ಬೆಂಗಳೂರಿನ ವಿದ್ಯುತ್ ಸಮಸ್ಯೆಗೆ ಬ್ರೇಕ್ ಹಾಕಲಿದೆ ಈ ಆಪ್‌...!

|

ಸರ್ಕಾರಿ ಸೇವೆಗಳು ಇಂದಿನ ದಿನದಲ್ಲಿ ಸಾಕಷ್ಟು ಆಪ್‌ಡೇಟ್ ಆಗುತ್ತಿದ್ದು, ಡಿಜಿಟಲ್ ಕಡೆಗೆ ಮುಖ ಮಾಡಿವೆ ಇದೇ ಮಾದರಿಯಲ್ಲಿ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ) ತನ್ನ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಸಲುವಾಗಿ 'ಬೆಸ್ಕಾಂ ಮಿತ್ರ' ಎನ್ನುವ ಆಪ್ ವೊಂದನ್ನು ಲಾಂಚ್ ಮಾಡಿದೆ.

ಬೆಂಗಳೂರಿನ ವಿದ್ಯುತ್ ಸಮಸ್ಯೆಗೆ ಬ್ರೇಕ್ ಹಾಕಲಿದೆ ಈ ಆಪ್‌...!

ಓದಿರಿ: ಶಿಯೋಮಿ ಅಲೆ ಅಳಿಸಲಿದೆ 10.or D ಸ್ಮಾರ್ಟ್‌ಪೋನ್‌: ರೂ.5000ಕ್ಕೆ ಎಷ್ಟೇಲ್ಲಾ ನೀಡುತ್ತಿದೆ ಗೊತ್ತಾ..?

ಆಂಡ್ರಾಯ್ಡ್ ಬಳಕೆದಾರರು ಈ ಆಪ್ ಆನ್ನು ಗೂಗಲ್‌ನ ಪ್ಲೇ ಸ್ಟೋರ್‌ ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು, ಐಫೋನ್ ಬಳಕೆದಾರರು ಆಪಲ್ ಆಪ್‌ ಸ್ಟೋರ್‌ ನಿಂದ 'ಬೆಸ್ಕಾಂ ಮಿತ್ರ' ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಆನ್‌ಲೈನ್‌ ಬಿಲ್‌ ಪಾವತಿ:

ಆನ್‌ಲೈನ್‌ ಬಿಲ್‌ ಪಾವತಿ:

‘ಬೆಸ್ಕಾಂ ಮಿತ್ರ' ಆಪ್‌ ಬಳಕೆ ಮಾಡಿಕೊಳ್ಳುವ ಮೂಲಕ ಬೆಂಗಳೂರಿನ ನಿವಾಸಿಗಳು ಈ ಆಪ್‌ ಮೂಲಕವೇ ಬಿಲ್‌ ಪಾವತಿ ಮಾಡುವ ಸೇವೆಯನ್ನು ಪಡೆಯಬಹುದಾಗಿದೆ. ಇದರಿಂದ ಬಿಲ್ ಕಟ್ಟಲು ಕ್ಯೂ ನಲ್ಲಿ ನಿಲ್ಲುವ ಕಾರ್ಯಕ್ಕೆ ಬ್ರೇಕ್ ಬಿಳಲಿದೆ.

ಬೆಸ್ಕಾಂ ಮಾಹಿತಿಗಳು ಲಭ್ಯ:

ಬೆಸ್ಕಾಂ ಮಾಹಿತಿಗಳು ಲಭ್ಯ:

‘ಬೆಸ್ಕಾಂ ಮಿತ್ರ' ಆಪ್‌ನಲ್ಲಿ ಬೆಸ್ಕಾಂ ಕುರಿತು ಮಾಹಿತಿ ದೊರೆಯಲಿದೆ, ಗ್ರಾಹಕರು ಇಲ್ಲಿ ವಿದ್ಯುತ್‌ ದರ, ನೀತಿ, ಯೋಜನೆ, ವಿದ್ಯುತ್‌ ಕಡಿತದ ಮಾಹಿತಿ, ಬಿಲ್ಲಿಂಗ್‌ ಹಾಗೂ ಪಾವತಿ ಕುರಿತ ಮಾಹಿತಿಯೂ ಇಲ್ಲಿ ಇರಲಿದೆ.

ದೂರು ನೀಡಬಹುದು:

ದೂರು ನೀಡಬಹುದು:

‘ಬೆಸ್ಕಾಂ ಮಿತ್ರ' ಆಪ್‌ ಮೂಲಕ ಬೆಸ್ಕಾಂ ಸೇವೆಗಳಿಗೆ ಸಂಬಂಧಿಸಿದಂತೆ ದೂರು ದಾಖಲಿಸಬಹುದಾಗಿದೆ. ಅಲ್ಲದೇ ದೂರು ದಾಖಲಿಸಿದ ನಂತರದ ಬೆಳವಣಿಗೆಗಳು ಆಪ್‌ ನಲ್ಲಿ ಲಭ್ಯವಿರಲಿದೆ.

ಸಾಮಾಜಿಕ ಜಾಲತಾಣ:

ಸಾಮಾಜಿಕ ಜಾಲತಾಣ:

ಇದಲ್ಲದೇ ಬೆಸ್ಕಾಂ ಫೇಸ್‌ಬುಕ್ ಮತ್ತು ಟ್ವಿಟರ್ ಮಾಹಿತಿಯೂ ಈ ಆಪ್‌ ನಲ್ಲಿಯೇ ದೊರೆಯಲಿದ್ದು, ಬೆಸ್ಕಾಂ ಕುರಿತಾದ ಸುದ್ದಿಗಳನ್ನು ಬಳಕೆದಾರರು ಇಲ್ಲಿಯೇ ಪಡೆಯಬಹುದಾಗಿದೆ.

Best Mobiles in India

English summary
The Mobile App BESCOM Mithra. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X