ಸಂಗೀತ ಪ್ರೇಮಿಗಳಿಗಾಗಿ ಟಾಪ್‌ ಮ್ಯೂಸಿಕ್‌ ಆಪ್‌ಗಳು

By Suneel
|

ಇಂಟರ್ನೆಟ್‌ ಯುಗ ಪ್ರಾರಂಭವಾದಾಗಿನಿಂದಲೂ ಜನರು ವೀಡಿಯೋ ನೋಡಲು ಯೂಟ್ಯೂಬ್‌ ಅನ್ನು ಸ್ಟ್ರೀಮಿಂಗ್‌ಗೆ ಬಳಸುತ್ತಾರೆ. ಹಾಗೆ ಚಾಟ್‌ ಮಾಡಲು ಆಫ್‌ಲೈನ್‌ ಬದಲಾಗಿ ಆನ್‌ಲೈನ್ ಚಾಟ್‌ ಬಳಸುತ್ತಾರೆ. ಅದರಲ್ಲೂ ವಾಟ್ಸಾಪ್‌ ಬಂದ ಮೇಲಂತೂ ಚಾಟಿಂಗ್‌ ವೇದಿಕೆಯಲ್ಲಿ ಹೊಸ ಬದಲಾವಣೆಯೇ ಆಯಿತು. ಈ ಎರಡು ಮನರಂಜನೆ ವೇದಿಕೆಗಳು ನಮ್ಮನ್ನು ಕೆಲವೊಮ್ಮೆ ಉತ್ತಮ ಮನಸ್ಥಿತಿಗೆ ಖಂಡಿತ ಕರೆದುಕೊಂಡು ಹೋಗುವಲ್ಲಿ ಅನುತ್ತೀರ್ಣಗೊಳ್ಳುತ್ತವೆ.

ಓದಿರಿ:ಫೇಸ್‌ಬುಕ್‌ ಹೊಸ ವರ್ಶನ್ ಲಾಂಚ್‌ಗೆ ರೆಡಿ : ಕಡ್ಡಾಯವಾಗಿ ತಿಳಿಯಿರಿ

ಹಾಗಾದರೆ ನಮ್ಮ ಮನಸ್ಸಿನ ಬೇಸರವನ್ನು ಹೋಗಲಾಡಿಸುವ ವೇದಿಕೆ ಯಾವುದು ಅಂದ್ರೆ ಎಲ್ಲರೂ ಸಹ ಹೇಳುವುದು "ಸಂಗೀತ". ಮ್ಯೂಸಿಕ್‌ ಪದ ಕೇಳಿದರೆ ಒಂದು ರೀತಿ ಸ್ಫೂರ್ತಿ ಅಲ್ವಾ. ಹೌದು ರಿ, ಮ್ಯೂಸಿಕ್‌ಗೆ ಅಂತಹ ಒಂದು ಶಕ್ತಿ ಇದೆ. ಮನಸ್ಸಿನ ಬೇಸರ ನೀಗಿಸುವ ಜೊತೆಗೆ ನಾವು ಯಾವುದೇ ಚಿಂತೆಯಲ್ಲಿದ್ದರು ಸಂಗೀತ ಕೇಳಿದಾಕ್ಷಣ ಎಲ್ಲವನ್ನು ಪಕ್ಕಕ್ಕೆ ಸರಿಸಿ ಮನಸ್ಸಿನಲ್ಲಿ ಯಾರು ನೀಡಲಾಗದ ಹರ್ಷ ಪಡೆಯುತ್ತೇವೆ. ಈ ಮ್ಯೂಸಿಕ್‌ ಕೇಳಲು FM ಆನ್‌ ಮಾಡಿದರೆ ಜಾಹಿರಾತುಗಳ ಸುರಿಮಳೆ. ಹಾಗಾದ್ರೆ ಕೇವಲ ಮ್ಯೂಸಿಕ್‌ ಸೇವೆ ನೀಡುವ ವೆಬ್‌ಸೈಟ್‌ಗಳು ಇದ್ದಾವಾ ? ಎಂಬ ಪ್ರಶ್ನೆಗೆ ಖಂಡಿತ ಉತ್ತರ ಇದೆ.

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಸದಾ ಮ್ಯೂಸಿಕ್‌ಗಾಗಿ ಹಂಬಲಿಸುವ ಯುವಜನತೆಗೆ, ಸಂಗೀತ ಪ್ರೇಮಿಗಳಿಗಾಗಿ ಟಾಪ್‌ ಮ್ಯೂಸಿಕ್‌ ವೆಬ್‌ಸೈಟ್‌ ಮತ್ತು ಆಪ್‌ಗಳ ಬಗ್ಗೆ ಪರಿಚಯಿಸುತ್ತಿದೆ. ಅವುಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲೂ ಅತ್ಯುತ್ತಮವಾಗಿ ಬಳಸಬಹುದು.

ಸ್ಪುಟಿಫೈ (Spotify)

ಸ್ಪುಟಿಫೈ (Spotify)

ಯಾವುದೇ ಸಮಯದಲ್ಲೂ ನಿಮ್ಮ ಆಯ್ಕೆಯ ಮ್ಯೂಸಿಕ್‌ ಅನ್ನು ಫೋನ್‌, ಕಂಪ್ಯೂಟರ್ ಅಥವಾ ಟ್ಯಾಬ್ಲೆಟ್‌ನಲ್ಲಿ ಸ್ಪುಟಿಫೈ ಆಪ್‌ ಅಥವಾ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ.

ಸೌಂಡ್‌ಕ್ಲೌಡ್‌ (SoundCloud)

ಸೌಂಡ್‌ಕ್ಲೌಡ್‌ (SoundCloud)

ಸೌಂಡ್‌ಕ್ಲೌಡ್‌ ಪ್ರಪಂಚದಲ್ಲಿಯೇ ಮುಂಚೂಣಿಯಲ್ಲಿರುವ ಸಾಮಾಜಿಕ ಮ್ಯೂಸಿಕ್‌ ವೇದಿಕೆ. ಅಂದರೆ ಮ್ಯೂಸಿಕ್‌ ಕ್ರಿಯೇಟ್‌ ಮಾಡಿ ಎಲ್ಲರಿಗೂ ಶೇರ್‌ ಮಾಡುವಂತಹ ಹೊಸ ಹೊಸ ಸಂಗೀತಗಳು ದೊರೆಯುವ ವೆಬ್‌ಆಗಿದೆ. ಇದು ಆಪ್‌ ಸಹ ಆಗಿದೆ. ಇದನ್ನು ಆಂಡ್ರಾಯ್ಡ್‌ ಮತ್ತು ಐಫೋನ್‌ಗಳಲ್ಲಿ ಆಪ್‌ ಆಗಿ ಬಳಸಬಹುದಾಗಿದೆ.

 ಪಾಂಡೊರಾ (Pandora)

ಪಾಂಡೊರಾ (Pandora)

ಈ ಮ್ಯೂಸಿಕ್‌ ಸೈಟ್‌ನಲ್ಲಿ ಮನಸ್ಸಿಗೆ ಸಂಬಂಧ ಪಟ್ಟ ಹೃದಯವನ್ನು ಟಚ್‌ ಮಾಡುವಂತಹ ಸಂಗೀತಗಳನ್ನು ಅಪರಿಮಿತವಾಗಿ ಪಡೆಯಬಹುದಾಗಿದೆ. ನಿಮ್ಮ ನೆಚ್ಚಿನ ಸಿಂಗರ್‌ಗಳ ಹಾಡುಗಳನ್ನು ಸಹ ಪಡೆಯಬಹುದಾಗಿದೆ. ಇದು ಹಳೆಯ ಮತ್ತು ಹೊಸ ಹಾಡುಗಳನ್ನು ನಿಮಗೆ ಸರ್ಚ್‌ ಮಾಡಿ ಕೊಡುತ್ತದೆ.

 ಗೂಗಲ್‌ ಪ್ಲೇ ಮ್ಯೂಸಿಕ್‌ ಆಲ್‌ ಆಕ್ಸೆಸ್

ಗೂಗಲ್‌ ಪ್ಲೇ ಮ್ಯೂಸಿಕ್‌ ಆಲ್‌ ಆಕ್ಸೆಸ್

ಗೂಗಲ್‌ ಪ್ಲೇ ಮ್ಯೂಸಿಕ್ ನಿಮ್ಮ ಚಟುವಟಿಕೆಗೆ ಅನುಗುಣವಾಗಿ, ಮನಸ್ಥಿತಿಗೆ ಅನುಗುಣವಾಗಿ, ನೆಚ್ಚಿನ ಹಾಡುಗಾರರ ಹಾಡುಗಳನ್ನು ಸಹ ಉಚಿತವಾಗಿ ಆಕ್ಸೆಸ್‌ ನೀಡುತ್ತದೆ. ಗೂಗಲ್‌ ಇತ್ತೀಚೆಗೆ ಹಾಡುಗಳ ಆಧಾರದಲ್ಲಿ ರೇಡಿಯೋ ಸ್ಟೇಷನ್‌ ಪ್ರಾರಂಭಿಸಿದ್ದು ಡೌನ್‌ಲೋಡ್‌ ಮಾಡಿದಲ್ಲಿ ಇಂಟರ್ನೆಟ್‌ ಸಂಪರ್ಕ ಇಲ್ಲದಿದ್ದರೂ ಮ್ಯೂಸಿಕ್‌ ಕೇಳಬಹುದಾಗಿದೆ.

ಮೈಕ್ರೊಸಾಫ್ಟ್‌ ಗ್ರೂವ್‌ ಮ್ಯೂಸಿಕ್‌ (Microsoft Groove Music)

ಮೈಕ್ರೊಸಾಫ್ಟ್‌ ಗ್ರೂವ್‌ ಮ್ಯೂಸಿಕ್‌ (Microsoft Groove Music)

ಗ್ರೂವ್ ನಿಮ್ಮ ಮ್ಯೂಸಿಕ್‌ಗಳನ್ನು ಇನೆಂದಿಗಿಂತಲೂ ಸರಳವಾಗಿ ನಿರ್ವಹಣೆ ಮಾಡುತ್ತದೆ. ನಿಮ್ಮ ಎಲ್ಲಾ MP3ಗಳನ್ನು ಒಂದು ಡ್ರೈವ್‌ಗೆ ಅಪ್‌ಲೋಡ್‌ ಮಾಡಿ. ಗ್ರೂವ್‌ ಮ್ಯೂಸಿಕ್‌ ನಲ್ಲಿ ಜಗತ್ತಿನ ದೊಡ್ಡ ಮ್ಯೂಸಿಕ್‌ ಕೆಟಲಾಗ್‌ ಅನ್ನು ಸ್ಟ್ರೀಮ್ ಮತ್ತು ಡೌನ್‌ಲೋಡ್‌ ಮಾಡಬಹುದಾಗಿದೆ.

ಸ್ಲ್ಯಾಕರ್ ರೇಡಿಯೋ (Slacker Radio)

ಸ್ಲ್ಯಾಕರ್ ರೇಡಿಯೋ (Slacker Radio)

ಇದು ಸಂಪೂರ್ಣ ಮ್ಯೂಸಿಕ್‌ ನೀಡುವ ವೆಬ್‌ಸೈಟ್‌ ಆಗಿದ್ದು, ದಶಲಕ್ಷಗಟ್ಟಲೆ ಹಾಡುಗಳನ್ನು, ಪ್ರತಿಷ್ಟಿತ ಕಾರ್ಯಕ್ರಮಗಳ ಸ್ಟೇಷನ್‌ಗಳನ್ನು, ನ್ಯೂಸ್‌, ಕ್ರೀಡೆ ಮತ್ತು ಟಾಕ್‌ ಕಾರ್ಯಕ್ರಮಗಳನ್ನು ವೆಬ್‌ನಲ್ಲಿ ಹೊಂದಿದೆ. ಹಾಗು ಮೊಬೈಲ್‌ಗಳಿಗೂ ಸಹ ಸೇವೆ ನೀಡುತ್ತದೆ. ಇದರ ಸೇವೆ ಉಚಿತ ಹಾಗು ಚಂದಾದಾರರ ಆಧಾರಿತವಾಗಿದೆ.

ಮಿಕ್ಸ್‌ಕ್ಲೌಡ್‌ (Mixcloud)

ಮಿಕ್ಸ್‌ಕ್ಲೌಡ್‌ (Mixcloud)

ಮಿಕ್ಸ್‌ಕ್ಲೌಡ್‌ ನೆಚ್ಚಿನ ಸಾಂಗ್‌ಗಳ ಸ್ಟ್ರೀಮಿಂಗ್ ಸೇವೆ ಜೊತೆಗೆ ಡಿಜೆ ಮಿಕ್ಸೆಸ್‌ ಸಾಂಗ್‌ಗಳನ್ನು ಸಹ ಆಕ್ಸೆಸ್‌ ನೀಡುತ್ತದೆ.

 ರಾಪ್ಸೊಡಿ (Rhapsody)

ರಾಪ್ಸೊಡಿ (Rhapsody)

ರಾಪ್ಸೊಡಿ ಮ್ಯೂಸಿಕ್ ಸ್ಟ್ರೀಮಿಂಗ್‌ ಸೇವೆಯಲ್ಲಿ ಮುಂಚೂಣಿಯಲ್ಲಿರುವ ವೆಬ್‌ ಆಗಿದೆ. ಇದು ಜಾಹಿರಾತು ಉಚಿತವಾಗಿ 32 ದಶಲಕ್ಷ ಹಾಡುಗಳನ್ನು ನೀಡುತ್ತದೆ. ಇದು ವೀಡಿಯೋ ಮತ್ತು ಹಾಡುಗಳ ರಿವೀವ್‌ಅನ್ನು ಒಮ್ಮೆಲೇ ನೀಡುವುದಲ್ಲದೇ ರೇಡಿಯೋ ಸ್ಟೇಷನ್‌ ಅನ್ನು ನೀಡುತ್ತದೆ.

ಟ್ಯೂನ್‌ಇನ್‌ ರೇಡಿಯೋ (TuneIn Radio)

ಟ್ಯೂನ್‌ಇನ್‌ ರೇಡಿಯೋ (TuneIn Radio)

ಟ್ಯೂನ್‌ಇನ್‌ ಜನರಿಗೆ ನಮ್ಮ ಇಷ್ಟದ ಮ್ಯೂಸಿಕ್‌ ಅನ್ನು ಫಾಲೋ ಮುಖಾಂತರ ನೆಚ್ಚಿನ ಹಾಡುಗಳನ್ನು ನೀಡುತ್ತದೆ. 100,000 ರಿಯಲ್‌ ರೇಡಿಯೋ ಸ್ಟೇಷನ್‌ಗಳನ್ನು ಕೇಳುಗರಿಗೆ ನೀಡುತ್ತದೆ. ಅಲ್ಲದೇ ನಾಲ್ಕಕ್ಕಿಂತ ಹೆಚ್ಚು ಪೋಡ್‌ಕಾಸ್ಟ್‌ ಸ್ಟ್ರೀಮಿಂಗ್‌ಗಳನ್ನು ಪ್ರತಿ ಖಂಡಗಳಲ್ಲು ಹೊಂದಿದೆ.

ಸಾವ್ನ್ (Saavn)

ಸಾವ್ನ್ (Saavn)

ಸಾವ್ನ್‌, ಬಳಕೆದಾರರಿಗೆ ಮ್ಯೂಸಿಕ್‌ ಕೇಳಲು, ಶೇರ್‌ ಮಾಡಲು, ಸ್ಟ್ರೀಮಿಂಗ್ ಮಾಡಲು ಅವಕಾಶ ನೀಡಿದೆ. ಮ್ಯೂಸಿಕ್‌ ಅನ್ನು ಭಾರತ ಮತ್ತು ಪ್ರಪಂಚದಾದ್ಯಂತ ಸಹ ಶೇರ್‌ ಮಾಡುವ ಅವಕಾಶ ನೀಡುತ್ತದೆ.

Best Mobiles in India

English summary
Top 10 Best Music Streaming Sites and Apps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X