ಸರ್ಕಾರಕ್ಕೂ ಸಿಗೊಲ್ಲಾ ವಾಟ್ಸ್‌ಆಪ್ ಎನ್‌ಸ್ಕ್ರಿಪ್ಷನ್ ಮೆಸೇಜ್‌ಗಳ ಮಾಹಿತಿ!!

Written By:

ಪ್ರಪಂಚದಾದ್ಯಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ಅಪ್ ಎನ್‌ಸ್ಕ್ರಿಪ್ಷನ್ ಸೆಕ್ಯುರಿಟಿ ಹೊಂದಿದ್ದರೂ ಹ್ಯಾಕರ್‌ಗಳು ಮತ್ತು ಸರ್ಕಾರದ ಏಜೆನ್ಸಿಗಳು ವಾಟ್ಸ್ಅಪ್ ಸಂದೇಶಗಳನ್ನು ಓದಲು ಸಾಧ್ಯವಿದೆ ಎಂದು ದಿ ಗಾರ್ಡಿಯನ್ ಪತ್ರಿಕೆ ಪ್ರಕಟಿಸಿದ್ದ ವರದಿಯನ್ನು ವಾಟ್ಸ್ಆಪ್ ನಿರಾಕರಿಸಿದೆ.

ಜನರ ಸಂದೇಶಗಳನ್ನು ಸರ್ಕಾರದ ಏಜೆನ್ಸಿಗಳು, ಫೇಸ್ ಬುಕ್ ಹಾಗೂ ಇನ್ನಿತರ ಸಹ ಸಂಸ್ಥೆಗಳಿಗೆ ವಾಟ್ಸ್ಅಪ್ (ಗೂಢಲಿಪೀಕರಣ) ಸಂದೇಶಗಳನ್ನು ಓದಲು ಅವಕಾಶ ನೀಡಲಾಗಿದೆ ಎಂದು ಗಾರ್ಡಿಯನ್ ಪತ್ರಿಕೆ ಇತ್ತೀಚಿಗಷ್ಟೆ ವರದಿ ಪ್ರಕಟಿಸಿತ್ತು.

 ಸರ್ಕಾರಕ್ಕೂ ಸಿಗೊಲ್ಲಾ ವಾಟ್ಸ್‌ಆಪ್ ಎನ್‌ಸ್ಕ್ರಿಪ್ಷನ್ ಮೆಸೇಜ್‌ಗಳ ಮಾಹಿತಿ!!

ಎನ್‌ಸ್ಕ್ರಿಪ್ಷನ್ ಆಗಿದ್ದರೂ ವಾಟ್ಸ್ಅಪ್ ಸುರಕ್ಷತೆ ಬಗ್ಗೆ ಅನುಮಾನ!!

ಇನ್ನು ಇದನ್ನು ಅಲ್ಲಗಳೆದಿರುವ ವಾಟ್ಸ್‌ಆಪ್ ಸಂದೇಶಗಳ ರವಾನೆಗೆ ವಾಟ್ಸ್ ಆಪ್ ನಲ್ಲಿ ಪ್ರತ್ಯೇಕ ವಿನ್ಯಾಸವಿದ್ದು, ಗೂಢಲಿಪೀಕರಣ ಸಂದೇಶಗಳನ್ನು ಓದಲು ಸರ್ಕಾರದ ಸಂಸ್ಥೆಗಳು ಅಥವಾ ಇನ್ನಿತರ ಸಂಸ್ಥೆಗಳಿಗೆ ಹಿಂಬಾಗಿಲಿನ ಮೂಲಕ ಅವಕಾಶ ಮಾಡಿಕೊಡುತ್ತಿದೆ ಎಂಬ ಗಾರ್ಡಿಯನ್ ಪತ್ರಿಕೆ ವರದಿಗಳು ಸುಳ್ಳು ಎಂದು ಹೇಳಿದೆ.

 ಸರ್ಕಾರಕ್ಕೂ ಸಿಗೊಲ್ಲಾ ವಾಟ್ಸ್‌ಆಪ್ ಎನ್‌ಸ್ಕ್ರಿಪ್ಷನ್ ಮೆಸೇಜ್‌ಗಳ ಮಾಹಿತಿ!!

ಗೂಡಲಿಪೀಕರಣಗೊಂಡಿರುವ ಸಂದೇಶಗಳನ್ನು ಓದಲು ಅವಕಾಶ ನೀಡಲಾಗುತ್ತಿಲ್ಲ. ಎನ್ ಕ್ರಿಪ್ಷನ್ ಕುರಿತು ಈಗಾಗಲೇ ವಾಟ್ಸ್ ಆಪ್ ಶ್ವೇತ ಪತ್ರ ಹೊರಡಿಸಿದೆ. ಒಂದು ವೇಳೆ ಸರ್ಕಾರದಿಂದ ಒತ್ತಡ ಬಂದರೂ ನಾವು ಸರ್ಕಾರದ ವಿರುದ್ದ ಹೋರಾಟ ನಡೆಸಲು ಸಿದ್ದವಿದ್ದೇವೆ ಎಂದು ವಾಟ್ಸ್ಅಪ್ ಹೇಳಿದೆ.

English summary
ಸರ್ಕಾರದ ಏಜೆನ್ಸಿಗಳು, ಫೇಸ್ ಬುಕ್ ಹಾಗೂ ಇನ್ನಿತರ ಸಹ ಸಂಸ್ಥೆಗಳಿಗೆ ವಾಟ್ಸ್ಅಪ್ (ಗೂಢಲಿಪೀಕರಣ) ಸಂದೇಶಗಳನ್ನು ಓದಲು ಅವಕಾಶ ನೀಡಲಾಗಿದೆ ಎಂದು ಗಾರ್ಡಿಯನ್ ಪತ್ರಿಕೆ ಇತ್ತೀಚಿಗಷ್ಟೆ ವರದಿ ಪ್ರಕಟಿಸಿತ್ತು.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot