿಕ್ಕ ಪುಟ್ಟ್ ಎಡಿಟ್ ಗಳನ್ನು ವೇಗವಾಗಿ ಮಾಡಲು ಸಹಕರಿಸುತ್ತದೆ. ಉಚಿತ ಟ್ರಾಯಲ್ ವರ್ಷನ್ ಮಾದರಿಯಲ್ಲಿ ಲಭ್ಯವಾಗುವ ಈ ಆಪ್ ಪೂರ್ಣ ಎಡಿಟಿಂಗ್, ಇಮೇಜ್‌ಗಳನ್ನು ಸೇರಿಸುವ, ಸೆಕ್ಯುರ್ ಸೈನಿಂಗ್ ಮತ್ತು OCR ಈ ಎಲ್ಲ ಆಯ್ಕೆಗಳು ದೊರೆಯಲಿವೆ. ಟ್ರಾಯಲ್ ವರ್ಷನ್ ಮುಗಿದ ಮೇಲೆ ಮತ್ತೆ ಬೇಸಿಕ್ ಎಡಿಟಿಂಗ ಮಾದರಿ ಉಳಿಯುತ್ತದೆ.


Click it and Unblock the Notifications