ಯೂಟ್ಯೂಬ್‌ನಲ್ಲಿ ವಿಡಿಯೊ ನೋಡುವಾಗ ನಿಮಗೆ ಈ ಆಯ್ಕೆ ಖಂಡಿತಾ ಉಪಯುಕ್ತ!
ಸದ್ಯ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಹಾಟ್‌ಸ್ಟಾರ್ ಸೇರಿದಂತೆ ಹಲವು ವಿಡಿಯೊ ಸ್ಟ್ರೀಮಿಂಗ್ ಆಪ್ ಬಳಕೆಯಲ್ಲಿ ಇದ್ದರೂ, ಗೂಗಲ್ ಮಾಲೀಕತ್ವದ ಯೂಟ್ಯೂಬ್ ತನ್ನ ಜನಪ್ರಿಯತೆ ಅಧಿಕವಾಗಿಯೇ ಇದೆ. ಯಾವುದೇ ವಿಡಿಯೋ ರೂಪದ ಮಾಹಿತಿ ಬೇಕಿದ್ದರೂ ಬಳಕೆದಾರರು ಮೊದಲಿಗೆ ಯೂಟ್ಯೂಬ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುತ್ತಾರೆ. ಏಕೆಂದರೇ ಇಲ್ಲಿ ಇಂತಹ ವಿಷಯದ ಬಗ್ಗೆ ವಿಡಿಯೋ ಇಲ್ಲ ಎನ್ನುವ ಹಾಗಿಲ್ಲ. ಯೂಟ್ಯೂಬ್ ತಾಣದಲ್ಲಿ ಎಲ್ಲ ಬಗೆಯ ವಿಡಿಯೋಗಳನ್ನು ಒಳಗೊಂಡಿದ್ದು, ಹಾಗೆಯೇ ಬಳಕೆದಾರರಿಗೆ ಅನುಕೂಲಕರ ಆಯ್ಕೆಗಳನ್ನು ನೀಡಿದೆ. ಆ ಪೈಕಿ ಕೆಲವು ಆಯ್ಕೆಗಳು ವಿಡಿಯೊ ನೋಡುವಾಗ ಉಪಯುಕ್ತ ಆಗಿವೆ.

ಹೌದು, ಯೂಟ್ಯೂಬ್ ಆಪ್ ನಲ್ಲಿ ವಿಡಿಯೋ ವೀಕ್ಷಣೆ ಮಾಡಲು ಬಳಕೆದಾರರು ಯಾವುದೇ ಶುಲ್ಕ ನೀಡಬೇಕಿಲ್ಲ. ಬಹುತೇಕ ಓಟಿಟಿ ಆಪ್‌ಗಳಲ್ಲಿ ವಿಡಿಯೋ ವೀಕ್ಷಣೆ ಮಾಡಲು ಬಳಕೆದಾರರು ಚಂದಾದಾರಿಕೆ ಪಡೆಯಬೇಕಿರುತ್ತದೆ. ಹಾಗೆಯೇ ತನ್ನ ಬಳಕೆದಾರರ ವಿಡಿಯೋ ವೀಕ್ಷಣೆಗೆ ನೆರವಾಗುವಂತಹ ಹಲವು ಉಪಯುಕ್ತ ಆಯ್ಕೆಗಳನ್ನು ಯೂಟ್ಯೂಬ್ ಹೊಂದಿದೆ. ಆದರೆ ಕೆಲವು ಬಳಕೆದಾರರಿಗೆ ಯೂಟ್ಯೂಬ್‌ನಲ್ಲಿರುವ ಕೆಲವೊಂದು ಆಯ್ಕೆಗಳ ಬಗ್ಗೆ ತಿಳಿದಿರುವುದಿಲ್ಲ. ಹಾಗಾದರೇ ಯೂಟ್ಯೂಬ್‌ನಲ್ಲಿ ವಿಡಿಯೋ ನೋಡುವಾಗ ಯುಪಯುಕ್ತ ಎನಿಸುವ ಕೆಲವು ಆಯ್ಕೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿಡಿಯೊ ಗುಣಮಟ್ಟ ಬದಲಿಸುವ ಆಯ್ಕೆ
ಯೂಟ್ಯೂಬ್‌ನಲ್ಲಿ ವಿಡಿಯೊ ವೀಕ್ಷಣೆ ಮಾಡುವಾಗ ಪ್ಲೇ ಆಗುತ್ತಿರುವ ವಿಡಿಯೊ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಆಯ್ಕೆ ನೀಡಲಾಗಿದೆ. ಅದಕ್ಕಾಗಿ ಬಲಕ್ಕೆ ಕಾಣುವ ಮೂರು ಡಾಟ್‌ಗಳ ಮೆನು ಬಟನ್ ಸೆಲೆಕ್ಟ್ ಮಾಡಿರಿ. ಆನಂತರ ಕಾಣಿಸುವ ಆಯ್ಕೆಗಳ ಪಟ್ಟಿಯಲ್ಲಿ ಕ್ವಾಲಿಟಿ ಆಯ್ಕೆಯನ್ನು ಟ್ಯಾಪ್ ಮಾಡಿ ನಿಮಗೆ ಅಗತ್ಯವೆನಿಸುವ ಗುಣಮಟ್ಟದಲ್ಲಿ ಸೆಟ್ ಮಾಡಿ ವಿಡಿಯೊ ನೋಡಬಹುದಾಗಿದೆ.

ಡಾರ್ಕ್ ಥೀಮ್ ಆಯ್ಕೆ
ಸದ್ಯ ಹೆಚ್ಚು ಬಳಕೆಯಲ್ಲಿರುವ ಬಂದಿರುವ ಡಾರ್ಕ್ ಮೋಡ್ ಅಥವಾ ಡಾರ್ಕ್ ಥೀಮ್ ಆಯ್ಕೆಯನ್ನು ಯೂಟ್ಯೂಬ್‌ನಲ್ಲಿಯೂ ಕಾಣಬಹುದಾಗಿದೆ. ಡಾರ್ಕ್ ಥೀಮ್ ವಿಡಿಯೊ ವೀಕ್ಷಣೆಯನ್ನು ಮತ್ತಷ್ಟು ಸ್ಪಷ್ಟವಾಗಿ ಕಾಣಿಸುತ್ತದೆ ಮತ್ತು ಕಣ್ಣಿಗೂ ಒಳ್ಳೆಯದು. ಬಳಕೆದಾರರು ಯೂಟ್ಯೂಬನಲ್ಲಿ ಡಾರ್ಕ್ ಮೋಡ್ ಆನ್ ಮಾಡಲು ಯೂಟ್ಯೂಬ್ ಮೆನು > ಸೆಟ್ಟಿಂಗ್ ಸೆಲೆಕ್ಟ್ ಮಾಡಿ > ಜನರಲ್ ಆಯ್ಕೆ > ಡಾರ್ಕ್ ಥೀಮ್ ಫೀಚರ್ಸ್ ಆನ್ ಮಾಡಿಕೊಳ್ಳಬಹುದಾಗಿದೆ.

ಶಾರ್ಟ್‌ಕಟ್ ಕೀ ವರ್ಡ್ ಬಳಕೆ
ಕಂಪ್ಯೂಟರ್‌ನಲ್ಲಿ ಯೂಟ್ಯೂಬ್ ವೀಕ್ಷಿಸುತ್ತಿದ್ದರೇ ಕೇಲವು ಶಾರ್ಟ್‌ಕಟ್ ಕೀ ಬಳಸಿ ವಿಡಿಯೊ ನಿಯಂತ್ರಿಸುವ ಅವಕಾಶವಿದೆ. ವಿಡಿಯೊ ಫಾರ್ವರ್ಡ್ ಮಾಡಲು ಕ್ಯಾಪ್ಸ್ J ಕೀ ಬಳಕೆಯಾದರೇ, ಬ್ಯಾಕ್‌ವರ್ಡ್ ಮಾಡಲು ಕ್ಯಾಪ್ಸ್ L ಕೀ ನೆರವಾಗಲಿದೆ. ಹಾಗೆಯೇ ಕ್ಯಾಪ್ಸ್ K ಕೀ ಒತ್ತಿ ವಿಡಿಯೊ ನಿಲ್ಲಿಸಬಹುದು (pauses), ಮತ್ತು ಕ್ಯಾಪ್ಸ್ M ಪ್ರೆಸ್ ಮಾಡಿ ವಿಡಿಯೊದ ಆಡಿಯೊವನ್ನು ಮ್ಯೂಟ್ ಮಾಡಬಹುದಾಗಿದೆ.

ಫಾರ್ವರ್ಡ್ ಹಾಗೂ ಬ್ಯಾಕ್‌ವರ್ಡ್
ಯೂಟ್ಯೂಬ್ ವಿಡಿಯೊ ವೀಕ್ಷಿಸುವಾಗ ಫಾರ್ವರ್ಡ್ ಮತ್ತು ಬ್ಯಾಕ್‌ವರ್ಡ್ ಮಾಡಲು ಅವಕಾಶವಿದ್ದು, ಅದಕ್ಕಾಗಿ ಆಯ್ಕೆಗಳು ಇವೆ. ವಿಡಿಯೊವನ್ನು ಸುಮಾರು 10 ಸೆಕೆಂಡ್‌ಗೆ ಫಾರ್ವರ್ಡ್ ಮಾಡಲು ಪೇ ಆಗುತ್ತಿರುವ ವಿಡಿಯೊ ಡಿಸ್‌ಪ್ಲೇ ಬಲಕ್ಕೆ ಎರಡು ಟ್ಯಾಪ್ ಮಾಡಿರಿ. ಹಾಗೆಯೇ ಎಡಕ್ಕೆ ಡಬಲ್ ಟ್ಯಾಪ್ ಮಾಡಿದರೇ ವಿಡಿಯೊವು ಬ್ಯಾಕ್‌ವರ್ಡ್ ಆಗುತ್ತದೆ.

ಸ್ವೈಪ್ ಆಯ್ಕೆ
ಸ್ಮಾರ್ಟ್‌ಫೋನ್‌ನಲ್ಲಿ ಯೂಟ್ಯೂಬ್ ವಿಡಿಯೊ ವೀಕ್ಷಿಸುತ್ತಿರುವಾಗ ಸ್ವೈಪ್ ಆಯ್ಕೆಯನ್ನು ಬಳಸಬಹುದಾಗಿದೆ. ಈ ಆಯ್ಕೆಯಲ್ಲಿ ಬ್ಯಾಕ್ ಹೋಗದೆ, ಹಿಂದಿನ ವಿಡಿಯೊ ಮತ್ತು ಮುಂದಿನ ವಿಡಿಯೊ ನೋಡಲು ಅವಕಾಶವಿದೆ. ಡಿಸ್‌ಪ್ಲೇಯಲ್ಲಿಯೇ ಸ್ವೈಪ್ ಆಯ್ಕೆ ಬಳಸಬಹುದಾಗಿದ್ದು, ಲೆಫ್ಟ್ ಸ್ವೈಪ್ ಮಾಡಿದರೇ ಹಿಂದಿನ ವಿಡಯೊ ಮತ್ತೆ ಪ್ಲೇ ಆಗುತ್ತದೆ. ಹಾಗೆಯೇ ಬಲಕ್ಕೆ ಸ್ವೈಪ್ ಮಾಡಿದರೇ ಮುಂದಿನ ವಿಡಿಯೊ ಪ್ಲೇ ಆಗುತ್ತದೆ.


Click it and Unblock the Notifications








