ಫೇಸ್‌ಬುಕ್‌ ಹೊಸ ವರ್ಶನ್ ಲಾಂಚ್‌ಗೆ ರೆಡಿ : ಕಡ್ಡಾಯವಾಗಿ ತಿಳಿಯಿರಿ

By Suneel
|

ಒಂದು ವರ್ಷ ಕಾಲ ಪ್ರಾಯೋಗಿಕ ಪರೀಕ್ಷೆ ನೆಡೆಸಿ, ಫೇಸ್‌ಬುಕ್‌ ಈಗ ತನ್ನ ಸಾಮಾಜಿಕ ಜಾಲತಾಣದ ಹೊಸ ಪ್ರೋಫೆಷನಲ್ ವರ್ಸನ್‌ "ಫೇಸ್‌ಬುಕ್‌ ಅಟ್‌ ವರ್ಕ್‌" ಅನ್ನು ಲಾಂಚ್‌ ಮಾಡುವ ನಿರೀಕ್ಷೆಯಲ್ಲಿದೆ.

ಓದಿರಿ:ಫೇಸ್‌ಬುಕ್‌, ವಾಟ್ಸಾಪ್‌ ನಮ್ಮವರಿಗೆ ಅಚ್ಚುಮೆಚ್ಚು ಏಕೆ ?

ಫೇಸ್‌ಬುಕ್‌ನ ಹೊಸ ಸೇವೆಯು ದೈನಂದಿನ ಉದ್ಯೋಗಿಗಳ ಸಹಯೋಗದ ಗುರಿಹೊಂದಿದೆ. ಪ್ರಸ್ತುತ ಇರುವ ಸಾಮಾಜಿಕ ಜಾಲತಾಣಕ್ಕೆ ನ್ಯೂಸ್ ಫೀಡ್, ಚಾಟ್‌ ಸೇವೆಗಳಲ್ಲಿ ಹೋಲಿಕೆ ಇದೆ.ಆದರೆ "ಫೇಸ್‌ಬುಕ್‌ ಅಟ್ ವರ್ಕ್‌" ಬಳಕೆದಾರರು ಪ್ರಸ್ತುತದಲ್ಲಿರುವ ಫೇಸ್‌ಬುಕ್‌ ಪ್ರೊಫೈಲ್‌ಗಿಂತ ವಿಶೇಷ ಪ್ರೊಫೈಲ್‌ ಪಡೆಯಲಿದ್ದಾರೆ ಎನ್ನಲಾಗಿದೆ. ಹಾಗಾದರೆ ಇದರ ಹೊಸ ಫೀಚರ್ ಏನಿರುತ್ತೇ ಹಾಗೂ ವಿಶೇಷತೆ ಏನು ಎಂಬುದನ್ನು ಲೇಖನದ ಸ್ಲೈಡರ್‌ಗಳಲ್ಲಿ ಓದಿ.

 ಫೇಸ್‌ಬುಕ್‌ ಅಟ್‌ ವರ್ಕ್‌

ಫೇಸ್‌ಬುಕ್‌ ಅಟ್‌ ವರ್ಕ್‌

"ಫೇಸ್‌ಬುಕ್‌ ಅಟ್‌ ವರ್ಕ್‌" ಫೇಸ್‌ಬುಕ್‌ನ ಹೊಸ ವರ್ಸನ್‌ ಆಗಿದ್ದು, ಇದು ಕಾರ್ಯನಿರತರಾಗಿರುವ ಉದ್ಯೋಗಿಗಳು ಬಳಕೆ ಮಾಡಲು ಅಭಿವೃದ್ದಿ ಪಡಿಸಿರುವ ಹೊಸ ವರ್ಸನ್‌ ಆಗಿದೆ. ಫೇಸ್‌ಬುಕ್‌ ಇದನ್ನು ಲಾಂಚ್‌ ಮಾಡುವ ನಿರೀಕ್ಷೆಯಲ್ಲಿದೆ.

 ಉದ್ಯೋಗಿಗಳು ಪ್ರತ್ಯೇಕ ಲಾಗಿನ್‌ ಪಡೆಯಬಹುದು

ಉದ್ಯೋಗಿಗಳು ಪ್ರತ್ಯೇಕ ಲಾಗಿನ್‌ ಪಡೆಯಬಹುದು

ಉದ್ಯೋಗಿಗಳು ಪ್ರತ್ಯೇಕ ಲಾಗಿನ್‌ ಅನ್ನು ವರ್ಕ್‌ ಖಾತೆಯಾಗಿ ಪಡೆಯಬಹುದಾಗಿದೆ. ಅಲ್ಲದೇ ಈ ಖಾತೆಯನ್ನು ಇತರರ ಪ್ರೊಫೈಲ್‌ಗಳಿಗೆ ಒಂದೇ ಸ್ಥಳದಲ್ಲಿ ಬಳಕೆ ಮಾಡಲು ಆಕ್ಸೆಸ್ ನೀಡಬಹುದಾಗಿದೆ.

 ಸಾಮಾಜಿಕ ಉದ್ಯಮ  ಜಾಲತಾಣಕ್ಕೆ ನೇರ ಸಂಪರ್ಕ

ಸಾಮಾಜಿಕ ಉದ್ಯಮ ಜಾಲತಾಣಕ್ಕೆ ನೇರ ಸಂಪರ್ಕ

ಫೇಸ್‌ಬುಕ್‌ನ ಹೊಸ ವರ್ಸನ್‌ ಇತರ ಸಾಮಾಜಿಕ ಉದ್ಯಮಗಳ ಜಾಲತಾಣಕ್ಕೆ ನೇರ ಸಂಪರ್ಕ ನೀಡುತ್ತದೆ. ಉದಾಹರಣೆಗೆ Yammer, Slack, Convo, Socialcast.

ಫೇಸ್‌ಬುಕ್‌ ಅಟ್‌ ವರ್ಕ್‌ ಕಾರ್ಯ ಹೇಗೆ ?

ಫೇಸ್‌ಬುಕ್‌ ಅಟ್‌ ವರ್ಕ್‌ ಕಾರ್ಯ ಹೇಗೆ ?

ಬಳಕೆದಾರರು ತಮ್ಮ ಕೆಲಸವನ್ನು ಇತರರಿಗೆ ಲಿಂಕ್‌ ಮಾಡಬಹುದಾಗಿದ್ದು, ಒಂದು ರೀತಿಯಲ್ಲಿ ಗ್ರೂಪ್‌ ಮತ್ತು ಪಬ್ಲಿಕ್ ಪ್ರೊಫೈಲ್‌ ರೀತಿಯಲ್ಲಿದೆ. ಇದನ್ನು ಆಂಡ್ರಾಯ್ಡ್ ಮತ್ತು ಐಓಎಸ್‌ ಮೊಬೈಲ್‌ನಲ್ಲೂ ಬಳಕೆ ಮಾಡಬಹುದಾಗಿದ್ದು, ಪ್ರತ್ಯೇಕವಾಗಿ ಇನ್ಸ್ಟಾಲ್‌ ಮಾಡಬೇಕಾಗಿದೆ.

ವ್ಯವಸ್ಥೆಗೊಳಿಸುವುದು ಹೇಗೆ?

ವ್ಯವಸ್ಥೆಗೊಳಿಸುವುದು ಹೇಗೆ?

ನಿಮ್ಮ ಕಂಪನಿ ಫೇಸ್‌ಬುಕ್‌ ಅಟ್‌ ವರ್ಕ್‌ ಬಳಕೆ ಮಾಡುತ್ತಿದ್ದಲ್ಲಿ ನೀವು ಸ್ವೀಕರಿಸಿದ ಇಮೇಲ್‌ ಲಿಂಕ್‌ನಿಂದ ಖಾತೆ ಸೆಟ್‌ ಮಾಡಬಹುದಾಗಿದೆ. ಅಥವಾ
ಸೆಟ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ
ಉದಾಹರಣೆ ನಿಮ್ಮ ಕಂಪ್ಯೂಟರ್‌ನಲ್ಲಿ :company.facebook.com

ಫೇಸ್‌ಬುಕ್‌ ಅಟ್‌ ವರ್ಕ್‌

ಫೇಸ್‌ಬುಕ್‌ ಅಟ್‌ ವರ್ಕ್‌

ಇದು ವಯಕ್ತಿಕ ಗುರುತಿನ ಹಲವು ಫೀಚರ್‌ಗಳನ್ನು ಹೊಂದಿರುತ್ತದೆ. ಆದರೆ ಕಂಪನಿ ಇದನ್ನು ಡಿಸೇಬಲ್‌ ಮಾಡಿದರೆ ಇದನ್ನು ಬಳಕೆ ಮಾಡಲು ಸಾಧ್ಯವಿಲ್ಲ.

ಬೆಟಾ ಪರೀಕ್ಷೆ

ಬೆಟಾ ಪರೀಕ್ಷೆ

ಫೇಸ್‌ಬುಕ್‌ ಅಟ್‌ ವರ್ಕ್‌ ಅನ್ನು 2015 ರ ಜನವರಿ ಇಂದ ಬೀಟಾ ಪರೀಕ್ಷೆ ನೆಡೆಸಿದ್ದು, ಇದನ್ನು 300 ಕಂಪನಿಗಳು ಬಳಸಿವೆ.

 ಬೆಲೆ

ಬೆಲೆ

ಸಂಸ್ಥೆಯು ಇದುವರೆಗೆ ಯಾವುದೇ ರೀತಿಯ ಬೆಲೆ ಬಗ್ಗೆ ಮಾಹಿತಿ ತಿಳಿಸಿಲ್ಲ. ಆದರೆ ಇತರ ಆಪ್‌ಗಳಂತೆ ಬೆಲೆ ಹೊಂದಲಿದೆ ಎನ್ನಲಾಗಿದೆ.

Best Mobiles in India

English summary
After spending a years in testing, Facebook is expected to launch its professional version of its social network called "Facebook at Work.".

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X