ಶಿಯೋಮಿ ಅಲೆ ಅಳಿಸಲಿದೆ 10.or D ಸ್ಮಾರ್ಟ್‌ಪೋನ್: ರೂ.5000ಕ್ಕೆ ಎಷ್ಟೇಲ್ಲಾ ನೀಡುತ್ತಿದೆ ಗೊತ್ತಾ..?

ಭಾರತೀಯ ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ಸ್ಮಾರ್ಟ್‌ಫೋನ್‌ಗಳು ಕಾಣಿಸಿಕೊಳ್ಳುತ್ತಿದ್ದು, ಅದರಲ್ಲಿಯೂ ಬಜೆಟ್ ಬೆಲೆಯ ಫೋನ್‌ಗಳು ಹೆಚ್ಚಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಶಿಯೋಮಿ ಬಿಡುಗಡೆ ಮಾಡಿರುವ ರೆಡ್‌ಮಿ 5A ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಇದಕ್ಕೆ ಭರ್ಜರಿ ಸ್ಪರ್ಧೆಯನ್ನು ನೀಡುವ ಸಲುವಾಗಿ ಬಂದಿದೆ 10.or D ಸ್ಮಾರ್ಟ್‌ಪೋನ್.

ಓದಿರಿ: ಜಿಯೋ ದಾಳಿಗೆ ಮೊದಲ ಬಲಿ: ಸೇವೆ ನಿಲ್ಲಿಸಲಿದೆ ದೈತ್ಯ ಟೆಲಿಕಾಂ ಕಂಪನಿ 'ಏರ್'...?!
10.or ಕಂಪನಿಯೂ ಈಗಾಗಲೇ ಮಾರುಕಟ್ಟೆಗೆ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಎರಡು ಫೋನ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈಗ ಹೊಸದಾಗಿ 10.or D ಸ್ಮಾರ್ಟ್‌ಪೋನ್ ಪರಿಚಯ ಮಾಡಿದ್ದು, ಕೇವಲ ರೂ.5000ಕ್ಕೆ ದೊರೆಯಲಿರುವ ಸ್ಮಾರ್ಟ್‌ಫೋನ್ ಎಲ್ಲಾ ಫೀಚರ್‌ಗಳನ್ನು ಒಳಗೊಂಡಿದ್ದು, ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಹಾಕಲಿದೆ.

ಫಿಂಗರ್ ಪ್ರಿಂಟ್ ಸ್ಕ್ಯಾನರ್:
ಮಾರುಕಟ್ಟೆಯಲ್ಲಿ ರೂ.5000ಕ್ಕೆ ದೊರೆಯುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದರಲ್ಲಿಯೂ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಲು ಸಾಧ್ಯವಲ್ಲಿ ಆದರೆ 10.or D ಸ್ಮಾರ್ಟ್‌ಪೋನ್ ನಲ್ಲಿ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ. ಇದು ಅತೀ ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆ.

5.2 ಇಂಚಿನ ಡಿಸ್‌ಪ್ಲೇ:
10.or D ಸ್ಮಾರ್ಟ್‌ಪೋನ್ ನಲ್ಲಿ 5.2 ಇಂಚಿನ HD ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಇದೇ ಬೇರೆ ಫೋನ್‌ಗಳಲ್ಲಿ ಕೇವಲ 5 ಇಂಚಿನ ಡಿಸ್‌ಪ್ಲೇ ಮಾತ್ರವೇ ಕಾಣಸಿಗಲಿದೆ.

ವೇಗದ ಪ್ರೋಸೆಸರ್:
ಇದಲ್ಲದೇ 10.or D ಸ್ಮಾರ್ಟ್‌ಪೋನ್ ನಲ್ಲಿ 1.4GHz ವೇಗದ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 425 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ, ಗ್ರಾಫೀಕ್ಸ್ ಗಾಗಿ ಆಡ್ರಿನೋ 308 GPU ನೀಡಲಾಗಿದೆ. ಇದು ವೇಗವಾಗಿ ಕಾರ್ಯನಿರ್ವಹಿಸಲು, ಗೇಮ್‌ಗಳನ್ನು ಆಡಲು ಶಕ್ತವಾಗಿದೆ ಎನ್ನಲಾಗಿದೆ.

ದೊಡ್ಡ ಬ್ಯಾಟರಿ:
10.or D ಸ್ಮಾರ್ಟ್‌ಫೋನಿನಲ್ಲಿ ಅತೀ ದೊಡ್ಡ ಬ್ಯಾಟರಿಯನ್ನು ಕಾಣಬಹುದಾಗಿದೆ. ಇದರಲ್ಲಿ 3500mAh ಬ್ಯಾಟರಿಯನ್ನು ನೀಡಲಾಗಿದೆ. ಇದು ಎರಡು ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದೆ ಎನ್ನಲಾಗಿದೆ.

ಎರಡು ಆವೃತ್ತಿಯಲ್ಲಿ ಲಭ್ಯ:
10.or D ಸ್ಮಾರ್ಟ್‌ಪೋನ್‌ನಲ್ಲಿ ಎರಡು ಆವೃತ್ತಿಯನ್ನು ಕಾಣಬಹುದಾಗಿದೆ. 2GB/16GB ಮತ್ತು 3GB/32GB ಆವೃತ್ತಿಗಳು ಲಭ್ಯವಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಅಮೆಜಾನ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಜನವರಿ 5 ರಿಂದ ಸೇಲ್ ಆರಂಭವಾಗಲಿದೆ.


Click it and Unblock the Notifications








